ಕೋಲಾರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಆರು ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 53 ಅಂಗನವಾಡಿ ಕಾರ್ಯಕರ್ತೆ ಮತ್ತು 205 ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸ ಬೇಕಾಗಿದ್ದು, ಸೆಪ್ಟಂಬರ್ 29, 2018 ಕೊನೆಯ ದಿನಾಂಕ.

- ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಪ್ರಾರಂಭದ ದಿನಾಂಕ : 29.08.2018
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29.09.2018 ಸಂಜೆ 5.30
| ತಾಲೂಕಿನ ಹೆಸರು | ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳ ಸಂಖ್ಯೆ |
| ಕೋಲಾರ | 11 |
| ಬಂಗಾರಪೇಟೆ | 13 |
| ಮಾಲೂರು | 6 |
| ಮುಳಬಾಗಿಲು | 7 |
| ಶ್ರೀನಿವಾಸಪುರ | 11 |
| ಬೇತಮಂಗಲ | 5 |
| ಒಟ್ಟು | 53 |
Also Read: ಬಿಎಸ್ಎನ್ಎಲ್ ನಲ್ಲಿ ಚೇರ್ ಮನ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ
ಕೋಲಾರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
| CRITERIA | DETAILS |
| Name Of The Posts | ಅಂಗನವಾಡಿ ಕಾರ್ಯಕರ್ತೆ ಹುದ್ದೆ |
| Organisation | ಕೋಲಾರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ |
| Educational Qualification | ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು |
| Skills Required | ಕನ್ನಡ ಭಾಷೆ ತಿಳಿದಿರಬೇಕು |
| Job Location | ಕೋಲಾರ |
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
ಸ್ಟೆಪ್ 1
ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ
ಸ್ಟೆಪ್ 2
ಎಲ್ಲೆಲ್ಲಿ ಹುದ್ದೆ ಖಾಲಿ ಇದೆ ಎಂದು ಲಿಸ್ಟ್ ಮೂಡುತ್ತದೆ
ಸ್ಟೆಪ್ 3
ಕೋಲಾರ ಲಿಸ್ಟ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4
ಪಿಡಿಎಫ್ ಫೈಲ್ ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ
ಸ್ಟೆಪ್ 5
ಮತ್ತೆ ಹೋಮ್‌ಪೇಜ್‌ಗೆ ಹಿಂತಿರುಗಿ ಅಲ್ಲಿ ನೇಮಕಾತಿ ಬಯಸುವ ಜೆಲ್ಲೆ ಹಾಗೂ ನೇಮಕಾತಿ ಬಯಸುವ ಹುದ್ದೆಯನ್ನ ನಮೂದಿಸಿ
ಸ್ಟೆಪ್ 6
ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ
ಸ್ಟೆಪ್ 7
ಅರ್ಜಿ ಭರ್ತಿ ಕುರಿತು ಮಾಹಿತಿ ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ
ಸ್ಟೆಪ್ 8
ಅರ್ಜಿಯನ್ನ ಭರ್ತಿ ಮಾಡಿ
ಸ್ಟೆಪ್ 9
ಪಾಸ್‌ಪೋರ್ಟ್ ಸೈಜ್ ಫೋಟೋವನ್ನ ಅಪ್‌ಲೋಡ್ ಮಾಡಿ
ಸ್ಟೆಪ್ 10
ಅರ್ಜಿ ಪೂರ್ತಿಯಾಗಿ ಭರ್ತಿ ಮಾಡಿದ ಬಳಿಕ ಪ್ರೀವ್ಯೂ ಬಟನ್ ಕ್ಲಿಕ್ ಮಾಡಿ


Click it and Unblock the Notifications











