UPSC Recruitment : 151 ಡೆಪ್ಯುಟಿ ಡೈರೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿರುವ ನೌಕರರ ರಾಜ್ಯ ವಿಮಾ ನಿಗಮ (ಇಎಸ್‌ಐಸಿ) ಯುಪಿಎಸ್‌ಸಿ ಉಪ ನಿರ್ದೇಶಕರ ನೇಮಕಾತಿಯ ಮೂಲಕ ಇಎಸ್‌ಐಸಿಯಲ್ಲಿ ಉಪ ನಿರ್ದೇಶಕರ 151 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಮತ್ತು ಅನುಭವಿ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ದೆಹಲಿಯಲ್ಲಿ ಅಥವಾ ಭಾರತದಲ್ಲಿ ಎಲ್ಲಿಯಾದರೂ ಪೂರ್ಣ ಸಮಯದ ಆಧಾರದ ಮೇಲೆ ಕಾರ್ಯ ನಿರ್ವಹಿಸಲು ಸಿದ್ದರಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ಅರ್ಜಿ ಪ್ರಕ್ರಿಯೆಯು ಆಗಸ್ಟ್ 13, 2021 ರಿಂದ ಸೆಪ್ಟೆಂಬರ್ 02, 2021ರ ರಾತ್ರಿ 11:59ರ ವರೆಗೆ ನಡೆಯಲಿದೆ.

ಯುಪಿಎಸ್‌ಸಿ ಉಪನಿರ್ದೇಶಕರ ನೇಮಕಾತಿ 2021 ವಿದ್ಯಾರ್ಹತೆ ಮತ್ತು ಅನುಭವ :

ಯುಪಿಎಸ್‌ಸಿ ಉಪನಿರ್ದೇಶಕರ ನೇಮಕಾತಿ 2021 ವಿದ್ಯಾರ್ಹತೆ ಮತ್ತು ಅನುಭವ :

ಯುಪಿಎಸ್ಸಿ ಡೆಪ್ಯೂಟಿ ಡೈರೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಪದವಿ ವಿದ್ಯಾರ್ಹತೆ ಹೊಂದಿರಬೇಕು ಜೊತೆಗೆ ಆಡಳಿತ/ಅಕೌಂಟ್ಸ್/ಮಾರ್ಕೆಟಿಂಗ್/ಸಾರ್ವಜನಿಕ ಸಂಬಂಧ ಕ್ಷೇತ್ರದಲ್ಲಿ/ಸರ್ಕಾರ ಅಥವಾ ಸಾರ್ವಜನಿಕ ವಲಯದ ಅಂಡರ್ಟೇಕಿಂಗ್ ಅಥವಾ ಸ್ವಾಯತ್ತ ಸಂಸ್ಥೆಯಲ್ಲಿ ವಿಮೆ ಅಥವಾ ಆದಾಯ ಅಥವಾ ತೆರಿಗೆ ಸಂಬಂಧಿತ ವಿಷಯಗಳಲ್ಲಿ ಮೂರು ವರ್ಷಗಳ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.

ಯುಪಿಎಸ್‌ಸಿ ಉಪನಿರ್ದೇಶಕರ ನೇಮಕಾತಿ 2021 ವಯೋಮಿತಿ:

ಯುಪಿಎಸ್‌ಸಿ ಉಪನಿರ್ದೇಶಕರ ನೇಮಕಾತಿ 2021 ವಯೋಮಿತಿ:

ಯುಪಿಎಸ್‌ಸಿ ಉಪನಿರ್ದೇಶಕರ ನೇಮಕಾತಿ 2021 ರ ಮೂಲಕ ಯುಪಿಎಸ್‌ಸಿ ಉಪನಿರ್ದೇಶಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳ ವಯೋಮಿತಿಯು ಗರಿಷ್ಟ 35 ವರ್ಷ ಮೀರಿರಬಾರದು. ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳವರೆಗೆ ಮತ್ತು ಪ.ಜಾ/ಪ.ಪಂ ಅಭ್ಯರ್ಥಿಗಳಿಗೆ 5 ವರ್ಷಗಳು (ಎಸ್‌ಸಿ/ಎಸ್‌ಟಿ) ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುವುದಾಗಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಯುಪಿಎಸ್‌ಸಿ ಉಪನಿರ್ದೇಶಕರ ನೇಮಕಾತಿ 2021 ಅರ್ಜಿ ಶುಲ್ಕ:

ಯುಪಿಎಸ್‌ಸಿ ಉಪನಿರ್ದೇಶಕರ ನೇಮಕಾತಿ 2021 ಅರ್ಜಿ ಶುಲ್ಕ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿತ ಮೊತ್ತ 25/-ರೂ (ಜನ್/ಒಬಿಸಿ/ಇಡಬ್ಲ್ಯೂಎಸ್ ಪುರುಷ ಅಭ್ಯರ್ಥಿಗಳು) ಅನ್ನು ಎಸ್‌ಬಿಐನ ಯಾವುದೇ ಶಾಖೆಯಲ್ಲಿ ನಗದು ಅಥವಾ ಎಸ್‌ಬಿಐನ ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಬಳಸಿ ಪಾವತಿಸಬಹುದು. ಅದಲ್ಲದೇ ಯುಪಿಎಸ್ಸಿ ಉಪ ನಿರ್ದೇಶಕರ ನೇಮಕಾತಿ ಅಧಿಸೂಚನೆ 2021 ರಲ್ಲಿ ಹೇಳಿರುವಂತೆ SC/ST/PwBD/ಮಹಿಳಾ ಅಭ್ಯರ್ಥಿಗಳು ಶುಲ್ಕ ವಿನಾಯಿತಿಯನ್ನು ಹೊಂದಿರುತ್ತಾರೆ.

ಯುಪಿಎಸ್‌ಸಿ ಉಪನಿರ್ದೇಶಕರ ನೇಮಕಾತಿ 2021 ಆಯ್ಕೆ ಪ್ರಕ್ರಿಯೆ ಮತ್ತು ವೇತನ:

ಯುಪಿಎಸ್‌ಸಿ ಉಪನಿರ್ದೇಶಕರ ನೇಮಕಾತಿ 2021 ಆಯ್ಕೆ ಪ್ರಕ್ರಿಯೆ ಮತ್ತು ವೇತನ:

ಯುಪಿಎಸ್‌ಸಿ ಉಪ ನಿರ್ದೇಶಕರ ಅಧಿಸೂಚನೆ 2021ರಲ್ಲಿ ಸೂಚಿಸಿದಂತೆ ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಪರೀಕ್ಷೆ (ಆರ್‌ಟಿ)/ಸಂದರ್ಶನ ಮತ್ತು ದಾಖಲೆ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುತ್ತದೆ.

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವೇತನವನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಓದಿಕೊಳ್ಳಬಹುದು.

ಯುಪಿಎಸ್‌ಸಿ ಉಪನಿರ್ದೇಶಕರ ನೇಮಕಾತಿ 2021 ಅರ್ಜಿ ಸಲ್ಲಿಕೆ :

ಯುಪಿಎಸ್‌ಸಿ ಉಪನಿರ್ದೇಶಕರ ನೇಮಕಾತಿ 2021 ಅರ್ಜಿ ಸಲ್ಲಿಕೆ :

ಯುಪಿಎಸ್‌ಸಿ ಡೆಪ್ಯೂಟಿ ಡೈರೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ https://www.upsconline.nic.in/ora/VacancyNoticePub.php ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಸೆಪ್ಟೆಂಬರ್ 2,2021ರ ರಾತ್ರಿ 11:59ರೊಳಲಗೆ ಅರ್ಜಿಯನ್ನು ಹಾಕಬಹುದು.

ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

More News  

For Quick Alerts
ALLOW NOTIFICATIONS  
For Daily Alerts

English summary
UPSC recruitment 2021 notification has been released for 151 ESIC deputy director posts. Interested candidates can apply before september 2,2021.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+