ಭಾರತದಾದ್ಯಂತ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ವಿದೇಶೀ ವಿನಿಮಯ ಅಧಿಕಾರಿ ಮತ್ತು ಖಜಾನೆ ಅಧಿಕಾರಿಯನ್ನು ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
50 ವಿದೇಶೀ ವಿನಿಮಯ ಅಧಿಕಾರಿ ಮತ್ತು 50 ಖಜಾನೆ ಅಧಿಕಾರಿ ಒಟ್ಟು 100 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ದಿನಾಂಕ ಜನವರಿ 13,2018ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಹುದ್ದೆಗಳ ವಿವರ
ವಿದೇಶೀ ವಿನಿಮಯ ಅಧಿಕಾರಿ: 50 ಹುದ್ದೆಗಳು
ವಿದ್ಯಾರ್ಹತೆ: ಭಾರತ ಸರ್ಕಾರದಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಲ್ಲಿ ಯಾವುದಾದರೂ ಡಿಗ್ರಿ(ಪದವಿ) ಪೂರ್ಣಗೊಳಿಸಿರಬೇಕು.
ವೇತನ ಶ್ರೇಣಿ: 31705 ರಿಂದ 45950 ರು.ತಿಂಗಳಿಗೆ.
ವಯೋಮಿತಿ: ಕನಿಷ್ಠ 23, ಗರಿಷ್ಟ 32
2. ಖಜಾನೆ ಅಧಿಕಾರಿ: 50 ಹುದ್ದೆಗಳು
ವಿದ್ಯಾರ್ಹತೆ: ಭಾರತ ಸರ್ಕಾರದಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಲ್ಲಿ ಸಂಖ್ಯಾಶಾಸ್ತ್ರ, ಫೈನಾನ್ಸ್, ಗಣಿತ ವಿಷಯಗಳಲ್ಲಿ ಪದವಿ ಪಡೆದಿರಬೇಕು.
ವೇತನ ಶ್ರೇಣಿ: 31705 ರಿಂದ 45950 ರು.ತಿಂಗಳಿಗೆ.
ವಯೋಮಿತಿ: ಕನಿಷ್ಠ 23, ಗರಿಷ್ಟ 35
ಅರ್ಜಿ ಸಲ್ಲಿಕೆ
ಅರ್ಜಿಗಳನ್ನು ಆನ್ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿ ಶುಲ್ಕ
- ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.600/-
- ಪ.ಜಾ/ಪ.ಪಂ/ಅಂಗವಿಕಲ ಅಭ್ಯರ್ಥಿಗಳಿಗೆ ರೂ.100/-
ಆಯ್ಕೆ ವಿಧಾನ
ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಲಿಖಿತ ಪರೀಕ್ಷೆ ವಿವರ
200 ಅಂಕಗಳ ಆಬ್ಜೆಕ್ಟಿವ್ ಮಾದರಿಯ ಲಿಖಿತ ಪರೀಕ್ಷೆಯು 200 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಉತ್ತರಿಸಲು 120 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಪತ್ರಿಕೆಯು ರೀಸನಿಂಗ್, ಕ್ವಾನ್ಟಿಟೇಟಿವ್ ಆಪ್ಟಿಟ್ಯೂಡ್, ಹುದ್ದೆಗೆ ಸಂಬಂಧಿಸಿದ ಜ್ಞಾನ, ಇಂಗ್ಲಿಷ್ ಭಾಷಾ ಜ್ಞಾನ ಒಳಗೊಂಡಿರುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13-01-2018
ಪರೀಕ್ಷಾ ಕೇಂದ್ರಗಳು
ಬೆಂಗಳೂರು, ದೆಹಲಿ, ಕೋಲ್ಕತ್ತಾ, ಲಕ್ನೋ, ಮುಂಬೈ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











