ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ಮಾರ್ಗಸೂಚಿಗಳಿಗನುಗುಣವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯಾದಗಿರಿ ಜಿಲ್ಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಛೇರಿಯಲ್ಲಿ ಖಾಲಿ ಇರುವ ಈ ಕೆಳಗಿನ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ತಾತ್ಪೂರ್ತಿಕವಾಗಿ ಸೇವೆ ಸಲ್ಲಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ
ಸಮಾಲೋಚಕರು-01 ಹುದ್ದೆ
ವಿದ್ಯಾರ್ಹತೆ: ಎಂಫಿಲ್ ಸೈಕಾಟ್ರಿಕ್ ಸೋಷಿಯಲ್ ವರ್ಕ್ ಅಥವಾ ಎಂ,ಎ/ಎಂ.ಎಸ್ಸಿ ಮನೋವಿಜ್ಞಾನ ಜೊತೆಗೆ ಡಿಪ್ಲೊಮಾ ಇನ್ ಕ್ಲಿನಿಕಲ್ ಸೈಕಾಲಜಿ.
ವಯೋಮಿತಿ: 25 ರಿಂದ 45 ವರ್ಷ
ಮಾಸಿಕ ಗೌರವಧನ: 14000/-
ಲೆಕ್ಕಿಗರು-01 ಹುದ್ದೆ
ವಿದ್ಯಾರ್ಹತೆ: ಬಿ.ಕಾಂ ಪದವಿ, ೩ ವರ್ಷ ಅಕೌಂಟಿಂಗ್ ಅನುಭವ ಕಂಪ್ಯೂಟರ್ ಜ್ಞಾನ ಹೊಂದಿರತಕ್ಕದ್ದು. ಸರ್ಕಾರಿ ಹುದ್ದೆಯಿಂದ ನಿವೃತ್ತಿ ಹೊಂದಿದವರು ಕೂಡ ಅರ್ಜಿ ಸಲ್ಲಿಸಬಹುದಾಗಿದೆ (ಲೆಕ್ಕಿಗದಲ್ಲಿ ಅನುಭವ)
ಮಾಸಿಕ ಗೌರವಧನ: 14000/-
ಕಂಪ್ಯೂಟರ್ ಜ್ಞಾನದ ಬಗ್ಗೆ ಖಾತ್ರಿ ಪಡಿಸಿಕೊಂಡು ಕೌಶಲ್ಯ ಪರೀಕ್ಷೆ ನಡೆಸಿ ಸಂದರ್ಶನ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಅಭ್ಯರ್ಥಿಗಳ ಆಯ್ಕೆಯು 03 ವರ್ಷಗಳಿಗೆ ಮಾತ್ರ ಸೀಮಿತವಾಗಿರುತ್ತದೆ.
ಅರ್ಜಿ ಜೊತೆಗೆ ರೂ.100/- ಗಳ ಡಿಡಿಯನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಯಾದಗಿರಿ ರವರ ಹೆಸರಿನಲ್ಲಿ ಪಡೆದು ಲಗತ್ತಿಸುವುದು.
ಭರ್ತಿ ಮಾಡಿದ ಅರ್ಜಿಗಳನ್ನು ಡಿ ಡಿ ಮತ್ತು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಕೋಣೆ ಸಂಖ್ಯೆ: ಸಿ-17, ಒಂದನೇ ಮಹಡಿ, ಜಿಲ್ಲಾ ಆಡಳಿತ ಭವನ ಸಂಕೀರ್ಣ, ಯಾದಗಿರಿ, ಇಲ್ಲಿಗೆ ಕಳಹಿಸಲು ಕೋರಲಾಗಿದೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27-11-2017
ಹೆಚ್ಚಿನ ಮಾಹಿತಿಗಾಗಿ www.yadgir.nic.in ಗಮನಿಸಿ


Click it and Unblock the Notifications











