UPSC Recruitment 2020: 42 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಲೋಕ ಸೇವಾ ಆಯೋಗ 42 ಸಹಾಯಕ ಪ್ರಾಧ್ಯಾಪಕ, ಸಹಾಯಕ ಇಂಜಿನಿಯರ್, ಫೋರ್ ಮ್ಯಾನ್ ಮತ್ತು ಹಿರಿಯ ವೈಜ್ಞಾನಿಕ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಯುಪಿಎಸ್​ಸಿ ನೇಮಕಾತಿ...ಅ.15ರೊಳಗೆ ಅರ್ಜಿ ಹಾಕಿ

ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಬಹುದು. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅಕ್ಟೋಬರ್ 15,2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಮುಂದೆ ಓದಿ.

ಖಾಲಿ ಹುದ್ದೆಗಳ ವಿವರ:

ಖಾಲಿ ಹುದ್ದೆಗಳ ವಿವರ:

ಸಹಾಯಕ ಎಂಜಿನಿಯರ್ - 2 ಹುದ್ದೆಗಳು 

ಫೋರ್‌ಮ್ಯಾನ್ (ಕಂಪ್ಯೂಟರ್ ಸೈನ್ಸ್) - 2 ಹುದ್ದೆಗಳು
ಹಿರಿಯ ವೈಜ್ಞಾನಿಕ ಸಹಾಯಕ (ಕಂಪ್ಯೂಟರ್) - 3 ಹುದ್ದೆಗಳು
ಹಿರಿಯ ವೈಜ್ಞಾನಿಕ ಸಹಾಯಕ (ವಿದ್ಯುತ್) - 2 ಹುದ್ದೆಗಳು
ಹಿರಿಯ ವೈಜ್ಞಾನಿಕ ಸಹಾಯಕ (ಯಾಂತ್ರಿಕ) - 10 ಹುದ್ದೆಗಳು ಸ್ಪೆಷಲಿಸ್ಟ್ ಗ್ರೇಡ್ III ಸಹಾಯಕ ಪ್ರಾಧ್ಯಾಪಕ (ಕ್ಲಿನಿಕಲ್ ಹೆಮಟಾಲಜಿ) - 10 ಹುದ್ದೆಗಳು
ಸ್ಪೆಷಲಿಸ್ಟ್ ಗ್ರೇಡ್ III ಸಹಾಯಕ ಪ್ರಾಧ್ಯಾಪಕ (ಇಮ್ಯುನೊ-ಹೆಮಟಾಲಜಿ ಮತ್ತು ರಕ್ತ ವರ್ಗಾವಣೆ) - 5 ಹುದ್ದೆಗಳು
ಸ್ಪೆಷಲಿಸ್ಟ್ ಗ್ರೇಡ್ III ಸಹಾಯಕ ಪ್ರಾಧ್ಯಾಪಕ (ವೈದ್ಯಕೀಯ ಆಂಕೊಲಾಜಿ) - 2 ಹುದ್ದೆಗಳು
ಸ್ಪೆಷಲಿಸ್ಟ್ ಗ್ರೇಡ್ III ಸಹಾಯಕ ಪ್ರಾಧ್ಯಾಪಕ (ನಿಯೋನಾಟಾಲಜಿ) - 6 ಹುದ್ದೆಗಳು
ಒಟ್ಟು 42 ಹುದ್ದೆಗಳು

ವಿದ್ಯಾರ್ಹತೆ ಏನಿರಬೇಕು ?:

ವಿದ್ಯಾರ್ಹತೆ ಏನಿರಬೇಕು ?:

ಇಂಜಿನಿಯರಿಂಗ್ ಪದವಿ, ಸ್ನಾತಕೋತ್ತರ ಪದವಿ, ಎಂ,ಎಸ್ಸಿ, ಎಂಬಿಬಿಎಸ್, ಪೋಸ್ಟ್ ಗ್ರಾಜುಯೇಟ, ಡಿ.ಎಂ, ಎಂ.ಡಿ ಮತ್ತು ಎಂ.ಸಿಹೆಚ್ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ ಎಷ್ಟಿರಬೇಕು ?:
 

ವಯೋಮಿತಿ ಎಷ್ಟಿರಬೇಕು ?:

ಯುಪಿಎಸ್ಸಿ ನೇಮಕಾತಿಯ ವಿವಿಧ ಹುದ್ದೆಗಳಿಗೆ ಗರಿಷ್ಟ 30 ವರ್ಷ (ಸ್ಪೆಷಲಿಸ್ಟ್ ಗ್ರೇಡ್-III ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಗರಿಷ್ಟ 40 ವರ್ಷ) ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಪ.ಜಾ/ಪ.ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ:

ಆಯ್ಕೆ ಪ್ರಕ್ರಿಯೆ:

ಕೇಂದ್ರ ಲೋಕ ಸೇವಾ ಆಯೋಗ ನೇಮಕಾತಿಯ ವಿವಿಧ ಹುದ್ದೆಗಳಿಗೆ ಅರ್ಜಿದಾರರ ಕಿರುಪಟ್ಟಿಯನ್ನು ಮಾಡಲಾಗುವುದು, ನಂತರ ಅಭ್ಯರ್ಥಿಗಳನ್ನು ನೇರ ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುವುದು.

ಪ್ರಮುಖ ದಿನಾಂಕಗಳು:

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಸೆಪ್ಟೆಂಬರ್ 26,2020
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 15,2020ರ ರಾತ್ರಿ 11:59
ಅರ್ಜಿ ಪ್ರಿಂಟೌಟ್ ತೆಗೆದುಕೊಳ್ಳಲು ಕೊನೆಯ ದಿನಾಂಕ: ಅಕ್ಟೋಬರ್ 16,2020

ಅರ್ಜಿ ಶುಲ್ಕ:

ಅರ್ಜಿ ಶುಲ್ಕ:

ಕೇಂದ್ರ ಲೋಕ ಸೇವಾ ಆಯೋಗ ನೇಮಕಾತಿಯ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು, 25/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿರುತ್ತದೆ. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಅಂಗವಿಕಲ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ:

ಅರ್ಜಿ ಸಲ್ಲಿಸುವುದು ಹೇಗೆ:

ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಕೇಂದ್ರ ಲೋಕ ಸೇವಾ ಆಯೋಗದ ಅಧಿಕೃತ ವೆಬ್‌ಸೈಟ್‌ https://www.upsc.gov.in/ ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸುವ ಮೂಲಕ ಅಕ್ಟೋಬರ್ 15,2020ರ ರಾತ್ರಿ 11:59ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
UPSC recruitment 2020 notification has been released for the recruitment of 42 assistant engineer, foreman and various posts. Interested candidates can apply through online before October 15.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X