ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಸಶಸ್ತ್ರ ಸೀಮಾ ಬಲ (SSB) ನೇಮಕಾತಿ ಅಧಿಸೂಚನೆ 2021 ಅನ್ನು ಬಿಡುಗಡೆ ಮಾಡಿದೆ. ಎಸ್‌ಎಸ್‌ಬಿಯಲ್ಲಿ ಗ್ರೂಪ್ ಬಿ ಯ 22 (ಇಪ್ಪತ್ತೆರಡು ) ಸಬ್ ಇನ್‌ಸ್ಪೆಕ್ಟರ್ (ಆರ್‌ಎಂಆರ್) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ http://www.ssbrectt.gov.in/ ಗೆ ಭೇಟಿ ನೀಡಿ. ಅಲ್ಲಿ ನೀಡಲಾಗಿರುವ ಅಧಿಸೂಚನೆಯನ್ನು ಓದಬಹುದು. ತದನಂತರ ಭಾರತದೆಲ್ಲೆಡೆ ಕೆಲಸ ಮಾಡಲು ಇಚ್ಚಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಪ್ರಕ್ರಿಯೆಯು ಅಕ್ಟೋಬರ್ 11,2021 ರಿಂದ ಪ್ರಾರಂಭವಾಗಿ ಡಿಸೆಂಬರ್ 09,2021 ರಂದು ಮುಕ್ತಾಯವಾಗಲಿದೆ.
SSB ಗ್ರೂಪ್ ಬಿ ನೇಮಕಾತಿ 2021 ವಿದ್ಯಾರ್ಹತೆ :
ಸಶಸ್ತ್ರ ಸೀಮಾ ಬಲ (SSB) ನೇಮಕಾತಿಯ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶದ ಪೊಲೀಸ್ ಸಂಸ್ಥೆಗಳ ಅಧಿಕಾರಿಗಳಾಗಿರಬೇಕು. ಪೋಷಕ ವರ್ಗ ಅಥವಾ ಇಲಾಖೆಯಲ್ಲಿ ನಿಯಮಿತ ಪ್ರಮಾಣದಲ್ಲಿ ಸದೃಶ ಹುದ್ದೆಯನ್ನು ಹೊಂದಿರಬೇಕು ಅಥವಾ ಎಆರ್ ಆರ್ಮ್ಡ್ ಫೋರ್ಸ್‌ನಲ್ಲಿ ಎಸ್‌ಐಗೆ ಸಮಾನ ಶ್ರೇಣಿ ಅಥವಾ ಸಮಾನತೆಯನ್ನು ಹೊಂದಿರಬೇಕು ಎಂದು ಎಸ್‌ಎಸ್‌ಬಿ ನೇಮಕಾತಿ ಅಧಿಸೂಚನೆ 2021ರಲ್ಲಿ ತಿಳಿಸಲಾಗಿದೆ.
SSB ಗ್ರೂಪ್ ಬಿ ನೇಮಕಾತಿ 2021 ವಯೋಮಿತಿ :
ಸಶಸ್ತ್ರ ಸೀಮಾ ಬಲ (SSB) ನೇಮಕಾತಿಯ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಗರಿಷ್ಟ 52 ವರ್ಷ ವಯೋಮಿತಿಯೊಳಗಿರಬೇಕು.
SSB ಗ್ರೂಪ್ ಬಿ ನೇಮಕಾತಿ 2021 ವೇತನ :
ಸಶಸ್ತ್ರ ಸೀಮಾ ಬಲ (SSB) ನೇಮಕಾತಿಯ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 35,400/- ರಿಂದ 1,12,400/-ರೂಗಳ ವರೆಗೆ ವೇತನವನ್ನು ನೀಡಲಾಗುವುದು.
SSB ಗ್ರೂಪ್ ಬಿ ನೇಮಕಾತಿ 2021 ಆಯ್ಕೆ ಪ್ರಕ್ರಿಯೆ :
ಸಶಸ್ತ್ರ ಸೀಮಾ ಬಲ (SSB) ನೇಮಕಾತಿಯ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನಿಯೋಜನೆ/ಮರು ಉದ್ಯೋಗ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ಎಂದು ನೇಮಕಾತಿ ಅಧಿಸೂಚನೆಯಲ್ಲಿ ವಿವರಿಸಲಾಗಿದೆ.
SSB ಗ್ರೂಪ್ ಬಿ ನೇಮಕಾತಿ 2021 ಅರ್ಜಿ ಶುಲ್ಕ :
ಸಶಸ್ತ್ರ ಸೀಮಾ ಬಲ (SSB) ನೇಮಕಾತಿಯ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕಿರುತ್ತದೆ. ಅರ್ಜಿ ಶುಲ್ಕದ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲು ಅಧಿಸೂಚನೆಯನ್ನು ಓದಬಹುದು.
SSB ಗ್ರೂಪ್ ಬಿ ನೇಮಕಾತಿ 2021 ಅರ್ಜಿ ಸಲ್ಲಿಕೆ :
ಸಶಸ್ತ್ರ ಸೀಮಾ ಬಲ (SSB) ನೇಮಕಾತಿಯ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ http://www.ssbrectt.gov.in/ ಗೆ ಭೇಟಿ ನೀಡಿ. ಅಲ್ಲಿ ನೀಡಲಾಗಿರುವ ನೇಮಕಾತಿ ಅಧಿಸೂಚನೆಯನ್ನು ಓದಿಕೊಂಡು ನಂತರ ನಿಗದಿತ ಅರ್ಜಿ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿಗೆ ಡಿಸೆಂಬರ್ 9,2021ರೊಳಗೆ ಅರ್ಜಿಯನ್ನು ತಲುಪಿಸಬಹುದು.
ಕಚೇರಿ ವಿಳಾಸ:
Ar the Commandant (Pers-II),
Director, Seema Bal,
East Block V, R. K. Puram
ಅಭ್ಯರ್ಥಿಗಳು ಎಸ್‌ಎಸ್‌ಬಿ ನೇಮಕಾತಿಯ ಪ್ರಕಟಣೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications











