ಕೃಷಿ ವಿಶ್ವವಿದ್ಯಾಲಯ,ಧಾರವಾಡದಲ್ಲಿ ಖಾಲಿ ಇರುವ 22 ರಿಸರ್ಚ್ ಅಸೋಸಿಯೇಟ್-I,ಸೀನಿಯರ್ ರಿಸರ್ಚ್ ಫೆಲೋ, ಯಂಗ್ ಪ್ರೊಫೆಷನಲ್-II,ಯಂಗ್ ಪ್ರೊಫೆಷನಲ್-I ಹುದ್ದೆಗಳನ್ನು ಭರ್ತಿ ಮಾಡಲು ವಾಕ್-ಇನ್ ಇಂಟರ್ವ್ಯೂ ನಡೆಸಲಾಗುತ್ತಿದೆ.
ಆಸಕ್ತರು ಅಧಿಸೂಚನೆಯನ್ನು ಓದಿಕೊಂಡು ಅಗತ್ಯ ದಾಖಲೆಗಳೊಂದಿಗೆ ನವೆಂಬರ್ 14ರಂದು ನಡೆಯುವ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ನೇಮಕಾತಿಯ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.

| CRITERIA | DETAILS |
| Name Of The Posts | ರಿಸರ್ಚ್ ಅಸೋಸಿಯೇಟ್-I,ಸೀನಿಯರ್ ರಿಸರ್ಚ್ ಫೆಲೋ, ಯಂಗ್ ಪ್ರೊಫೆಷನಲ್-II,ಯಂಗ್ ಪ್ರೊಫೆಷನಲ್-I |
| Organisation | ಕೃಷಿ ವಿಶ್ವವಿದ್ಯಾಲಯ |
| Educational Qualification | ಬಿ.ಇ,ಸ್ನಾತಕೋತ್ತರ ಪದವಿ,ಎಂ.ಎಸ್ಸಿ,ಎಂಬಿಎ,ಪದವಿ,ಬಿ.ಎಸ್ಸಿ |
| Job Location | ಧಾರವಾಡ (ಕರ್ನಾಟಕ) |
| Salary Scale | ರಿಸರ್ಚ್ ಅಸೋಸಿಯೇಟ್-I -ತಿಂಗಳಿಗೆ 54,000/-ರೂ ,ಸೀನಿಯರ್ ರಿಸರ್ಚ್ ಫೆಲೋ -ತಿಂಗಳಿಗೆ 35,000/-ರೂ, ಯಂಗ್ ಪ್ರೊಫೆಷನಲ್-II -ತಿಂಗಳಿಗೆ 25,000/-ರೂ ಮತ್ತು ಯಂಗ್ ಪ್ರೊಫೆಷನಲ್-I -ತಿಂಗಳಿಗೆ 15,000/-ರೂ |
| Application Start Date | October 28, 2019 |
| Application End Date | November 14, 2019 |
ಶೈಕ್ಷಣಿಕ ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಬಿ.ಇ, ಸ್ನಾತಕೋತ್ತರ ಪದವಿ, ಎಂ.ಎಸ್ಸಿ, ಎಂಬಿಎ,ಪದವಿ ಮತ್ತು ಬಿ.ಎಸ್ಸಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ವಯೋಮಿತಿ:
ಧಾರವಾಡ ಕೃಷಿ ವಿಶ್ವವಿದ್ಯಾಲಯ ನೇಮಕಾತಿ ನಿಯಮಾನುಸಾರ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಲು ಅರ್ಹರು.
ವೇತನದ ವಿವರ:
ರಿಸರ್ಚ್ ಅಸೋಸಿಯೇಟ್-I ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 54,000/-ರೂ ,ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 35,000/-ರೂ, ಯಂಗ್ ಪ್ರೊಫೆಷನಲ್-II ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 25,000/-ರೂ ಮತ್ತು ಯಂಗ್ ಪ್ರೊಫೆಷನಲ್-I ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 15,000/-ರೂ ವೇತನವನ್ನು ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ:
ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.
ಸಂದರ್ಶನದ ವಿವರ:
ಅರ್ಹ ಅಭ್ಯರ್ಥಿಗಳು ಅಧಿಸೂಚನೆಯಲ್ಲಿರುವ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು.
ಸಂದರ್ಶನ ದಿನಾಂಕ ಮತ್ತು ಸಮಯ: ನವೆಂಬರ್ 14,2019ರಂದು ಬೆಳಗ್ಗೆ 10.00 ಘಂಟೆಗೆ
ಸಂದರ್ಶನ ನಡೆಯುವ ಸ್ಥಳ:
ಸಹ ಸಂಶೋಧನಾ ನಿರ್ದೇಶಕರ ಕಛೇರಿ (ಕೇ.ಸ್ಥಾ.),
ಕೃಷಿ ವಿಶ್ವವಿದ್ಯಾಲಯ,
ಧಾರವಾಡ.
ಅಧಿಕೃತ ವೆಬ್‌ಸೈಟ್: http://www.uasd.edu/
ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ


Click it and Unblock the Notifications











