Shivamogga DCC Bank Recruitment 2022 : 98 ಕ್ಲರ್ಕ್, ಅಟೆಂಡರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಗಮದಲ್ಲಿ 98 ಕಿರಿಯ ಸಹಾಯಕರು/ಕ್ಷೇತ್ರಾಧಿಕಾರಿಗಳು, ವಾಹನ ಚಾಲಕರು, ಅಟೆಂಡರ್ಸ್ ಮತ್ತು ಜಲಗಾರರು ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ನೇಮಕಾತಿ ಅಧಿಸೂಚನೆಯನ್ನು ಓದಬಹುದು.

ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಗಮದಲ್ಲಿ 98 ಹುದ್ದೆಗಳ ನೇಮಕಾತಿ

ಅರ್ಹ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಏಪ್ರಿಲ್ 22,2022 ರಿಂದ ಮೇ 16,2022ರ ಸಂಜೆ 5 ಗಂಟೆಯೊಳಗೆ ಅರ್ಜಿಯನ್ನು ಹಾಕಬಹುದು. ನೇಮಕಾತಿ ಬಗೆಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ಮುಂದೆ ಓದಿ.

Shivamogga DCC Bank ನೇಮಕಾತಿ 2022 ವಿದ್ಯಾರ್ಹತೆ :

Shivamogga DCC Bank ನೇಮಕಾತಿ 2022 ವಿದ್ಯಾರ್ಹತೆ :

ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಗಮ ನೇಮಕಾತಿಯ ಶೀಘ್ರಲಿಪಿಗಾರರು ಹುದ್ದೆಗಳಿಗೆ ಪದವಿ ಹಾಗೂ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಏರ್ಪಡಿಸುವ ಇಂಗ್ಲೀಷ್/ಕನ್ನಡ ಬೆರಳಚ್ಚು ಪರೀಕ್ಷೆಯ ಮತ್ತು ಶೀಘ್ರಲಿಪಿ ಪರೀಕ್ಷೆಯ ಪ್ರೌಢ ದರ್ಜೆ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರತಕ್ಕದ್ದು. ಕಂಪ್ಯೂಟರ್ ನಲ್ಲಿ ಹೆಚ್ಚಿನ ಜ್ಞಾನ ಹೊಂದಿದವರಿಗೆ ಆದ್ಯತೆ ನೀಡಲಾಗುವುದು. ಕಿರಿಯ ಸಹಾಯಕರು/ಕ್ಷೇತ್ರಾಧಿಕಾರಿಗಳು ಹುದ್ದೆಗಳಿಗೆ ಪದವಿ ಹಾಗೂ ಕಂಪ್ಯೂಟರ್, ವಾಹನ ಚಾಲಕರು ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಹಾಗೂ ಡ್ರೈವಿಂಗ್ ಲೈಸೆನ್ಸ್, ಅಟೆಂಡರ್ಸ್ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಮತ್ತು ಜಲಗಾರರು ಹುದ್ದೆಗಳಿಗೆ ಕನ್ನಡ ಭಾಷೆಯಲ್ಲಿ 4ನೇ ತರಗತಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್ ಅಥವಾ ಸಂಸ್ಥೆಯಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

Shivamogga DCC Bank ನೇಮಕಾತಿ 2022 ವಯೋಮಿತಿ :

Shivamogga DCC Bank ನೇಮಕಾತಿ 2022 ವಯೋಮಿತಿ :

ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಗಮ ನೇಮಕಾತಿಯ ಕಿರಿಯ ಸಹಾಯಕರು/ಕ್ಷೇತ್ರಾಧಿಕಾರಿಗಳು, ವಾಹನ ಚಾಲಕರು, ಅಟೆಂಡರ್ಸ್ ಮತ್ತು ಜಲಗಾರರು ಹುದ್ದೆಗಳಿಗೆ ಕನಿಷ್ಟ 18 ರಿಂದ ಗರಿಷ್ಟ 35 ವರ್ಷದೊಳಗಿನ ಸಾಮಾನ್ಯ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು. ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ. ವಿಧವೆಯರಿಗೆ ವಯೋಮಿತಿಯಲ್ಲಿ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.

Shivamogga DCC Bank ನೇಮಕಾತಿ 2022 ವೇತನ :

Shivamogga DCC Bank ನೇಮಕಾತಿ 2022 ವೇತನ :

ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಗಮ ನೇಮಕಾತಿಯ ಕಿರಿಯ ಸಹಾಯಕರು/ಕ್ಷೇತ್ರಾಧಿಕಾರಿಗಳು, ವಾಹನ ಚಾಲಕರು, ಅಟೆಂಡರ್ಸ್ ಮತ್ತು ಜಲಗಾರರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 17,000/- ರಿಂದ 62,600/-ರೂ ವರೆಗೆ ವೇತನವನ್ನು ನೀಡಲಾಗುವುದು.

Shivamogga DCC Bank ನೇಮಕಾತಿ 2022 ಆಯ್ಕೆ ಪ್ರಕ್ರಿಯೆ :

Shivamogga DCC Bank ನೇಮಕಾತಿ 2022 ಆಯ್ಕೆ ಪ್ರಕ್ರಿಯೆ :

ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಗಮ ನೇಮಕಾತಿಯ ಕಿರಿಯ ಸಹಾಯಕರು/ಕ್ಷೇತ್ರಾಧಿಕಾರಿಗಳು, ವಾಹನ ಚಾಲಕರು, ಅಟೆಂಡರ್ಸ್ ಮತ್ತು ಜಲಗಾರರು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅರ್ಹತಾ ಪರೀಕ್ಷೆಯಲ್ಲಿ ಗಳಿಸಿದ ಶೇಕಡಾವಾರು ಅಂಕಗಳ ಆಧಾರದ ಮೇಲೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ತದನಂತರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Shivamogga DCC Bank ನೇಮಕಾತಿ 2022 ಅರ್ಜಿ ಶುಲ್ಕ :

Shivamogga DCC Bank ನೇಮಕಾತಿ 2022 ಅರ್ಜಿ ಶುಲ್ಕ :

ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಗಮ ನೇಮಕಾತಿಯ ಕಿರಿಯ ಸಹಾಯಕರು/ಕ್ಷೇತ್ರಾಧಿಕಾರಿಗಳು, ವಾಹನ ಚಾಲಕರು, ಅಟೆಂಡರ್ಸ್ ಮತ್ತು ಜಲಗಾರರು ಹುದ್ದೆಗಳಿಗೆ 900/-ರೂ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳು 450/-ರೂ ಅನ್ನು ಡಿಡಿ/ಪೇ ಆರ್ಡರ್ ಮೂಲಕ ಪಾವತಿಸಬೇಕಿರುತ್ತದೆ.

Shivamogga DCC Bank ನೇಮಕಾತಿ 2022 ಅರ್ಜಿ ಸಲ್ಲಿಕೆ :

Shivamogga DCC Bank ನೇಮಕಾತಿ 2022 ಅರ್ಜಿ ಸಲ್ಲಿಕೆ :

ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಗಮ ನೇಮಕಾತಿಯ ಕಿರಿಯ ಸಹಾಯಕರು/ಕ್ಷೇತ್ರಾಧಿಕಾರಿಗಳು, ವಾಹನ ಚಾಲಕರು, ಅಟೆಂಡರ್ಸ್ ಮತ್ತು ಜಲಗಾರರು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ http://www.shimogadccbank.com/ ಗೆ ಭೇಟಿ ನೀಡಿ. ನೇಮಕಾತಿ ಅಧಿಸೂಚನೆಯನ್ನು ಓದಿಕೊಂಡು ನಂತರ ನಿಗದಿತ ಅರ್ಜಿ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸುವ ಮೂಲಕ ಏಪ್ರಿಲ್ 22,2022 ರಿಂದ ಮೇ 16,2022ರ ಸಂಜೆ ೫:೩೦ರೊಳಗೆ ಕಚೇರಿಗೆ ಅರ್ಜಿಯನ್ನು ತಲುಪಿಸಬೇಕಿರುತ್ತದೆ.

ಕಚೇರಿ ವಿಳಾಸ :
ಮುಖ್ಯ ಕಾರ್ಯನಿರ್ವಾಹಕರು ಹಾಗೂ ಸದಸ್ಯ ಕಾರ್ಯದರ್ಶಿ,
ಸಿಬ್ಬಂದಿ ನೇಮಕಾತಿ ಸಮಿತಿ,
ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ,
ಬಾಲರಾಜ್ ಅರಸ್ ರಸ್ತೆ,
ಪಿ.ಬಿ. ನಂ.62,
ಶಿವಮೊಗ್ಗ-577 201.

ಅಭ್ಯರ್ಥಿಗಳು ನೇಮಕಾತಿ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

More News  

For Quick Alerts
ALLOW NOTIFICATIONS  
For Daily Alerts

English summary
Shivamogga DCC bank recruitment 2022 notification has been released for 98 clerk, attender and various posts. Interested candidates can apply before May 16.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+