2017-18 ನೇ ಸಾಲಿನ 6 ಮತ್ತು 8 ನೇ ತರಗತಿಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಮತ್ತು ಶಿಕ್ಷಕಿ ವೃಂದದ ಹುದ್ದೆಗಳ ನೇರ ನೇಮಕಾತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಯಲ್ಲಿ ಅರ್ಹತೆ ಗಳಿಸಿ ಅರ್ಹತಾ ಪ್ರಮಾಣಪತ್ರವನ್ನು ಪಡೆದಿರುವ ಅಭ್ಯರ್ಥಿಗಳು ನಿಗದಿತ ಅರ್ಜಿಯನ್ನು ಆನ್-ಲೈನ್ ಮೂಲಕ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 21,2017
ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ಮಾತ್ರವೇ ಜಿಲ್ಲಾ ಮಟ್ಟದ ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆಗೆ ಕಡ್ಡಾಯವಾಗಿ ಹಾಜರಾಗಬೇಕು. ಆಯ್ಕೆಗೆ ಅರ್ಹತೆ ಪಡೆಯಲು ಅರ್ಜಿ ಸ್ವೀಕರಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳು ಆಯಾ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿರುವ ವಿದ್ಯಾರ್ಹತೆ ಮತ್ತು ವಯೋಮಿತಿಯನ್ನು ಹೊಂದಿರಬೇಕು.
ಅರ್ಜಿ ಶುಲ್ಕ
ಪ.ಜಾ/ಪ.ಪಂ/ಪ್ರ-1 ರ ಅಭ್ಯರ್ಥಿಗಳು ಒಂದು ಹುದ್ದೆಗೆ ರೂ.250/- ಎರಡು ಹುದ್ದೆಗೆ ರೂ.400/- ಮೂರು ಹುದ್ದೆಗೆ ರೂ.550/-
ಸಾಮಾನ್ಯ ಮತ್ತು ಇತರ ಅಭ್ಯರ್ಥಿಗಳು ಒಂದು ಹುದ್ದೆಗೆ ರೂ.500/- ಎರಡು ಹುದ್ದೆಗೆ ರೂ.150/- ಮೂರು ಹುದ್ದೆಗೆ ರೂ.1000/-
ಒಂದೇ ಅರ್ಜಿಯಲ್ಲಿ ಒಂದಕ್ಕಿಂತ ಹೆಚ್ಚು ವಿಷಯದ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ವಯೋಮಿತಿ
- ಸಾಮಾನ್ಯ ವರ್ಗದವರಿಗೆ 40 ವರ್ಷ
- ಒಬಿಸಿ ಅಭ್ಯರ್ಥಿಗಳಿಗೆ 43 ವರ್ಷ
- ಪ.ಜಾ/ಪ.ಪಂ/ಪ್ರ-1 ರ ಅಭ್ಯರ್ಥಿಗಳಿಗೆ 45 ವರ್ಷ ನಿಗದಿಪಡಿಸಲಾಗಿದೆ
ವಿದ್ಯಾರ್ಹತೆ
ಪದವಿಯಲ್ಲಿ ಕನಿಷ್ಠ ಶೇ.50 ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿ ಪ್ರಾಥಮಿಕ ಶಿಕ್ಷಣದಲ್ಲಿ ಎರಡು ವರ್ಷ ಡಿಪ್ಲೊಮಾ ಅಥವಾ ಬಿ.ಇಡಿ ಪದವಿ ಅಥವಾ ವಿಶೇಷ ಶಿಕ್ಷಣ ಪದವಿ ಪಡೆದಿರಬೇಕು. ಇಲ್ಲವೇ ಪಿಯುಸಿಯಲ್ಲಿ ಶೇ.50 ಹಾಗೂ ನಾಲ್ಕು ವರ್ಷದ ಬ್ಯಾಚುಲರ್ ಆಫ್ ಎಲಿಮೆಂಟರಿ ಎಜುಕೇಷನ್ (ಬಿಎಲ್ಇಡಿ) ಪಡೆದಿರುವವರು ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ www.schooleducation.kar.nic.in ಗಮನಿಸಿ


Click it and Unblock the Notifications











