UPSC CGS Recruitment 2021 : 192 ಜಿಯೋಲಜಿಸ್ಟ್, ಸೈಂಟಿಸ್ಟ್‌-ಬಿ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತ ಸರ್ಕಾರದ ಅಧೀನದಲ್ಲಿರುವ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) 2021ರ ಕಂಬೈನ್ಡ್ ಜಿಯೋ-ಸೈಂಟಿಸ್ಟ್ ಪರೀಕ್ಷೆಯ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಒಟ್ಟಾರೆ ನೂರಾ ತೊಂಬತ್ತೆರಡು (192) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಭಾರತೀಯ ಪ್ರಜೆಗಳಿಂದ (ಪುರುಷ/ಮಹಿಳೆ) ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸುತ್ತದೆ.

ಯುಪಿಎಸ್ಇ ಸಿಜಿಎಸ್ 2021 ಪರೀಕ್ಷೆಯ ಅಧಿಸೂಚನೆ ಪ್ರಕಟ

ಯುಪಿಎಸ್‌ಸಿ ಸಂಯೋಜಿತ ಜಿಯೋ-ಸೈಂಟಿಸ್ಟ್ ಪರೀಕ್ಷೆ 2021ರ ಮೂಲಕ ಯುಪಿಎಸ್‌ಸಿಯಲ್ಲಿ ಭೂವಿಜ್ಞಾನಿ, ವಿಜ್ಞಾನಿ ಬಿ, ಜಿಯೋಫಿಸಿಸ್ಟ್ ಮತ್ತು ರಸಾಯನಶಾಸ್ತ್ರಜ್ಞರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಭಾರತದಾದ್ಯಂತ ಪೂರ್ಣ ಸಮಯದ ಆಧಾರದ ಮೇಲೆ ಪೋಸ್ಟ್ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಸೆಪ್ಟೆಂಬರ್ 22, 2021 ರಿಂದ ಆರಂಭಗೊಂಡು ಅಕ್ಟೋಬರ್ 12, 2021ರ ಸಂಜೆ 06:00 ಗಂಟೆಯೊಳಗೆ ಮುಕ್ತಾಯವಾಗುತ್ತದೆ. ನೇಮಕಾತಿ ಬಗೆಗೆ ಇನ್ನಷ್ಟು ಮಾಹಿತಿ ಪಡೆಯಲು ಮುಂದೆ ನೋಡಿ.

ಯುಪಿಎಸ್‌ಸಿ ಜಿಯೋ -ಸೈಂಟಿಸ್ಟ್ ನೇಮಕಾತಿ 2021 ಖಾಲಿ ಹುದ್ದೆಗಳ ವಿವರ:

ಯುಪಿಎಸ್‌ಸಿ ಜಿಯೋ -ಸೈಂಟಿಸ್ಟ್ ನೇಮಕಾತಿ 2021 ಖಾಲಿ ಹುದ್ದೆಗಳ ವಿವರ:

ಜಿಯಾಲಜಿಸ್ಟ್ (ಗ್ರೂಪ್ ಎ) - 100 ಹುದ್ದೆಗಳು
ಜಿಯೋಫಿಸಿಸ್ಟ್ (ಗ್ರೂಪ್ ಎ) - 50 ಹುದ್ದೆಗಳು
ಕೆಮಿಸ್ಟ್ (ಗ್ರೂಪ್ ಎ) - 20 ಹುದ್ದೆಗಳು
ವಿಜ್ಞಾನಿ ಬಿ (ಹೈಡ್ರೋಜಿಯಾಲಜಿ - ಗ್ರೂಪ್ ಎ)- 20 ಹುದ್ದೆಗಳು
ಸೈಂಟಿಸ್ಟ್ ಬಿ (ಕೆಮಿಕಲ್ - ಗ್ರೂಪ್ ಎ) 01 - ಹುದ್ದೆ
ವಿಜ್ಞಾನಿ ಬಿ (ಭೂ ಭೌತಶಾಸ್ತ್ರ - ಗುಂಪು ಎ) 01 - ಹುದ್ದೆ
ಒಟ್ಟು 192 ಹುದ್ದೆಗಳು

ಯುಪಿಎಸ್ಸಿ ಸಂಯೋಜಿತ ಭೂ-ವಿಜ್ಞಾನಿ ನೇಮಕಾತಿ 2021 ಶೈಕ್ಷಣಿಕ ಅರ್ಹತೆ:

ಯುಪಿಎಸ್ಸಿ ಸಂಯೋಜಿತ ಭೂ-ವಿಜ್ಞಾನಿ ನೇಮಕಾತಿ 2021 ಶೈಕ್ಷಣಿಕ ಅರ್ಹತೆ:

ಯುಪಿಎಸ್ಸಿ ಸಂಯೋಜಿತ ಭೂ-ವಿಜ್ಞಾನಿ ನೇಮಕಾತಿ 2021ರ ಮೂಲಕ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜಿಯೋಲಜಿಕಲ್ ಸೈನ್ಸ್/ಜಿಯೋಲಜಿ/ಅನ್ವಯಿಕ ಭೂವಿಜ್ಞಾನ ಇತ್ಯಾದಿಗಳಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು; ಭೌತಶಾಸ್ತ್ರದಲ್ಲಿ ಎಂ.ಎಸ್ಸಿ/ಅಪ್ಲೈಡ್ ಫಿಸಿಕ್ಸ್/ಎಂ.ಎಸ್ಸಿ. (ಜಿಯೋಫಿಸಿಕ್ಸ್) ಇತ್ಯಾದಿ; ರಸಾಯನಶಾಸ್ತ್ರ/ಅಪ್ಲೈಡ್ ಕೆಮಿಸ್ಟ್ರಿ/ವಿಶ್ಲೇಷಣಾತ್ಮಕ ರಸಾಯನಶಾಸ್ತ್ರ ಮತ್ತು ಭೂವಿಜ್ಞಾನ/ಭೂವಿಜ್ಞಾನ/ಸಾಗರ ಭೂವಿಜ್ಞಾನ ಅಥವಾ ಜಲವಿಜ್ಞಾನದಲ್ಲಿ ಎಂ.ಎಸ್ಸಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.

ಯುಪಿಎಸ್‌ಸಿ ಸಂಯೋಜಿತ ಜಿಯೋ-ಸೈಂಟಿಸ್ಟ್ ನೇಮಕಾತಿ 2021 ವಯೋಮಿತಿ:
 

ಯುಪಿಎಸ್‌ಸಿ ಸಂಯೋಜಿತ ಜಿಯೋ-ಸೈಂಟಿಸ್ಟ್ ನೇಮಕಾತಿ 2021 ವಯೋಮಿತಿ:

ಯುಪಿಎಸ್‌ಸಿ ಸಂಯೋಜಿತ ಜಿಯೋ-ಸೈಂಟಿಸ್ಟ್ ನೇಮಕಾತಿ 2021 ಮೂಲಕ ಯುಪಿಎಸ್‌ಸಿ ಕಂಬೈನ್ಡ್ ಜಿಯೋ-ಸೈಂಟಿಸ್ಟ್ ಪರೀಕ್ಷೆ 2021ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 21 ವರ್ಷಗಳನ್ನು ಪೂರೈಸಿದವರಾಗಿರಬೇಕು ಮತ್ತು ಜನವರಿ 1,2022ರ ವೇಳೆಗೆ 32 ವರ್ಷಗಳನ್ನು ಮೀರಿರಬಾರದು. ಅಧಿಸೂಚನೆಯಲ್ಲಿ ತಿಳಿಸಿರುವಂತೆ 3 ವರ್ಷಗಳು (OBC) ಮತ್ತು 5 ವರ್ಷಗಳು (SC/ST) ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ಯುಪಿಎಸ್‌ಸಿ ಜಿಯೋ-ಸೈಂಟಿಸ್ಟ್ ನೇಮಕಾತಿ 2021 ವೇತನ:

ಯುಪಿಎಸ್‌ಸಿ ಜಿಯೋ-ಸೈಂಟಿಸ್ಟ್ ನೇಮಕಾತಿ 2021 ವೇತನ:

ಯುಪಿಎಸ್‌ಸಿ ಜಿಯೋ-ಸೈಂಟಿಸ್ಟ್ ನೇಮಕಾತಿ 2021ರ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಯುಪಿಎಸ್ಸಿ ಜಿಯೋ-ಸೈಂಟಿಸ್ಟ್ ನೋಟಿಫಿಕೇಶನ್ 2021 ರಲ್ಲಿ ಉಲ್ಲೇಖಿಸಿರುವಂತೆ ನಿಯಮಾನುಸಾರ ವೇತನವನ್ನು ನೀಡಲಾಗುತ್ತದೆ.

ಯುಪಿಎಸ್‌ಸಿ ಜಿಯೋ-ಸೈಂಟಿಸ್ಟ್ ನೇಮಕಾತಿ 2021 ಆಯ್ಕೆ ಪ್ರಕ್ರಿಯೆ:

ಯುಪಿಎಸ್‌ಸಿ ಜಿಯೋ-ಸೈಂಟಿಸ್ಟ್ ನೇಮಕಾತಿ 2021 ಆಯ್ಕೆ ಪ್ರಕ್ರಿಯೆ:

ಯುಪಿಎಸ್‌ಸಿ ಜಿಯೋ-ಸೈಂಟಿಸ್ಟ್ ನೇಮಕಾತಿ 2021ರ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ಯುಪಿಎಸ್‌ಸಿ ಜಿಯೋ-ಸೈಂಟಿಸ್ಟ್ ಪರೀಕ್ಷೆ 2021ರ ಮೂಲಕ ಮಾಡಲಾಗುವುದು.

ಯುಪಿಎಸ್‌ಸಿ ಸಂಯೋಜಿತ ಜಿಯೋ-ಸೈಂಟಿಸ್ಟ್ ನೇಮಕಾತಿ 2021 ಅರ್ಜಿ ಶುಲ್ಕ:

ಯುಪಿಎಸ್‌ಸಿ ಸಂಯೋಜಿತ ಜಿಯೋ-ಸೈಂಟಿಸ್ಟ್ ನೇಮಕಾತಿ 2021 ಅರ್ಜಿ ಶುಲ್ಕ:

ಯುಪಿಎಸ್‌ಸಿ ಸಂಯೋಜಿತ ಜಿಯೋ-ಸೈಂಟಿಸ್ಟ್ ನೇಮಕಾತಿ 2021ರ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿತ ಮೊತ್ತ 200/-ರೂ (ಜನ್/ಒಬಿಸಿ) ಅನ್ನು ಎಸ್ಬಿಐನ ಯಾವುದೇ ಶಾಖೆಯಲ್ಲಿ ನಗದು ಮೂಲಕ ಅಥವಾ ಎಸ್ಬಿಐನ ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಬಳಸಿ ಪಾವತಿಸಬಹುದುದ. ಆದಾಗ್ಯೂ ಲೇಖನದ ಕೊನೆಯಲ್ಲಿ ನೀಡಿರುವ ಅಧಿಕೃತ UPSC ಸಂಯೋಜಿತ ಜಿಯೋ-ಸೈಂಟಿಸ್ಟ್ ಪರೀಕ್ಷೆ ಅಧಿಸೂಚನೆ 2021 ರಲ್ಲಿ ಹೇಳಿರುವಂತೆ SC/ST/PwBD/ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.

ಯುಪಿಎಸ್‌ಸಿ ಜಿಯೋ-ಸೈಂಟಿಸ್ಟ್ ನೇಮಕಾತಿ 2021 ಅರ್ಜಿ ಸಲ್ಲಿಕೆ:

ಯುಪಿಎಸ್‌ಸಿ ಜಿಯೋ-ಸೈಂಟಿಸ್ಟ್ ನೇಮಕಾತಿ 2021 ಅರ್ಜಿ ಸಲ್ಲಿಕೆ:

ಯುಪಿಎಸ್‌ಸಿ ಕಂಬೈನ್ಡ್ ಜಿಯೋ-ಸೈಂಟಿಸ್ಟ್ ನೇಮಕಾತಿ 2021ರ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://www.upsc.gov.in/ ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಅಕ್ಟೋಬರ್ 12,2021ರ ಸಂಜೆ 6 ಗಂಟೆಯೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಅಭ್ಯರ್ಥಿಗಳು ಯುಪಿಎಸ್‌ಇ ಸಿಜಿಎಸ್ 2021 ಪರೀಕ್ಷೆಯ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
UPSC CGS recruitment 2021 notification has been released for 192 geologist, scientist B, geophysicist and chemist posts. Interested candidates can apply through online before October 12.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X