UPSC Recruitment 2019: ಯುಪಿಎಸ್‌ಸಿ ವಿವಿಧ 88 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಲೋಕ ಸೇವಾ ಆಯೋಗ ವಿವಿಧ 88 ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳು ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಧಿಸೂಚನೆಯನ್ನು ಓದಿಕೊಳ್ಳಬಹುದು.

ಯುಪಿಎಸ್‌ಸಿಯಲ್ಲಿ 88 ಹುದ್ದೆಗಳ ನೇಮಕಾತಿ

ಅಧಿಸೂಚನೆ ಓದಿದ ಬಳಿಕ ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಗಳನ್ನು ಹೊಂದಿದ್ದಲ್ಲಿ ಆನ್‌ಲೈನ್ ಮೂಲಕ ಅಕ್ಟೋಬರ್ 31,2019ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಮುಂದೆ ಓದಿ.

ವಿದ್ಯಾರ್ಹತೆ ಏನಿರಬೇಕು ?:

ವಿದ್ಯಾರ್ಹತೆ ಏನಿರಬೇಕು ?:

ಸಸ್ಯಶಾಸ್ತ್ರಜ್ಞ ಹುದ್ದೆಗಳಿಗೆ ಸ್ನಾತಕೋತ್ತರ ಪದವಿ (ಸಸ್ಯಶಾಸ್ತ್ರ / ತೋಟಗಾರಿಕೆ / ಜೀವ ವಿಜ್ಞಾನ / ಕೃಷಿ), ಕಾನೂನು ಅಧಿಕಾರಿ ಹುದ್ದೆಗಳಿಗೆ ಸ್ನಾತಕೋತ್ತರ ಪದವಿ (ಕಾನೂನು), ಜಂಟಿ ಸಹಾಯಕ ನಿರ್ದೇಶಕರು ಹುದ್ದೆಗಳಿಗೆ ಬಿ.ಟೆಕ್/ಬಿ.ಇ/ಬಿ.ಎಸ್ಸಿ / ಸ್ನಾತಕೋತ್ತರ ಪದವಿ, ತಜ್ಞ ಗ್ರೇಡ್ III (ಅರಿವಳಿಕೆ,ಜೈವಿಕ ರಸಾಯನಶಾಸ್ತ್ರ,ಕಾರ್ಡಿಯಾಲಜಿ,ಫೋರೆನ್ಸಿಕ್ ಮೆಡಿಸಿನ್ ,ಜನರಲ್ ಮೆಡಿಸಿನ್ , ಸಾಮಾನ್ಯ ಶಸ್ತ್ರಚಿಕಿತ್ಸೆ ,ನರ ಶಸ್ತ್ರಚಿಕಿತ್ಸೆ ಮತ್ತು ಪೀಡಿಯಾಟ್ರಿಕ್ಸ್ ಸರ್ಜರಿ) ಹುದ್ದೆಗಳಿಗೆ ಎಂಬಿಬಿಎಸ್/ಪಿಜಿ ಪದವಿ/ಡಿಪ್ಲೋಮಾ/ಎಂ.ಡಿ/ಎಂ.ಎಸ್ಸಿ/ಪಿಹೆಚ್‌.ಡಿ/ಡಿ.ಎಸ್ಸಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ ಎಷ್ಟಿರಬೇಕು ?:

ವಯೋಮಿತಿ ಎಷ್ಟಿರಬೇಕು ?:

ಯುಪಿಎಸ್‌ಸಿಯ ವಿವಿಧ ಹುದ್ದೆಗಳಿಗೆ ಕನಿಷ್ಟ 30 ರಿಂದ ಗರಿಷ್ಟ 45 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.

ಆಯ್ಕೆ ಪ್ರಕ್ರಿಯೆ:

ಆಯ್ಕೆ ಪ್ರಕ್ರಿಯೆ:

ಅರ್ಜಿದಾರರ ಕಿರುಪಟ್ಟಿಯನ್ನು ಮಾಡಲಾಗುವುದು ತದನಂತರ ಅಭ್ಯರ್ಥಿಗಳಿಗೆ ಸಂದರ್ಶನವನ್ನು ನಡೆಸಲಾಗುವುದು. ಸಂದರ್ಶನದ ಮೂಲಕ ಆಯ್ಕೆಯಾದ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುವುದು.

ಪ್ರಮುಖ ದಿನಾಂಕಗಳು:

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಅಕ್ಟೋಬರ್ 12,2019

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 31,2019ರ ರಾತ್ರಿ 23:59ರೊಳಗೆ
ಅರ್ಜಿಯ ಪ್ರಿಂಟೌಟ್‌ ತೆಗೆದುಕೊಳ್ಳಲು ಕೊನೆಯ ದಿನಾಂಕ: ನವೆಂಬರ್ 1,2019ರ ರಾತ್ರಿ 23:59ರೊಳಗೆ

ಅರ್ಜಿ ಶುಲ್ಕ:

ಅರ್ಜಿ ಶುಲ್ಕ:

ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು, 25/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿರುತ್ತದೆ. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಅಂಗವಿಕಲ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ:

ಅರ್ಜಿ ಸಲ್ಲಿಸುವುದು ಹೇಗೆ:

ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಯುಪಿಎಸ್‌ಸಿಯ ಅಧಿಕೃತ ವೆಬ್‌ಸೈಟ್‌ https://www.upsc.gov.in/ ಗೆ ಭೇಟಿ ನೀಡಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಅರ್ಜಿ ಶುಲ್ಕ ಪಾವತಿಸುವ ಮೂಲಕ ಅಕ್ಟೋಬರ್ 31,2019ರ ರಾತ್ರಿ 23:59ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
UPSC recruitment 2019 notification has been released on official website for the recruitment of various 88 posts. Interested candidates can apply through online before 31st october 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X