ಭಾರತದಲ್ಲಿ ಅತೀ ಹೆಚ್ಚು ಸ್ಯಾಲರಿ ನೀಡುವ ಉದ್ಯೋಗ ಕ್ಷೇತ್ರಗಳು

ನೀವು ಕೆಲಸಕ್ಕಾಗಿ ವಿದ್ಯಾಭ್ಯಾಸದ ಜತೆ ಹಲವಾರು ರಿಸರ್ಚ್ ಕೂಡಾ ಮಾಡಿರಬೇಕಾಗುತ್ತದೆ.

ಈ ಜಗತ್ತಿನಲ್ಲಿ ಯಾವುದು ಕೂಡಾ ಫ್ರೀಯಾಗಿ ಬರುವುದಿಲ್ಲ. ನೀವು ಯಾವುದೇ ವಸ್ತು ಬೇಕು ಎಂತಾದ್ರೂ ಹಣ ನೀಡಿ ಖರೀದಿಸಬೇಕು. ಇದೀಗ ಪ್ರತಿಯೊಬ್ಬನಿಗೂ ಹಣದ ಅಗತ್ಯ ತುಂಬಾನೇ ಇದ್ದು, ಹಣದ ವಿಷಯ ಬಂದಾಗ ಅದಕ್ಕೆ ಎರಡು ದಾರಿ ಇದೆ.

ಭಾರತದಲ್ಲಿ ಅತೀ ಹೆಚ್ಚು ಸ್ಯಾಲರಿ ನೀಡುವ ಉದ್ಯೋಗ ಕ್ಷೇತ್ರಗಳು

ಒಂದು ನೀವು ಹುಟ್ಟುವಾಗಲೇ ಬೆಳ್ಳಿ ಸ್ಪೂನ್ ಬಾಯಲ್ಲಿಟ್ಟುಕೊಂಡು ಹುಟ್ಟಿರಬೇಕು ಇಲ್ಲ ನೀವು ಬಹಳ ಶ್ರಮಪಟ್ಟು ದುಡಿಯುವವರಾಗಿರಬೇಕು. ಹೆಚ್ಚಿನ ಮಂದಿ ಹುಟ್ಟುತ್ತಾ ಶ್ರೀಮಂತರಾಗಿರುವುದಿಲ್ಲ. ಕಠೀಣ ಪರಿಶ್ರಮದಿಂದ ಶ್ರೀಮಂತರಾಗುತ್ತಾರೆ. ಹಾಗಂತ ಈಗಿನ ಕಾಲದಲ್ಲಿ ಕೆಲಸ ಸಿಗುವುದು ಸುಲಭದ ಮಾತಲ್ಲ. ನೀವು ಕೆಲಸಕ್ಕಾಗಿ ವಿದ್ಯಾಭ್ಯಾಸದ ಜತೆ ಹಲವಾರು ರಿಸರ್ಚ್ ಕೂಡಾ ಮಾಡಿರಬೇಕಾಗುತ್ತದೆ.

2017ರಲ್ಲಿ ಅತೀ ಹೆಚ್ಚು ವೇತನ ನೀಡುವ ಟಾಪ್ ಸಂಸ್ಥೆಗಳು ಇವಾಗಿದ್ದವು

ಮ್ಯಾನೇಜ್‌ ಮೆಂಟ್ ಪ್ರೊಫೆಶನಲ್ಸ್:

ಯಾವುದೇ ಸಂಸ್ಥೆಯ ಮ್ಯಾನೇಜ್‌ ಮೆಂಟ್ ಪ್ರೊಫೆಶನಲ್ಸ್ ಆ ಸಂಸ್ಥೆಯ ಬೆನ್ನೆಲುಬು ಎಂದು ಪರಿಗಣಿಸಲಾಗುತ್ತದೆ. ಕಂಪನಿಯ ಅನೇಕ ಟಾಸ್ಕ್ ಗಳನ್ನ ಇವರು ನಿರ್ವಹಿಸುತ್ತಾರೆ. ಅದಕ್ಕಾಗಿ ಸಮರ್ಪಣೆ ಹಾಗೂ ಕಠೀಣ ಪರಿಶ್ರಮ ಅಗತ್ಯ. ಎಂಟ್ರಿ ಲೆವೆಲ್ ಪ್ರೊಫೆಶನಲ್ಸ್ ನೀವಾಗಿದ್ರೆ ಕೆಲವೊಂದು ಚ್ಯಾಲೆಂಜ್ ನೀವು ಎದುರಿಸಬೇಕು. ಆದ್ರೆ ಒಂದು ಬಾರಿ ಆ ಚ್ಯಾಲೆಂಜ್ ಮಾಡಿ ಮುಗಿಸಿದರೆ, ನೀವು ಉತ್ತಮ ವೇತನ ಸಂಪಾದಿಸಬಹುದು. ಎಂಟ್ರಿ ಲೆವೆಲವ್ ಉದ್ಯೋಗಿಗಳು ರೂ. 300000 ಸಂಪಾದಿಸುತ್ತಾರೆ ಹಾಗೆಯೇ ಅನುಭವಸ್ಥ ಉದ್ಯೋಗಿಗಳು 80,00,000 ರೂ ವರೆಗೂ ಸಂಪಾದಿಸಬಹುದು.

ಇನ್‌ವೆಸ್ಟ್‌ಮೆಂಟ್ ಬ್ಯಾಂಕರ್ಸ್ :

ಕಂಪನಿಗಳಿಗೆ ಫೈನಾಂಶಿಯಲ್ ಅಡ್ವೈಸ್ ನೀಡುವ ಮೂಲಕ ಇನ್‌ವೆಸ್ಟ್‌ಮೆಂಟ್ ಬ್ಯಾಂಕರ್ಸ್ ಉತ್ತಮ ವೇತನ ಸಂಪಾದಿಸುತ್ತಾರೆ. ಈ ಫೀಲ್ಡ್‌ನಲ್ಲಿ ಎಂಟ್ರಿ ಲೆವೆಲ್ ಉದ್ಯೋಗಿಗಳು ರೂ. 1200000 ಸಂಪಾದಿಸಬಹುದು.

ಚಾರ್ಟಡ್ ಅಕೌಂಟ್ಸ್:

ಚಾರ್ಟಡ್ ಅಕೌಂಟಿಂಗ್ ಹುದ್ದೆಯಲ್ಲಿ ನೀವು ಎತ್ತಿದ ಕೈಯಾಗಿದ್ದರೆ, ಈ ಫೀಲ್ಡ್‌ನಲ್ಲಿ ನೀವು ಉತ್ತಮ ಆದಾಯ ಗಳಿಸಬಹುದು. ಜತೆಗೆ ಗೌರವ ತಂದು ಕೊಡುವಂತಹ ಹುದ್ದೆ ಕೂಡಾ ಇದಾಗಿದೆ.ಈ ಫೀಲ್ಡ್‌ನ ಅನುಭವಸ್ಥ ಉದ್ಯೋಗಿಗಳು, ರೂ. 2570000 ಗಳಿಸಬಹುದು.

ಮರೈನ್ ಇಂಜೀನಿಯರಿಂಗ್ ಹಾಗೂ ಜಿಯಾಲಾಜಿಸ್ಟ್:

ಮರೈನ್ ಇಂಜೀನಿಯರಿಂಗ್ ಹಾಗೂ ಜಿಯಾಲಾಜಿಸ್ಟ್ ಹುದ್ದೆಗಳು ಕೂಡಾ ಉತ್ತಮ ಆದಾಯ ತಂದು ಕೊಡುವ ಹುದ್ದೆಯಾಗಿದೆ. ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಸೆಕ್ಟರ್ ಸಂಸ್ಥೆಗಳಲ್ಲಿ ಇವರು ಸುಮಾರು ರೂ.15 ಲಕ್ಷ ಸಂಪಾದಿಸಬಹುದು.

ಬ್ಯುಸಿನೆಸ್ ಅನಾಲಿಸ್ಟ್:

ಪ್ರತಿಯೊಂದು ಕಂಪನಿಯಲ್ಲೂ ಬ್ಯುಸಿನೆಸ್ ಅನಾಲಿಸ್ಟ್ ಅಂತ ಇದ್ದೇ ಇರುತ್ತಾರೆ. ಮಾರ್ಕೆಟ್ ನ ಸ್ಪರ್ಧಾತ್ಮಕ ಯುಗದಲ್ಲಿ ಇವರು ಕಂಪನಿಯನ್ನ ಚೆನ್ನಾಗಿ ಹ್ಯಾಂಡಲ್ ಮಾಡುತ್ತಾರೆ. ಈ ಫೀಲ್ಡ್‌ನಲ್ಲಿರುವ ಎಂಟ್ರಿ ಲೆವೆಲ್ ಉದ್ಯೋಗಿಗಳು ಕೂಡಾ 6 ಲಕ್ಷ ರೂ ಸಂಪಾದಿಸುತ್ತಾರೆ.

ಮೆಡಿಕಲ್ ಫೀಲ್ಡ್:

ಈ ಫೀಲ್ಡ್‌ ಉದ್ಯೋಗಿಗಳಿಗೆ ನಿವೃತ್ತಿ ಎಂಬುವುದೇ ಇರುವುದಿಲ್ಲ. ನೀವು ಗುಡ್ ಸರ್ಜನ್ ಆಗಿದ್ರೆ ನಿಮಗೆ ಬರುವ ಆದಾಯವನ್ನ ಲೆಕ್ಕ ಮಾಡುವುದು ಕೂಡಾ ಕಷ್ಟಕರವಾಗಿರುತ್ತದೆ.

More News  

For Quick Alerts
ALLOW NOTIFICATIONS  
For Daily Alerts

English summary
Highest paid jobs in India. Anything in this world does not come fro free or easily. You will need money and when it comes to having money, you just have two options. one is either you need to be born with a silver spoon in your mouth or you need to work really hard to make money
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+