ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ನೇಮಕಾತಿ ಅಧಿಸೂಚನೆ 2021 ಅನ್ನು ಓದಿಕೊಂಡು ಅರ್ಜಿಯನ್ನು ಹಾಕಬಹಬುದು.
ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಸೈಂಟಿಸ್ಟ್-ಬಿ, ಲ್ಯಾಬ್ ಟೆಕ್ನೀಶಿಯನ್, ಡಿಇಒ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. ಆಸಕ್ತರು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ನೇಮಕಾತಿ ಅಧಿಸೂಚನೆಯನ್ನು ಓದಿಕೊಂಡು ಜೊತೆಗೆ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಕಚೇರಿಗೆ ಜನವರಿ 15,2022ರೊಳಗೆ ಅರ್ಜಿಯನ್ನು ತಲುಪಿಸಬೇಕಿರುತ್ತದೆ. ನೇಮಕಾತಿ ಬಗೆಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ಮುಂದೆ ಓದಿ.

SIMS Shivamogga ನೇಮಕಾತಿ 2021 ವಿದ್ಯಾರ್ಹತೆ:
ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನೇಮಕಾತಿಯ ಸೈಂಟಿಸ್ಟ್-ಬಿ, ಲ್ಯಾಬ್ ಟೆಕ್ನೀಶಿಯನ್, ಡಿಇಒ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಎಂಡಿ/ಎಂಎಸ್/ಡಿಎನ್‌ಬಿ/ಎಂಡಿಎಸ್/ಎಂ.ವಿ.ಎಸ್ಸಿ ಮತ್ತು ಎಹೆಚ್, ಬಿ.ಎಸ್ಸಿ, ಪದವಿ, ಮೆಟ್ರಿಕ್ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹೊಂದಿರಬೇಕು.
SIMS Shivamogga ನೇಮಕಾತಿ 2021 ಖಾಲಿ ಹುದ್ದೆಗಳ ವಿವರ:
ಸೈಂಟಿಸ್ಟ್-ಬಿ - 1 ಹುದ್ದೆ
ಲ್ಯಾಬ್ ಟೆಕ್ನೀಶಿಯನ್ - 1 ಹುದ್ದೆ
ಡಾಟಾ ಎಂಟ್ರಿ ಆಪರೇಟರ್ - 1 ಹುದ್ದೆ
ಮಲ್ಟಿ ಟಾಸ್ಕಿಂಗ್ ಸ್ಟಾಫ್ - 1 ಹುದ್ದೆ
ಒಟ್ಟು 4 ಹುದ್ದೆಗಳು
SIMS Shivamogga ನೇಮಕಾತಿ 2021 ವಯೋಮಿತಿ :
ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನೇಮಕಾತಿಯ ಸೈಂಟಿಸ್ಟ್-ಬಿ, ಲ್ಯಾಬ್ ಟೆಕ್ನೀಶಿಯನ್, ಡಿಇಒ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಗರಿಷ್ಟ ೩೫ ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.
SIMS Shivamogga ನೇಮಕಾತಿ 2021 ಆಯ್ಕೆ ಪ್ರಕ್ರಿಯೆ:
ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನೇಮಕಾತಿಯ ಸೈಂಟಿಸ್ಟ್-ಬಿ, ಲ್ಯಾಬ್ ಟೆಕ್ನೀಶಿಯನ್, ಡಿಇಒ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ ಎಂದು ನೇಮಕಾತಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
SIMS Shivamogga ನೇಮಕಾತಿ 2021 ವೇತನ :
ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನೇಮಕಾತಿಯ ಸೈಂಟಿಸ್ಟ್-ಬಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 56,000/-ರೂ, ಲ್ಯಾಬ್ ಟೆಕ್ನೀಶಿಯನ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 20,000/-ರೂ, ಡಿಇಒ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 20,000/-ರೂ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 18,000/- ರೂ ವೇತನವನ್ನು ನೀಡಲಾಗುವುದು.
SIMS Shivamogga ನೇಮಕಾತಿ 2021 ಅರ್ಜಿ ಶುಲ್ಕ :
ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನೇಮಕಾತಿಯ ಸೈಂಟಿಸ್ಟ್-ಬಿ, ಲ್ಯಾಬ್ ಟೆಕ್ನೀಶಿಯನ್, ಡಿಇಒ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು 1000/-ರೂ ಅನ್ನು ಡಿ.ಡಿ ಮೂಲಕ ಪಾವತಿಸಬೇಕಿರುತ್ತದೆ.
SIMS Shivamogga ನೇಮಕಾತಿ 2021 ಅರ್ಜಿ ಸಲ್ಲಿಕೆ :
ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನೇಮಕಾತಿಯ ಸೈಂಟಿಸ್ಟ್-ಬಿ, ಲ್ಯಾಬ್ ಟೆಕ್ನೀಶಿಯನ್, ಡಿಇಒ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ https://sims.karnataka.gov.in/ ಗೆ ಭೇಟಿ ನೀಡಿ. ಅಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಮಾಹಿತಿಯನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿಗೆ ಜನವರಿ 15,2022ರ ಸಂಜೆ 4 ಗಂಟೆಯೊಳಗೆ ಅರ್ಜಿಯನ್ನು ತಲುಪಿಸಬಹುದು. ಅರ್ಜಿಯನ್ನು ತಲುಪಿಸುವಾಗ ಲಕೋಟೆಯ ಮೇಲೆ ಹುದ್ದೆಯ ಹೆಸರನ್ನು ನಮೂದಿಸತಕ್ಕದ್ದು.
ಕಚೇರಿ ವಿಳಾಸ:
ನಿರ್ದೇಶಕರು ಮತ್ತು ಡೀನ್ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ,
ಸಾಗರ ರಸ್ತೆ,
ಶಿವಮೊಗ್ಗ-577201
ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications











