ಅಡ್ವೊಕೇಟ್ ಜನರಲ್‍ರವರ ಕಛೇರಿಯಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರು ಮತ್ತು ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಇಲಾಖಾ ವೃಂದ ಮತ್ತು ನೇಮಕಾತಿ ನಿಯಮಾನುಸಾರ ಶೀಘ್ರಲಿಪಿಗಾರರ 37 ಹುದ್ದೆಗಳು ಮತ್ತು ಬೆರಳಚ್ಚುಗಾರರ 01 ಹುದ್ದೆಯ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಯ ವಿವರ
ಶೀಘ್ರಲಿಪಿಗಾರ-37 ಹುದ್ದೆಗಳು
ವೇತನ ಶ್ರೇಣಿ: ರೂ.16000-29600/-
ಬೆರಳಚ್ಚುಗಾರ-01 ಹುದ್ದೆಗಳು
ವೇತನ ಶ್ರೇಣಿ: ರೂ.11600-21000/-
ವಿದ್ಯಾರ್ಹತೆ
- ಎಸ್. ಎಸ್. ಎಲ್. ಸಿ. ಅಥವಾ ತತ್ಸಮಾನ ವಿದ್ಯಾರ್ಹತೆ
- ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯವರು ನಡೆಸುವ ಆಂಗ್ಲ ಮತ್ತು ಕನ್ನಡ ಬೆರಳಚ್ಚುಗಾರರ ಪರೀಕ್ಷೆಯಲ್ಲಿ ಪ್ರೌಢದರ್ಜೆ ಮತ್ತು ಶೀಘ್ರಲಿಪಿ ಪರೀಕ್ಷೆಯಲ್ಲಿ ಪ್ರೌಢದರ್ಜೆಯಲ್ಲಿ ತೇರ್ಗಡೆ ಹೊಂದಿರಬೇಕು, ಅಥವಾ ತತ್ಸಮಾನ ವಿದ್ಯಾರ್ಹತೆ.
- ಕಂಪ್ಯೂಟರ್ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ವಯೋಮಿತಿ
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ (ಒಬಿಸಿ ಅಭ್ಯರ್ಥಿಗಳಿಗೆ 38, ಎಸ್.ಸಿ/ಎಸ್.ಟಿ/ಪ್ರ-1 ರ ಅಭ್ಯರ್ಥಿಗಳಿಗೆ 40 ವರ್ಷ)
ಅರ್ಜಿ ಸಲ್ಲಿಕೆ
ಅರ್ಹತೆಯುಳ್ಳ ಅಭ್ಯರ್ಥಿಗಳು ಅಂತರ್ಜಾಲದಲ್ಲಿ ನಮೂದಿಸಿರುವ ಅರ್ಜಿಯನ್ನು ಡೌನ್‍ಲೋಡ್ ಮಾಡಿಕೊಂಡು ಭರ್ತಿ ಮಾಡಬೇಕು.
ಅಭ್ಯರ್ಥಿಗಳು ಶೀಘ್ರಲಿಪಿಗಾರರ ಮತ್ತು ಬೆರಳಚ್ಚುಗಾರರ ಹುದ್ದೆಗೆ ಪ್ರತ್ಯೇಕ ಅರ್ಜಿಯನ್ನು ಸಲ್ಲಿಸುವುದು.
ಅರ್ಜಿ ಶುಲ್ಕ
- ಸಾಮಾನ್ಯ ಅಭ್ಯರ್ಥಿಗಳಿಗೆ ರೂ.300/-
- ಒಬಿಸಿ ಅಭ್ಯರ್ಥಿಗಳಿಗೆ ರೂ.150/-
- ಎಸ್.ಸಿ/ಎಸ್.ಟಿ/ಪ್ರ-1/ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರಲಿದೆ.
ಅರ್ಜಿಯೊಂದಿಗೆ ಮೇಲೆ ನಿಗದಿಪಡಿಸಿದ ಮೊತ್ತದ ಇಂಡಿಯನ್ ಪೋಸ್ಟಲ್ ಆರ್ಡರ್‍ನ್ನು ಆಡಳಿತಾಧಿಕಾರಿ ಅಡ್ವೊಕೇಟ್ ಜನರಲ್‍ರವರ ಕಛೇರಿ, ಉಚ್ಛನ್ಯಾಯಾಲಯ ಕಟ್ಟಡ, ಬೆಂಗಳೂರು-560 001, ಇವರ ಹೆಸರಿನಲ್ಲಿ ಪಡೆದು ಲಗತ್ತಿಸತಕ್ಕದ್ದು.
ಅರ್ಜಿಗಳನ್ನು ಸಲ್ಲಿಸಬೇಕಾದ ವಿಳಾಸ
ಆಡಳಿತಾಧಿಕಾರಿ,
ಅಡ್ವೊಕೇಟ್ ಜನರಲ್‍ರವರ ಕಛೇರಿ,
ಉಚ್ಛನ್ಯಾಯಾಲಯ, ಹಳೆಯ
ಕೆ.ಜಿ.ಐ.ಡಿ. ಕಟ್ಟಡ,
ಬೆಂಗಳೂರು -560 001.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:30-01-2018
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











