ಯುನೈಟೆಡ್ ಇಂಡಿಯಾ ಇನ್ಷುರೆನ್ಸ್ ಕಂಪೆನಿ 12 ಅಡ್ಮಿನಿಸ್ಟ್ರೇಟಿವ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ

ಯುನೈಟೆಡ್ ಇಂಡಿಯಾ ಇನ್ಷುರೆನ್ಸ್ ಕಂಪೆನಿ ಯಲ್ಲಿ 12 ಅಡ್ಮಿನಿಸ್ಟ್ರೇಟಿವ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ. ಕೇಂದ್ರ ಸರ್ಕಾರದಲ್ಲಿ ಉದ್ಯೋಗ ಮಾಡಬೇಕೆಂಬ ಹಂಬಲವುಳ್ಳ ಅರ್ಹ ಅಭ್ಯರ್ಥಿಗಳು ಈ ಅವಕಾಶ ಸದುಪಯೋಗ ಮಾಡಿಕೊಳ್ಳಬಹುದು.

ಆಸಕ್ತ ಅರ್ಹ ಭಾರತೀಯ ನಾಗರೀಕ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ನಲ್ಲಿ ನೀಡಲಾಗಿರುವ ಅರ್ಜಿ ನಮೂನೆಯನ್ನು ಡೌನ್ ಲೋಡ್ ಮಾಡಿ ಭರ್ತಿ ಮಾಡಿ ಕಚೇರಿಯ ವಿಳಾಸಕ್ಕೆ ಫೆಬ್ರವರಿ 28,2019ರೊಳಗೆ ಕಳುಹಿಸಬೇಕು.

ಯುನೈಟೆಡ್ ಇಂಡಿಯಾ ಇನ್ಷುರೆನ್ಸ್ ಕಂಪೆನಿಯಲ್ಲಿ ಉದ್ಯೋಗಾವಕಾಶ

CRITERIA DETAILS
Name Of The Posts ಅಡ್ಮಿನಿಸ್ಟ್ರೇಟಿವ್ ಆಫೀಸರ್
Organisation ಯುನೈಟೆಡ್ ಇಂಡಿಯಾ ಇನ್ಷುರೆನ್ಸ್ ಕಂಪೆನಿ
Educational Qualification ಎಂಬಿಬಿಎಸ್ ಪದವಿ ಅಥವಾ ಅದಕ್ಕೆ ಸಮನಾದ ಅರ್ಹತೆ
Job Location ಭಾರತದೆಲ್ಲೆಡೆ
Salary Scale ತಿಂಗಳಿಗೆ 32,795/- ರಿಂದ 62,315/- ರೂ ವೇತನ
Application End Date February 28, 2019

ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಕನಿಷ್ಟ ಎಂಬಿಬಿಎಸ್ ಪದವಿ ಅಥವಾ ಅದಕ್ಕೆ ಸಮನಾದ ಅರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಮಾಡಿರಬೇಕು.

ಖಾಲಿ ಹುದ್ದೆಗಳ ವಿವರ:

ವರ್ಗೀಕರಣಹುದ್ದೆಗಳ ಸಂಖ್ಯೆ
ಮೀಸಲಾತಿ6
ಪರಿಶಿಷ್ಟ ಜಾತಿ2
ಪರಿಶಿಷ್ಟ ಪಂಗಡ1
ಓಬಿಸಿ*3
ಅಂಗವಿಕಲ ಅಭ್ಯರ್ಥಿಗಳು2
ಒಟ್ಟು12

* "CREAMY LAYER" ನ ಅಡಿಯಲ್ಲಿ ಬರುವ ಅಭ್ಯರ್ಥಿಗಳು ಓಬಿಸಿ ಮೀಸಲಾತಿಗೆ ಪರಿಗಣಿಸುವುದಿಲ್ಲ ಬದಲಾಗಿ ಸಾಮಾನ್ಯ ಅಭ್ಯರ್ಥಿ ಎಂದು ಪರಿಗಣಿಸಲಾಗುವುದು.

ವಯೋಮಿತಿ:

ಈ ಹುದ್ದೆಗಳಿಗೆ ಕನಿಷ್ಟ 21 ರಿಂದ ಗರಿಷ್ಟ 30ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವಯೋಮಿತಿ ಸಡಿಲಿಕೆಯನ್ನು ತಿಳಿಯಲು ಅಧಿಸೂಚನೆಯಲ್ಲಿ ಓದಿ.

ವೇತನದ ವಿವರ:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 32,795/- ರಿಂದ 62,315/- ರೂ ವೇತನದ ಜೊತೆಗೆ ಇತರೆ ಭತ್ಯೆಯನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳನ್ನು ಕಂಪೆನಿಯ ಕೇಂದ್ರ ಕಚೇರಿ ಅಥವಾ ಭಾರತದಾದ್ಯಂತ ಕಂಪೆನಿಯ ಪ್ರಾದೇಶಿಕ ಕಚೇರಿಗಳಲ್ಲಿ ನೇಮಕ ಮಾಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ:

ಈ ಹುದ್ದೆಗಳಿಗೆ ಅಭ್ಯರ್ಥಿಗಳು ಈ ಕೆಳಗಿನ ಸ್ಟೆಪ್ಸ್ ಅನ್ನು ಅನುಸರಿಸಿ

ಸ್ಟೆಪ್ 1: ಯುನೈಟೆಡ್ ಇಂಡಿಯಾ ಇನ್ಷುರೆನ್ಸ್ ಕಂಪೆನಿ ಲಿಮಿಟೆಡ್ ನ ಅಧಿಕೃತ ವೆಬ್ ಸೈಟ್ https://uiic.co.in/en ಗೆ ಹೋಗಿ
ಸ್ಟೆಪ್ 2: ನಂತರ "Careers" ನಲ್ಲಿ "Recruitment of Medical Professionals- Advertisement Notice administrative officer (Scale 1)", ಈ ಮಾಹಿತಿಯನ್ನು ಹುಡುಕಿ ನಂತರ ಅದರ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3: ನಂತರ ಅಧಿಸೂಚನೆಯು ತೆರೆಯುತ್ತದೆ, ಅಭ್ಯರ್ಥಿಗಳು ಅರ್ಹತಾ ಮಾಹಿತಿಗಳನ್ನು ಒಮ್ಮೆ ಓದಿಕೊಳ್ಳಿ
ಸ್ಟೆಪ್ 4: ಅರ್ಜಿ ನಮೂನೆಯನ್ನು ಡೌನ್ ಲೋಡ್ ಮಾಡಿ ಕೇಳಲಾಗಿರುವ ವಿವರವನ್ನು ಭರ್ತಿ ಮಾಡಿ
ಸ್ಟೆಪ್ 5: ನಂತರ ಅರ್ಜಿಮತ್ತು ಅಗತ್ಯ ದಾಖಲೆಗಳ ಪ್ರತಿಗಳನ್ನು ಕಚೇರಿಯ ವಿಳಾಸಕ್ಕೆ ಕಳುಹಿಸಿ.

ವಿಳಾಸ:

The Deputy General Manager (HR)
HRM Department,
United India Insurance Company Limited,
Head Office, 24, Whites Road, Chennai -600 014

ಯುನೈಟೆಡ್ ಇಂಡಿಯಾ ಇನ್ಷುರೆನ್ಸ್ ಕಂಪೆನಿ ( UIIC):

ಯುನೈಟೆಡ್ ಇಂಡಿಯಾ ಇನ್ಷುರೆನ್ಸ್ ಕಂಪೆನಿ ಎಂಬುದು ಭಾರತದಲ್ಲಿ ವಿಮಾ ಮತ್ತು ಹಣಕಾಸು ಸೇವೆಗಳನ್ನು ಒದಗಿಸುವ ಸಾರ್ವಜನಿಕ ವಲಯದ ಸಾಮಾನ್ಯ ವಿಮೆ ಕಂಪೆನಿಯಾಗಿದೆ. ಯುಐಐಸಿ 1938 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದರ ಮುಖ್ಯ ಕಚೇರಿಯು ಚೆನ್ನೈ, ತಮಿಳುನಾಡಿನಲ್ಲಿದೆ. ಕಂಪೆನಿಯು ಮೋಟಾರ್ ವಿಮೆ, ಆರೋಗ್ಯ ವಿಮೆ ಮತ್ತು ಅಪಘಾತ ವಿಮೆಗಳನ್ನು ಒದಗಿಸುತ್ತದೆ. ಪ್ರಸ್ತುತ ಹದಿನೈದು ಸಾವಿರ ಉದ್ಯೋಗಿಗಳು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಿಷ್ಟೂ ಕಂಪೆನಿಯ ಬಗೆಗಿನ ಮಾಹಿತಿಯಾಗಿರುತ್ತದೆ.

ಈ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
nited india Insurance Company Limited notitfication has been released for the recruitment of 12 Administrative Officer posts. Interested candidates can apply for this jobs before 28th february 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+