UPSC Recruitment 2019: 40 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರೀಯ ಲೋಕ ಸೇವಾ ಆಯೋಗ 40 ಸಲಹೆಗಾರ / ಸಹಾಯಕ ವಿಭಾಗದ ಅಧಿಕಾರಿಗಳು ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಧಿಸೂಚನೆಯನ್ನು ಓದಬಹುದು. ಅರ್ಹ ಅಭ್ಯರ್ಥಿಗಳು ನವೆಂಬರ್ 18,2019ರೊಳಗೆ ಆಫ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಿರುತ್ತದೆ. ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.

ಯುಪಿಎಸ್‌ಸಿ ಯಲ್ಲಿ 40 ಹುದ್ದೆಗಳ ನೇಮಕಾತಿ..ನ.18ರೊಳಗೆ ಅರ್ಜಿ ಹಾಕಿ

CRITERIA DETAILS
Name Of The Posts ಸಲಹೆಗಾರ / ಸಹಾಯಕ ವಿಭಾಗದ ಅಧಿಕಾರಿಗಳು
Organisation ಕೇಂದ್ರೀಯ ಲೋಕ ಸೇವಾ ಆಯೋಗ
Educational Qualification ಪದವಿ ಅಥವಾ ಅದಕ್ಕೆ ಸಮನಾದ ವಿದ್ಯಾರ್ಹತೆ
Job Location ನವದೆಹಲಿ
Salary Scale ತಿಂಗಳಿಗೆ 28,000/-ರೂ
Application Start Date October 25, 2019
Application End Date November 18, 2019

ವಿದ್ಯಾರ್ಹತೆ:

ಸಲಹೆಗಾರ / ಸಹಾಯಕ ವಿಭಾಗದ ಅಧಿಕಾರಿಗಳು ಹುದ್ದೆಗಳಿಗೆ ಪದವಿ ಅಥವಾ ಅದಕ್ಕೆ ಸಮನಾದ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ಕಂಪ್ಯೂಟರ್ ಜ್ಞಾನವನ್ನು ಹೊಂದಿರತಕ್ಕದ್ದು.

ವಯೋಮಿತಿ:

ನವೆಂಬರ್ 1,2019ರ ಅನ್ವಯ ಗರಿಷ್ಟ 63 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು. ಅಭ್ಯರ್ಥಿಗಳಿಗೆ ನೇಮಕಾತಿಯ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ವೇತನದ ವಿವರ:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 28,000/-ರೂ ವೇತವನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಅವರ ಮೆರಿಟ್ ಆಧಾರದ ಮೇಲೆ ಮತ್ತು ವೃತ್ತಿ ಅನುಭವದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಅಭ್ಯರ್ಥಿಗಳು ಅರ್ಜಿ ಶುಲ್ಕದ ಬಗೆಗೆ ತಿಳಿಯಲು ಅಧಿಸೂಚನೆಯನ್ನು ಓದತಕ್ಕದ್ದು.

ಅರ್ಜಿ ಸಲ್ಲಿಸುವುದು ಹೇಗೆ:

ಆಸಕ್ತ ಅಭ್ಯರ್ಥಿಗಳು ಕೇಂದ್ರೀಯ ಲೋಕ ಸೇವಾ ಆಯೋಗದ ಅಧಿಕೃತ ವೆಬ್‌ಸೈಟ್‌ https://www.upsc.gov.in/ ಗೆ ಭೇಟಿ ನೀಡಿ ಅಧಿಸೂಚನೆಯನ್ನು ಓದಿಕೊಳ್ಳಬಹುದು. ಅರ್ಹ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿಯ ವಿಳಾಸಕ್ಕೆ ನವೆಂಬರ್ 18,2019ರೊಳಗೆ ತಲುಪಿಸಬೇಕಿರುತ್ತದೆ.

ಕಛೇರಿಯ ವಿಳಾಸ:

ಮೆಹಬೂಬ್ ರೇಜಾ,
ಸೆಕ್ರೆಟರಿ ಅಡಿಯಲ್ಲಿ (ಎಡಿಎಂಎನ್ - III),
ಆರ್.ನಂ .424 - ಬಿ,
ಆಯೋಗ ಸಚಿವಾಲಯ ಬಿಲ್ಡಿಂಗ್,
ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್,
ಧೋಲ್ಪುರ್ ಹೌಸ್,
ಶಹಜಹಾನ್ ರಸ್ತೆ,
ನವದೆಹಲಿ -110069.

ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಮತ್ತು ನಿಗದಿತ ಅರ್ಜಿ ನಮೂನೆಯನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
UPSC recruitment 2019 notification has been released on official website for the recruitment of 40 consultant posts. Interested candidates can apply before 18th november 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X