ಎಸ್ ಎಸ್ ಸಿ:ಕಾಂಬೈನ್ಡ್ ಗ್ರಾಜುಯೇಟ್ ಲೆವೆಲ್ ಪರೀಕ್ಷೆ ಮೂಲಕ ನೇಮಕಾತಿ

ಕೇಂದ್ರ ಸರ್ಕಾರದ ವಿವಿಧ ಇಲಾಖೆ, ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗವು (ಎಸ್ ಎಸ್ ಸಿ) ನಡೆಸುವ ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ (ಸಿಜಿಎಲ್) ನ ಅಧಿಸೂಚನೆ ಹೊರಡಿಸಲಾಗಿದೆ.

 

ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಪದವಿ ಪಡೆದವರು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು ಜೂನ್ 16 ರ ಒಳಗೆ ಆನ್-ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ

ಅಸಿಸ್ಟೆಂಟ್ ಸೆಕ್ಷನ್ ಆಫೀಸರ್, ಅಸಿಸ್ಟೆಂಟ್ ಸೂಪರಿಂಟೆಂಡೆಂಟ್, ಇನ್ಸ್ಪೆಕ್ಟರ್ ಆಫ್ ಇನ್ಕಂ ಟ್ಯಾಕ್ಸ್, ಆಡಿಟ್ ಅಕೌಂಟೆಂಟ್, ಜೂನಿಯರ್ ಅಕೌಂಟೆಂಟ್, ಟ್ಯಾಕ್ಸ್ ಆಫೀಸರ್, ಅಸಿಸ್ಟೆಂಟ್ ಎನ್ಫೋರ್ಸ್ಮೆಂಟ್ ಆಫೀಸರ್, ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಒಟ್ಟು 32 ವಿವಿಧ ಹುದ್ದೆಗಳಿಗೆ ನೇಮಕ ಮಾಡಲಾಗುತ್ತಿದೆ.

 

ವಿದ್ಯಾರ್ಹತೆ

ಎಂ.ಕಾಂ, ಎಂ.ಎ, ಸಿ.ಎ, ಬಿ.ಫಾರ್ಮ್, ಬಿ.ಬಿ.ಎ, ಬಿ.ಎಸ್ಸಿ,ಬಿ.ಇ, ಬಿ.ಟೆಕ್, ಎಲ್.ಎಲ್.ಬಿ, ಬಿ.ಕಾಂ, ಬಿ.ಎ ಪದವಿ ಪಡೆದವರು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಎಸ್ ಎಸ್ ಸಿ ನೇಮಕಾತಿ

ವೇತನ

  • ಗ್ರೂಪ್ ಬಿ ಪೇ ಬ್ಯಾಂಡ್-II ರೂ.9300-34800/-
  • ಗ್ರೂಪ್ ಸಿ ಪೇ ಬ್ಯಾಂಡ್-I ರೂ.5200-20200/-

ವಯೋಮಿತಿ

ಅರ್ಜಿ ಸಲ್ಲಿಸಲಿಚ್ಛಿಸುವರ ಅಭ್ಯರ್ಥಿಗಳು ಕನಿಷ್ಠ ವಯೋಮಿತಿ 18 ಹಾಗೂ ಆಯಾ ಹುದ್ದೆಗೆ ಸಂಬಂಧಿಸಿದಂತೆ ಗರಿಷ್ಠ ಮಯೋಮಿತಿ ನಿಗದಿ ಪಡಿಸಲಾಗಿದೆ.ಗರಿಷ್ಠ 27 ರಿಂದ 30 ವರ್ಷಗಳನ್ನು ನಿಗದಿಪಡಿಸಲಾಗಿದ್ದು ಸರ್ಕಾರದ ನಿಯಮದಂತೆ ಮೀಸಲಾತಿ ಇರುವವರಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

ಅರ್ಜಿ ಸಲ್ಲಿಕೆ

ಅರ್ಹ ಅಭ್ಯರ್ಥಿಗಳು ಎಸ್ ಎಸ್ ಸಿ ವೆಬ್ಸೈಟ್ ಮೂಲಕ ಆನ್-ಲೈನ್ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.100/-
  • ಎಸ್.ಸಿ/ಎಸ್.ಟಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.
  • ಶುಲ್ಕವನ್ನು ನೆಟ್ ಬ್ಯಾಂಕಿಂಗ್ ಮೂಲಕ ಅಥವಾ ಚಲನ್ ಮೂಲಕ ಪಾವತಿಸಬಹುದಾಗಿದೆ.

ರಾಜ್ಯದಲ್ಲಿನ ಪರೀಕ್ಷಾ ಕೇಂದ್ರಗಳು

ಬೆಂಗಳೂರು, ಧಾರವಾಡ, ಮೈಸೂರು, ಮಂಗಳೂರು, ಕಲಬುರಗಿ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-06-2017

ಪರೀಕ್ಷಾ ದಿನಾಂಕಗಳು

  • ದಿನಾಂಕ: 01-08-2017 ರಿಂದ 20-08-2017 ರವರೆಗೆ ಮೊದಲ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ
  • ದಿನಾಂಕ: 10-11-2017 ರಿಂದ 11-11-2017 ರವರೆಗೆ ಎರಡನೇ ಹಂತದ ಪರೀಕ್ಷೆ
  • ದಿನಾಂಕ: 21-01-2018 ರಂದು ಮೂರನೇ ಹಂತದ ಮುಖ್ಯ ಪರೀಕ್ಷೆ
  • 2018 ಫೆಬ್ರವರಿಯಲ್ಲಿ ನಾಲ್ಕನೇ ಹಂತದ ಕೌಶಲ್ಯ ಪರೀಕ್ಷೆಗಳು ನಡೆಯಲಿವೆ

ಹೆಚ್ಚಿನ ವಿವರಗಳಿಗಾಗಿ ssc.nic.in ಗಮಿನಿಸಿ

For Quick Alerts
ALLOW NOTIFICATIONS  
For Daily Alerts

English summary
Staff Selection Commission will hold the Combined Graduate Level Examination, 2017 (Tier-I) from 01.08.2017 to 20.08.2017 for selecting candidates for Tier-II examination for filling up different categories of posts
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X