UPSC Recruitment 2021 : 23 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಲೋಕಸೇವಾ ಆಯೋಗ (UPSC) ದಲ್ಲಿ 23 ಸಹಾಯಕ ಭೂವಿಜ್ಞಾನಿ, ಸಹಾಯಕ ನಿರ್ದೇಶಕರು ಮತ್ತು ಕೃಷಿ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ದೆಹಲಿಯಲ್ಲಿ ಅಥವಾ ಭಾರತದಲ್ಲಿ ಎಲ್ಲಿಯಾದರೂ ಪೂರ್ಣ ಸಮಯದ ಆಧಾರದ ಮೇಲೆ ಕೆಲಸ ಮಾಡಲು ಇಚ್ಚೆ ಇರುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಪ್ರಕ್ರಿಯೆಯು ಆಗಸ್ಟ್ 28, 2021 ರಿಂದ ಸೆಪ್ಟೆಂಬರ್ 16, 2021ರ ರಾತ್ರಿ 11:59ರ ವರೆಗೆ ನಡೆಯಲಿದೆ.

ಯುಪಿಎಸ್‌ಸಿ ನೇಮಕಾತಿ 2021 ವಿದ್ಯಾರ್ಹತೆ:

ಯುಪಿಎಸ್‌ಸಿ ನೇಮಕಾತಿ 2021 ವಿದ್ಯಾರ್ಹತೆ:

ಯುಪಿಎಸ್‌ಸಿ ನೇಮಕಾತಿಯ ಸಹಾಯಕ ಭೂವಿಜ್ಞಾನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭೂವಿಜ್ಞಾನ, ಅನ್ವಯಿಕ ಭೂವಿಜ್ಞಾನ, ಜಿಯೋ/ಖನಿಜ ಪರಿಶೋಧನೆ ಅಥವಾ ಇಂಜಿನಿಯರಿಂಗ್ ಭೂವಿಜ್ಞಾನ ಅಥವಾ ಭೂ-ರಸಾಯನಶಾಸ್ತ್ರ ಅಥವಾ ಸಾಗರ ಭೂವಿಜ್ಞಾನ ಅಥವಾ ಭೂ ವಿಜ್ಞಾನ ಮತ್ತು ಸಂಪನ್ಮೂಲ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ; ಎಲೆಕ್ಟ್ರಾನಿಕ್ಸ್ ಅಥವಾ ಇನ್ಸ್ಟ್ರುಮೆಂಟೇಶನ್ ಟೆಕ್ನಾಲಜಿ ಎಂಜಿನಿಯರಿಂಗ್ ಪದವಿ; ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಎಂ.ಎಸ್ಸಿ ಪದವಿಯನ್ನು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.

ಯುಪಿಎಸ್‌ಸಿ ನೇಮಕಾತಿ 2021 ವಯೋಮಿತಿ:

ಯುಪಿಎಸ್‌ಸಿ ನೇಮಕಾತಿ 2021 ವಯೋಮಿತಿ:

ಯುಪಿಎಸ್‌ಸಿ ಸಹಾಯಕ ಭೂವಿಜ್ಞಾನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕನಿಷ್ಟ 30 ರಿಂದ ಗರಿಷ್ಟ 35 ವರ್ಷ ವಯೋಮಿತಿಯೊಳಗಿರಬೇಕು. ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವರೆಗೆ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ವರೆಗೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಯುಪಿಎಸ್‌ಸಿ ನೇಮಕಾತಿ 2021 ವೇತನ ಶ್ರೇಣಿ:

ಯುಪಿಎಸ್‌ಸಿ ನೇಮಕಾತಿ 2021 ವೇತನ ಶ್ರೇಣಿ:

ಯುಪಿಎಸ್‌ಸಿ ನೇಮಕಾತಿಯ ಸಹಾಯಕ ಭೂವಿಜ್ಞಾನಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವೇತನವನ್ನು ನೀಡಲಾಗುತ್ತದೆ.

ಯುಪಿಎಸ್‌ಸಿ ನೇಮಕಾತಿ 2021 ಅರ್ಜಿ ಶುಲ್ಕ:

ಯುಪಿಎಸ್‌ಸಿ ನೇಮಕಾತಿ 2021 ಅರ್ಜಿ ಶುಲ್ಕ:

ಯುಪಿಎಸ್‌ಸಿ ಸಹಾಯಕ ಜಿಯಾಲಜಿಸ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿತ ಮೊತ್ತ 25/-ರೂ (ಜನ್/ಒಬಿಸಿ/ಇಡಬ್ಲ್ಯೂಎಸ್ ಪುರುಷ ಅಭ್ಯರ್ಥಿಗಳು) ಅರ್ಜಿ ಶುಲ್ಕವನ್ನು ಎಸ್‌ಬಿಐನ ಯಾವುದೇ ಶಾಖೆಯಲ್ಲಿ ನಗದು ಅಥವಾ ಎಸ್‌ಬಿಐನ ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಬಳಸಿ ಪಾವತಿಸಬಹುದು. ಯುಪಿಎಸ್ಸಿ ಅಧಿಸೂಚನೆ 2021 ರಲ್ಲಿ ಹೇಳಿರುವಂತೆ ಯಾವುದೇ ಸಮುದಾಯದ SC/ST/PwBD/ಮಹಿಳಾ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

ಯುಪಿಎಸ್‌ಸಿ ನೇಮಕಾತಿ 2021 ಆಯ್ಕೆ ಪ್ರಕ್ರಿಯೆ:

ಯುಪಿಎಸ್‌ಸಿ ನೇಮಕಾತಿ 2021 ಆಯ್ಕೆ ಪ್ರಕ್ರಿಯೆ:

ಯುಪಿಎಸ್‌ಸಿ ನೇಮಕಾತಿಯ ಸಹಾಯಕ ಭೂವಿಜ್ಞಾನಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನ ಮತ್ತು ದಾಖಲೆ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುವುದು.

ಯುಪಿಎಸ್‌ಸಿ ನೇಮಕಾತಿ 2021 ಅರ್ಜಿ ಸಲ್ಲಿಕೆ:

ಯುಪಿಎಸ್‌ಸಿ ನೇಮಕಾತಿ 2021 ಅರ್ಜಿ ಸಲ್ಲಿಕೆ:

ಯುಪಿಎಸ್‌ಸಿ ಸಹಾಯಕ ಭೂವಿಜ್ಞಾನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ https://www.upsconline.nic.in/ora/VacancyNoticePub.php ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಆಗಸ್ಟ್ 28,2021 ರಿಂದ ಸೆಪ್ಟೆಂಬರ್ 16,2021ರ ರಾತ್ರಿ 11:59ರೊಳಗೆ ಅರ್ಜಿಯನ್ನು ಹಾಕಲು ಅವಕಾಶ ನೀಡಲಾಗಿರುತ್ತದೆ.

ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

More News  

For Quick Alerts
ALLOW NOTIFICATIONS  
For Daily Alerts

English summary
UPSC recruitment 2021 notification has been released for 23 AG, AE and AD posts. Interested candidates can apply before september 16.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+