ವಿಜಯಪುರ ಜಿಲ್ಲಾ ನ್ಯಾಯಾಲಯದ 22 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಜಯಪುರ ಜಿಲ್ಲೆಯ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್ ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಲು 17.1.2019 ಕೊನೆಯ ದಿನವಾಗಿದೆ.

ವಿಜಯಪುರ ನ್ಯಾಯಾಲಯದಲ್ಲಿ ಖಾಲಿ ಇರುವ 8ಬೆರಳಚ್ಚುಗಾರರು, 2 ಪ್ರೊಸೆಸ್ ಸರ್ವರ್, 10ಜವಾನರು, 2 ಶೀಘ್ರಲಿಪಿಗಾರರು ಒಟ್ಟು 22 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಜಿಲ್ಲಾ ನ್ಯಾಯಾಲಯದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

 

CRITERIA DETAILS
Name Of The Posts ಶೀಘ್ರಲಿಪಿಗಾರರು, ಬೆರಳಚ್ಚುಗಾರರು, ಪ್ರೊಸೆಸ್ ಸರ್ವರ್ & ಜವಾನರು
Organisation ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ
Application Start Date December 17, 2018
Application End Date January 17, 2019

ವಿದ್ಯಾರ್ಹತೆ:

ಶೀಘ್ರಲಿಪಿಗಾರರು ,ಬೆರಳಚ್ಚುಗಾರರು ಮತ್ತು ಪ್ರೊಸೆಸ್ ಸರ್ವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿ ಪಡಿಸಿರುವ ಕಡೆಯ ದಿನಾಂಕದ ಒಳಗಾಗಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.

ಶೀಘ್ರಲಿಪಿಗಾರರು ಹುದ್ದೆಗಳಿಗೆ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪ್ರೌಢ ದರ್ಜೆ (ಸೀನಿಯರ್ ಗ್ರೇಡ್) ಹಾಗೂ ಕನ್ನಡ ಮತ್ತು ಆಂಗ್ಲ ಶೀಘ್ರಲಿಪಿ ಪ್ರೌಢ ದರ್ಜೆ (ಸೀನಿಯರ್ ಗ್ರೇಡ್) ಪರೀಕ್ಷೆಯಲ್ಲಿ ತೇರ್ಗಡೆ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಹೊಂದಿರಬೇಕು.

ಬೆರಳಚ್ಚುಗಾರರು ಹುದ್ದೆಗಳಿಗೆ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪ್ರೌಢ ದರ್ಜೆ (ಸೀನಿಯರ್ ಗ್ರೇಡ್) ಪರೀಕ್ಷೆಯಲ್ಲಿ ತೇರ್ಗಡೆ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಹೊಂದಿರಬೇಕು.

 

ಪ್ರೊಸೆಸ್ ಸರ್ವರ್ ಹುದ್ದೆಗಳಿಗೆ ಅರ್ಜಿ ಸರ್ವರ್ ಹುದ್ದೆಗಳಿಗೆ ಅಭ್ಯರ್ಥಿಗಳು ಭಾರಿ/ಲಘುವಾಹನ ಚಾಲನೆ ಪರಿವಾನಗಿ ಹೊಂದಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಜವಾನ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿ ಪಡಿಸಿರುವ ಕಡೆಯ ದಿನಾಂಕದ ಒಳಗಾಗಿ 7ನೇ ತರಗತಿಯ ಪರೀಕ್ಷೆಯಲ್ಲಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು.

ಶೀಘ್ರಲಿಪಿಗಾರರು (Stenographer)(ಬ್ಯಾಕ್ ಲಾಗ್) :

ಹುದ್ದೆಗಳ ವರ್ಗೀಕರಣ:

ವರ್ಗಮಹಿಳೆ ಗ್ರಾಮೀಣ ಯೋ.ನಿ.ಅಮಾ.ಸೈ.ಅಂ.ಅ ಕ.ಮಾ.ಅ ಇತರೆಒಟ್ಟು
ಸಾಮಾನ್ಯ - - - -- - - -
ಪ್ರವರ್ಗ-3A 01 - - - - - - 01
ಪ.ಜಾ 01 - - - - - - 01
ಒಟ್ಟು 02 - - - - - - 02

ಶೀಘ್ರಲಿಪಿಗಾರರು (Stenographer):

ಹುದ್ದೆಗಳ ವರ್ಗೀಕರಣ:

ವರ್ಗಮಹಿಳೆಗ್ರಾಮೀಣಯೋ.ನಿ.ಅಮಾ.ಸೈ.ಅಂ.ಅ ಕ.ಮಾ.ಅಇತರೆ ಒಟ್ಟು
ಸಾಮಾನ್ಯ - - - - - - 01 01
ಪ್ರವರ್ಗ-2A - 01 - - - - - 01
ಒಟ್ಟು - 01 - - - - 01 02

ವಿಶೇಷ ಸೂಚನೆ: ಪ್ರವರ್ಗ-2A ಅಡಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗೆ ನೇಮಕಾತಿ ಆದೇಶವನ್ನು ೪ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯ ವಿಜಯಪುರದ ಕಾರ್ಯಾರಂಭವಾದ ನಂತರ ನೀಡಲಾಗುವುದು.

ಬೆರಳಚ್ಚುಗಾರರು(Typist):

ಹುದ್ದೆಗಳ ವರ್ಗೀಕರಣ:

ವರ್ಗಮಹಿಳೆಗ್ರಾಮೀಣಯೋ.ನಿ.ಅಮಾ.ಸೈ.ಅಂ.ಅಕ.ಮಾ.ಅ ಇತರೆ ಒಟ್ಟು
ಸಾಮಾನ್ಯ 01 01 - 01 - - 01 04
ಪ್ರವರ್ಗ-1 - 01 - - - - - 01
ಪ್ರವರ್ಗ-2A - - - 01 - - - 01
ಪ್ರವರ್ಗ-2B - 01 - - - - - 01
ಪ.ಜಾ- - - 01 - - - 01
ಒಟ್ಟು 01 03 - 03 - - 01 08
ವಿಶೇಷ ಸೂಚನೆ: ಸಾಮಾನ್ಯ ವರ್ಗದ- ಮಹಿಳೆ ಅಡಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗೆ ನೇಮಕಾತಿ ಆದೇಶವನ್ನು ೪ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯ ವಿಜಯಪುರದ ಕಾರ್ಯಾರಂಭವಾದ ನಂತರ ನೀಡಲಾಗುವುದು.

ಪ್ರೊಸೆಸ್ ಸರ್ವರ್:

ಹುದ್ದೆಗಳ ವರ್ಗೀಕರಣ:

ವರ್ಗಮಹಿಳೆಗ್ರಾಮೀಣಯೋ.ನಿ.ಅಮಾ.ಸೈ.ಅಂ.ಅ ಕ.ಮಾ.ಅಇತರೆ ಒಟ್ಟು
ಸಾಮಾನ್ಯ - 01 - - - - - 01
ಪ.ಜಾ - 01 - -- - - 01
ಒಟ್ಟು - 02 - - - - - 02

ಜವಾನರು:

ಹುದ್ದೆಗಳ ವರ್ಗೀಕರಣ:

ವರ್ಗಮಹಿಳೆಗ್ರಾಮೀಣಯೋ.ನಿ.ಅಮಾ.ಸೈ.ಅಂ.ಅ ಕ.ಮಾ.ಅಇತರೆ ಒಟ್ಟು
ಸಾಮಾನ್ಯ 02 01 - - - 01 01 05
ಪ್ರವರ್ಗ-1 01 - - - - - -01
ಪ್ರವರ್ಗ-2A - 01 - - - - - 01
ಪ್ರವರ್ಗ-2B 01 - - - - - - 01
ಪ.ಜಾ - - 01 - - - - 01
ಪ.ಪಂ - - - - 01** - - 01
ಒಟ್ಟು 04 02 01- 01 01 01 10

ವಿಶೇಷ ಸೂಚನೆ: ಸಾಮಾನ್ಯ ವರ್ಗದ- ಮಹಿಳೆ (1ಹುದ್ದೆ) ಮತ್ತು ಪ್ರವರ್ಗ-2B-ಮಹಿಳೆ ಅಡಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ೪ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯ ವಿಜಯಪುರದ ಕಾರ್ಯಾರಂಭವಾದ ನಂತರ ನೀಡಲಾಗುವುದು.

ಯೋ.ನಿ.ಅ- ಯೋಜನಾ ನಿರಾಶ್ರಿತ ಅಭ್ಯರ್ಥಿ

ಮಾ.ಸೈ.- ಮಾಜಿ ಸೈನಿಕ

ಅಂ.ಅ - ಅಂಗವಿಕಲ ಅಭ್ಯರ್ಥಿ

ಕ.ಮಾ.ಅ.- ಕನ್ನಡ ಮಾಧ್ಯಮ ಅಭ್ಯರ್ಥಿ

** ದೃಷ್ಟಿಮಾಂದ್ಯ ಅಭ್ಯರ್ಥಿಗೆ ಮೀಸಲಾಗಿದೆ.

ವೇತನದ ವಿವರ:

ಹುದ್ದೆಗಳ ಹೆಸರು ವೇತನ ಶ್ರೇಣಿ
ಶೀಘ್ರಲಿಪಿಗಾರರು ರೂ. 27,650/- ರಿಂದ 52,650/-ರೂ

ಬೆರಳಚ್ಚುಗಾರರು ರೂ. 21,400/- ರಿಂದ 42,000/-ರೂ
ಪ್ರೊಸೆಸ್ ಸರ್ವರ್ ರೂ.19,950 ರಿಂದ 37900/-ರೂ
ಜವಾನರು ರೂ.17,000/- ರಿಂದ 28,950/-ರೂ

ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿ ಹೊಂದಿರಬೇಕು.

ಪ.ಜಾತಿ, ಪ.ಪಂಗಡ ಹಾಗೂ ಪ್ರವರ್ಗ-1ಗರಿಷ್ಠ 40 ವಯೋಮಿತಿ ಮೀರಿರಬಾರದು

ಪ್ರವರ್ಗ2A,2B,3A ಮತ್ತು 3Bಗರಿಷ್ಠ 38 ವಯೋಮಿತಿ ಮೀರಿರಬಾರದು

ಸಾಮಾನ್ಯಗರಿಷ್ಠ 35 ವಯೋಮಿತಿ ಮೀರಿರಬಾರದು

ವಯೋಮಿತಿ ಸಡಿಲಿಕೆ:

ಮಾಜಿ ಸೈನಿಕರಿಗೆ ಗರಿಷ್ಠ ವಯೋಮಿತಿಯಲ್ಲಿ ಅವರು ಸಶಸ್ತ್ರ ದಳಗಳಲ್ಲಿ ಎಷ್ಟು ವರ್ಷ ಸೇವೆ ಸಲ್ಲಿಸಿರುವರೋ ಆ ವರ್ಷಗಳಿಗೆ ಮೂರು ವರ್ಷಗಳನ್ನು ಸೇರಿಸಿದರೆ ಎಷ್ಟು ವರ್ಷಗಳಾಗುವುದೋ ಅಷ್ಟು ವರ್ಷಗಳ ಸಡಿಲಿಕೆ.

ವಿಧವೆಯರು, ಜೀತಕಾರ್ಮಿಕರು ಮತ್ತು ಅಂಗವಿಕಲರು ಸಂಬಂಧಿಸಿದ ಪ್ರಾಧಿಕಾರಗಳು ನೀಡುವ ಪ್ರಮಾಣ ಪತ್ರ ಹೊಂದಿದ್ದಲ್ಲಿ ವಯೋಮಿತಿಯಲ್ಲಿ ಗರಿಷ್ಠ 10 ವರ್ಷಗಳ ಸಡಿಲಿಕೆ ನೀಡಲಾಗುವುದು.

ಅಭ್ಯರ್ಥಿಯು ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಅಥವಾ ಸ್ಥಳೀಯ ಪ್ರಾಧಿಕಾರದಲ್ಲಿ ಅಥವಾ ರಾಜ್ಯ ಅಧಿನಿಯಮ ಅಥವಾ ಕೇಂದ್ರ ರಾಜ್ಯ ಸರ್ಕಾರದ ಸ್ವಾಮ್ಯ ಅಥವಾ ನಿಯಂತ್ರಣದಲ್ಲಿರುವ ನಿಗಮದಲ್ಲಿ ಹುದ್ದೆ ಹೊಂದಿರುವ ಅಥವಾ ಹಿಂದೆ ಹೊಂದಿದ್ದಲ್ಲಿ ಗರಿಷ್ಠ ವಯೋಮಿತಿಯನ್ನು ಅವರು ಎಷ್ಟು ವರ್ಷಗಳ ಅವಧಿಗೆ ಹುದ್ದೆಯಲ್ಲಿ ಸೇವೆ ಸಲ್ಲಿಸಿರುವರೋ ಅಥವಾ ಹಿಂದೆ ಸಲ್ಲಿಸಿದ್ದರೋ ಅಷ್ಟು ವರ್ಷಗಳ ಅಥವಾ 10 ವರ್ಷಗಳ ಅವಧಿ, ಎರಡರಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳ ಸಡಿಲಿಕೆಯನ್ನು ನೀಡಲಾಗುವುದು.

ಅಭ್ಯರ್ಥಿಯು ಕರ್ನಾಟಕ ರಾಜ್ಯದಲ್ಲಿರುವ ಭಾರತ ಸರ್ಕಾರದ ಜನಗಣತಿ ಸಂಸ್ಥೆಯಲ್ಲಿ ಈಗ ಹುದ್ದೆಯನ್ನು ಹೊಂದಿದ್ದ ಪಕ್ಷದಲ್ಲಿ ಗರಿಷ್ಠ ವಯೋಮಿತಿಯನ್ನು ಅಭ್ಯರ್ಥಿಯು ಎಷ್ಟು ವ‍ರ್ಷಗಳ ಅವಧಿಗೆ ಆ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವರೋ ಅಥವಾ ಹಿಂದೆ ಸೇವೆ ಸಲ್ಲಿಸಿದ್ದರೆ ಅಷ್ಟು ವರ್ಷಗಳ ಅಥವಾ 05 ವರ್ಷಗಳ ಅವಧಿ, ಅದರಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳು.

ಅಭ್ಯರ್ಥಿಯು ನ್ಯಾಷನಲ್ ಕೆಡೆಟ್ ಕಾರ್ಪ್ಸ್ ಲ್ಲಿ ಪೂರ್ಣ ಕಾಲಿಕ ಪರೀಕ್ಷಕರಾಗಿ ಸೇವೆ ಸಲ್ಲಿಸಿ ಬಿಡುಗಡೆಯಾಗಿರುವ ವ್ಯಕ್ತಿಯಾಗಿರುವ ವ್ಯಕ್ತಿಯಾಗಿದ್ದರೆ ಅಂತಹ ಕೆಡೆಟ್ ಪರೀಕ್ಷಕನಾಗಿ ಸೇವೆ ಸಲ್ಲಿಸಿದ್ದಷ್ಟು ವರ್ಷಗಳು.

ಅಭ್ಯರ್ಥಿಗಳು ರಾಜ್ಯ ಸರ್ಕಾರದಿಂದ ಪುರಸ್ಕೃತವಾದ ಗ್ರಾಮೀಣ ಔದ್ಯಮೀಕರಣ ಯೋಜನೆಯ ಮೇರೆಗೆ ನೇಮಕಗೊಂಡ ಗ್ರಾಮ ಸಮೂಹ ಪರಿಶೀಲಕರಾಗಿ ಈಗ ಕೆಲಸ ಮಾಡುತ್ತಿದ್ದರೆ ಅಥವಾ ಹಿಂದೆ ಇದ್ದ ಪಕ್ಷದಲ್ಲಿ ಅಂತಹ ಗ್ರಾಮ ಸಮೂಹ ಪರಿಶೀಲಕರಾಗಿ ಸೇವೆ ಸಲ್ಲಿಸಿದ ವರ್ಷಗಳು.

ಆಯ್ಕೆ ವಿಧಾನ:

ಶೀಘ್ರಲಿಪಿಗಾರರು ಹುದ್ದೆಗಳಿಗೆ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಉಕ್ತಲೇಖನವನ್ನು ಕೊಟ್ಟು ಬೆರಳಚ್ಚು ಯಂತ್ರ/ ಕಂಪ್ಯೂಟರ್ ನಲ್ಲಿ ಬೆರಳಚ್ಚು ಮಾಡಿಸಿ ಅರ್ಹತಾ ಪರೀಕ್ಷೆ ನಡೆಸಲಾಗುವುದು. ಅರ್ಹತಾ ಪರೀಕ್ಷೆಗಳಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳು ಮತ್ತು ನಿಮಿಷ ಒಂದಕ್ಕೆ 120 ಪದಗಳ ದರದಲ್ಲಿ 5 ನಿಮಿಷಗಳ ಉಕ್ತಲೇಖನವನ್ನು ತೆಗೆದುಕೊಂಡು, ಉಕ್ತಲೇಖನವನ್ನು 45 ನಿಮಿಷಗಳಲ್ಲಿ ಅನುಲಿಪಿ ಮಾಡುವ "ಸಾಮರ್ಥ್ಯ ಪರೀಕ್ಷೆಯಲ್ಲಿ" ಗಳಿಸುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಬೆರಳಚ್ಚುಗಾರರು ಹುದ್ದೆಗಳಿಗೆ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಬೆರಳಚ್ಚು ಯಂತ್ರ/ ಕಂಪ್ಯೂಟರ್ ನಲ್ಲಿ ಬೆರಳಚ್ಚು ಮಾಡಿಸಿ ಅರ್ಹತಾ ಪರೀಕ್ಷೆ ನಡೆಸಲಾಗುವುದು. ಅರ್ಹತಾ ಪರೀಕ್ಷೆಗಳಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳು ಮತ್ತು 15ನಿಮಿಷಗಳ ಉಕ್ತಲೇಖನದಲ್ಲಿ ಕೊಡುವ ವಿಷಯವನ್ನು ಬೆರಳಚ್ಚು ಮಾಡುವ "ಸಾಮರ್ಥ್ಯ ಪರೀಕ್ಷೆಯಲ್ಲಿ" ಗಳಿಸುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಪ್ರೊಸೆಸ್ ಸರ್ವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮ ಹಾಗೂ ಅಧೀನ ನ್ಯಾಯಾಲಯಗಳ ನಿಯಮಗಳ ಪ್ರಕಾರ ನೇಮಕಾತಿಯನ್ನು ನಡೆಸಲಾಗುವುದು.

ಜವಾನ ಹುದ್ದೆಗೆ 7ನೇ ತರಗತಿ ಪರೀಕ್ಷೆಯಲ್ಲಿ ಪಡೆದ ಗರಿಷ್ಠ ಅಂಕಗಳ ಅರ್ಹತೆಯ ಆಧಾರದ ಮೇಲೆ ಒಂದು ಹುದ್ದೆಗೆ 10 ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನದಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ:

ನಿಗದಿತ ಅರ್ಜಿ ಶುಲ್ಕ, ಪಾವತಿಸಬೇಕಾದ ಶುಲ್ಕ ಹಾಗೂ ವಿಧಾನ:

ಸಾಮಾನ್ಯ ವರ್ಗ,ಪ್ರವರ್ಗ-2A,2B, 3Aಮತ್ತು 3Bಗೆ ಸೇರಿದ ಅಭ್ಯರ್ಥಿಗಳಿಗೆರೂ.200/-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ- 1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆರೂ.100/-

ನಿಗದಿತ ಶುಲ್ಕವನ್ನು ನ್ಯಾಯಾಲಯದ ವೆಬ್ ಸೈಟ್ http://districts.ecourts.gov.in/vijayapura ರಲ್ಲಿ ನೀಡಲಾದ ಲಿಂಕ್ ಮುಖಾಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ State Bank Collect ಮೂಲಕ Online Payment ಅನ್ನು net banking/credit card/ debit card/challan downloadಸೌಲಭ್ಯದ ಮೂಲಕ ಪಾವತಿ ಮಾಡಬಹುದಾಗಿದೆ.

ಈ ರೀತಿ net banking/credit card/ debit card/challan downloadಸೌಲಭ್ಯದ ಮೂಲಕ ಶುಲ್ಕ ಪಾವತಿ ಮಾಡಲು ಇಚ್ಛಿಸದ ಅಭ್ಯರ್ಥಿಗಳು ಚಲನ್ ಪ್ರತಿಯನ್ನು ಅಧಿಕೃತ ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡಿಕೊಂಡು ಅದರ ಪ್ರಿಂಟೌಟ್ ಅನ್ನು ಪಡೆದುಕೊಂಡು ಎಸ್.ಬಿ.ಐ ನ ಯಾವುದೇ ಶಾಖೆಗೆ ಹಾಜರುಪಡಿಸಿ ಶುಲ್ಕವನ್ನು ಪಾವತಿಸತಕ್ಕದ್ದು. ಭಾರತೀಯ ಸ್ಟೇಟ್ ಬ್ಯಾಂಕ್ ಚಲನ್ ಮುಖಾಂತರ ಶುಲ್ಕ ಪಾವತಿಸಲು ಕಡೆಯ ದಿನಾಂಕ 19.01.2019.

ಆನ್ ಲೈನ್ ಹೊರತುಪಡಿಸಿ ಇತರೆ ಯಾವುದೇ ವಿಧಾನದಲ್ಲಿ ಕಳುಹಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.ಈ ಹುದ್ದೆಗೆ ಸಂಬಂಧಪಟ್ಟ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಅಥವಾ ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
District Court of Vijayapura has invited application for the 22 various posts.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more