ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ನೇಮಕಾತಿ 27 ಜ್ಯೂನಿಯರ್ ಟೆಕ್ನೀಶಿಯನ್, ಸೂಪರಿಂಟೆಂಡೆಂಟ್, ಪ್ಲಂಬರ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಅಧಿಸೂಚನೆಯನ್ನು ಓದಿದ ಬಳಿಕ ಹುದ್ದೆಗಳಿಗೆ ಕೇಳಲಾಗಿರುವ ವಿದ್ಯಾರ್ಹತೆಯನ್ನು ಹೊಂದಿದ್ದಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಕಚೇರಿಯ ವಿಳಾಸಕ್ಕೆ ಏಪ್ರಿಲ್ 4,2019 ರೊಳಗೆ ಕಳುಹಿಸಬಹುದು.

| CRITERIA | DETAILS |
| Name Of The Posts | ಜ್ಯೂನಿಯರ್ ಟೆಕ್ನೀಶಿಯನ್, ಸೂಪರಿಂಟೆಂಡೆಂಟ್, ಪ್ಲಂಬರ್ |
| Organisation | ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ |
| Educational Qualification | ಪದವಿ , ಎಸ್‌ಎಸ್‌ಎಲ್‌ಸಿ ಮತ್ತು ಐಟಿಐ, ಎಸ್‌ಎಸ್‌ಎಲ್‌ಸಿ, 7ನೇ ತರಗತಿ |
| Job Location | ರಾಯಚೂರು (ಕರ್ನಾಟಕ) |
| Salary Scale | ಸೂಪರಿಂಟೆಂಡೆಂಟ್ - 43,100/- ರಿಂದ 83,900/-ರೂ,ಜ್ಯೂನಿಯರ್ ಟೆಕ್ನೀಶಿಯನ್ (ಫಿಟ್ಟರ್ /ವೆಲ್ಡರ್ / ಟರ್ನರ್ / ಇಲೆಕ್ಟ್ರಿಕಲ್ ) ಮತ್ತು ಕೇರ್‌ಟೇಕರ್ - 30,350/- ರಿಂದ 58,250/-ರೂ,ಪ್ಲಂಬರ್ ಮತ್ತು ಕಾರ್ಪೆಂಟರ್ -21,400/- ರಿಂದ 42,000/- ರೂ, ಪಂಪ್ ಅಟೆಂಡರ್, ಫಿಶರ್‌ಮೆನ್ ಮತ್ತು ವಾರ್ಡ್ ಬಾಯ್ -18,600/- ರಿಂದ 32,600/-ರೂ |
| Application Start Date | March 5, 2019 |
| Application End Date | April 4, 2019 |
ಶೈಕ್ಷಣಿಕ ವಿದ್ಯಾರ್ಹತೆ:
ಸೂಪರಿಂಟೆಂಡೆಂಟ್ (ಜನರಲ್) ಹುದ್ದೆಗಳಿಗೆ ಅಭ್ಯರ್ಥಿಯು ಪದವಿ ,ಜ್ಯೂನಿಯರ್ ಟೆಕ್ನೀಶಿಯನ್ (ಫಿಟ್ಟರ್ /ವೆಲ್ಡರ್ / ಟರ್ನರ್ / ಇಲೆಕ್ಟ್ರಿಕಲ್ ) ಹುದ್ದೆಗಳಿಗೆ ಅಭ್ಯರ್ಥಿಯು ಎಸ್‌ಎಸ್‌ಎಲ್‌ಸಿ ಮತ್ತು ಐಟಿಐ, ಕೇರ್‌ಟೇಕರ್ ಹುದ್ದೆಗಳಿಗೆ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಮತ್ತು ಪ್ಲಂಬರ್ , ಕಾರ್ಪೆಂಟರ್ , ಪಂಪ್ ಅಟೆಂಡರ್, ಫಿಶರ್‌ಮೆನ್ ಮತ್ತು ವಾರ್ಡ್ ಬಾಯ್ ಹುದ್ದೆಗಳಿಗೆ ಅಭ್ಯರ್ಥಿಗಳು 7ನೇ ತರಗತಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಖಾಲಿ ಹುದ್ದೆಗಳ ವಿವರ:
| ಹುದ್ದೆಗಳ ಹೆಸರು | ಹುದ್ದೆಗಳ ಸಂಖ್ಯೆ |
| ಸೂಪರಿಂಟೆಂಡೆಂಟ್ (ಜನರಲ್) | 2 |
| ಕೇರ್‌ಟೇಕರ್ | 4 |
| ಜ್ಯೂನಿಯರ್ ಟೆಕ್ನೀಶಿಯನ್ (ಫಿಟ್ಟರ್ /ವೆಲ್ಡರ್ / ಟರ್ನರ್ / ಇಲೆಕ್ಟ್ರಿಕಲ್ ) | 10 |
| ಕಾರ್ಪೆಂಟರ್ | 2 |
| ಪ್ಲಂಬರ್ | 2 |
| ವಾರ್ಡ್ ಬಾಯ್ | 3 |
| ಫಿಶರ್‌ಮೆನ್ | 2 |
| ಪಂಪ್ ಅಟೆಂಡರ್ | 2 |
| ಒಟ್ಟು | 27 |
ವಯೋಮಿತಿ:
ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ 18 ವರ್ಷ ಮತ್ತು ಗರಿಷ್ಟ 35 ವರ್ಷ ವಯೋಮಿತಿಯನ್ನು ಹೊಂದಿರಬೇಕು.
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ರ ಅಭ್ಯರ್ಥಿಗಳು 5 ವರ್ಷ ಮತ್ತು2A, 2B, 3A ಮತ್ತು 3B ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ವೇತನದ ವಿವರ:
ಸೂಪರಿಂಟೆಂಡೆಂಟ್ (ಜನರಲ್) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 43,100/- ರಿಂದ 83,900/-ರೂ,ಜ್ಯೂನಿಯರ್ ಟೆಕ್ನೀಶಿಯನ್ (ಫಿಟ್ಟರ್ /ವೆಲ್ಡರ್ / ಟರ್ನರ್ / ಇಲೆಕ್ಟ್ರಿಕಲ್ ) ಮತ್ತು ಕೇರ್‌ಟೇಕರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 30,350/- ರಿಂದ 58,250/-ರೂ,ಪ್ಲಂಬರ್ ಮತ್ತು ಕಾರ್ಪೆಂಟರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 21,400/- ರಿಂದ 42,000/- ರೂ, ಪಂಪ್ ಅಟೆಂಡರ್, ಫಿಶರ್‌ಮೆನ್ ಮತ್ತು ವಾರ್ಡ್ ಬಾಯ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 18,600/- ರಿಂದ 32,600/-ರೂ ವೇತನವನ್ನು ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಅಥವಾ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ:
ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳು 300/-ರೂ ಮತ್ತು ಇತರೆ ಅಭ್ಯರ್ಥಿಗಳು 600/- ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕು.
ಅರ್ಜಿ ಸಲ್ಲಿಸುವುದು ಹೇಗೆ:
ಈ ಹುದ್ದೆಗಳಿಗೆ ಸೇರ ಬಯಸುವ ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಕಚೇರಿಯ ವಿಳಾಸಕ್ಕೆ ಏಪ್ರಿಲ್ 4,2019 ರೊಳಗೆ ಕಳುಹಿಸಬಹುದು.
ಕಚೇರಿಯ ವಿಳಾಸ:
ರಿಜಿಸ್ಟ್ರಾರ್,
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ,
ರಾಯಚೂರು- 584104
ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಅಧಿಕೃತ ವೆಬ್‌ಸೈಟ್ ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











