ರೈಲ್ವೇ ಇಲಾಖೆ ನೇಮಕಾತಿ ಪರೀಕ್ಷೆಗೆ ಓದಲು ಯಾವ ಪುಸಕ್ತ ಬೆಸ್ಟ್ ಗೊತ್ತಾ?

By Nishmitha B

ದೇಶದಲ್ಲಿ ಪ್ರತಿವರ್ಷ ರೈಲ್ವೇ ಇಲಾಖೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗುತ್ತದೆ. ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನ ಆರ್ಆರ್ ಬಿ ಪರೀಕ್ಷೆ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ. ಇನ್ನು ರೈಲ್ವೆ ಇಲಾಖೆಯಲ್ಲಿ ಕೆಲಸ ಸಿಗುವುದು ಅಷ್ಟೊಂದು ಸುಲಭದ ಮಾತಲ್ಲ. ಲಿಖಿತ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗುತ್ತದೆ. ರೈಲ್ವೆ ನೇಮಕಾತಿ ಪರೀಕ್ಷೆಯು ಎರಡು ವಿಭಾಗಗಳಲ್ಲಿ ನಡೆಯುತ್ತದೆ. ಒಂದು ಗೆಜೆಟೆಡ್ ( ಗ್ರೂಪ್ ಎ ಮತ್ತು ಬಿ) ಮತ್ತೊಂದು ನಾನ್ ಗೆಜೆಟೆಡ್ ( ಗ್ರೂಪ್ ಸಿ ಮತ್ತು ಡಿ )

ಲಿಖಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಸಂದರ್ಶನ ಹಾಗೂ ಕೊನೆಗೆ ಮೆರಿಟ್ ಲಿಸ್ಟ್‌ ಆಧಾರದ ಮೇಲೆ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗುತ್ತದೆ. ಈ ಎಕ್ಸಾಂ ಪ್ರಶ್ನಾಪತ್ರಿಕೆಯು ಸಾಮಾನ್ಯ ವಿಜ್ಞಾನ, ತಂತ್ರಜ್ಞಾನ ಕೌಶಲ್ಯ, ಸಾಮಾನ್ಯ ಅರಿವು, ಅಂಕಗಣಿತ, ಸಾಮಾನ್ಯ ಬುದ್ಧಿವಂತಿಕೆ ಮತ್ತು ತಾರ್ಕಿಕ ವಿಷಯವನ್ನ ಒಳಗೊಂಡಿರುತ್ತದೆ

 

ರೈಲ್ವೆ ಪರೀಕ್ಷೆ ಬರೆಯುವ ಮುನ್ನ ಪ್ರಶ್ನಾಪತ್ರಿಕೆ ಮಾದರಿ ಬಗ್ಗೆ ತಿಳಿದುಕೊಂಡಿರಬೇಕು. ಅಷ್ಟೇ ಅಲ್ಲ ಸಮಯವನ್ನು ಹೊಂದಾಣಿಕೆ ಮಾಡಿಕೊಂಡು ಪರೀಕ್ಷೆ ಹೇಗೆ ಬರೆಯಬೇಕು ಎಂಬುವುದು ತಿಳಿದುಕೊಂಡಿರಬೇಕು. ಅಷ್ಟೇ ಅಲ್ಲ ಈ ಹಿಂದಿನ ಪ್ರಶ್ನಾಪತ್ರಿಕಯನ್ನ ಕೂಡಾ ಒಂದು ಬಾರಿ ರೆಫರ್ ಮಾಡುವುದು ಉತ್ತಮ

ರೈಲ್ವೆ ಪರೀಕ್ಷೆಗೆ ರೆಫರ್ ಮಾಡಬೇಕಾದ ಪಾಪ್ಯುಲರ್ ಪುಸ್ತಕಗಳು

ಸಾಮಾನ್ಯ ವಿಜ್ಞಾನ ವಿಭಾಗ:

ಸಾಮಾನ್ಯ ವಿಜ್ಞಾನ ವಿಭಾಗ:

Image Souce

ಹೈಯರ್ ಸೆಕೆಂಡರಿ ಸೈನ್ಸ್ ಪುಸಕ್ತದಿಂದ ಈ ಎಕ್ಸಾಂ ಸುಲಭವಾಗಿ ಬರೆಯಬಹುದು. ಜೀವಶಾಸ್ತ್ರ, ಬೌತಶಾಸ್ತ್ರ, ರಸಾಯನಿಕ ಶಾಸ್ತ್ರ, ಭೂಗೋಳ ವಿಜ್ಞಾನ, ಪ್ರಾಕೃತಿಕ ವಿಜ್ಞಾನ, ಖಗೋಳಶಾಸ್ತ್ರ ಮತ್ತು ಬಾಹ್ಯಾಕಾಶ ತಂತ್ರಜ್ಞಾನ, ಕಂಪ್ಯೂಟರ್ ಮತ್ತು ಮೊಬೈಲ್ ತಂತ್ರಜ್ಞಾನ, ಆವಿಷ್ಕಾರಗಳು ಮತ್ತು ಸಂಶೋಧನೆಗಳು, ರೋಗಗಳು, ಪೋಷಣೆ ಮುಂತಾದ ವಿಷಯಗಳನ್ನು ಈ ಪುಸ್ತಕ ಒಳಗೊಂಡಿರುತ್ತದೆ. ಸಾಮಾನ್ಯ ವಿಜ್ಞಾನ ವಿಷಯಕ್ಕೆ ಅಭ್ಯರ್ಥಿಗಳು ಪುಸ್ತಕ ಹುಡುಕುತ್ತಿದ್ದರೆ ಈ ಮೇಲೆ ಹೇಳಿರುವ ಸಬ್‌ಜೆಕ್ಟ್ ಗಳನ್ನೊಳಗೊಂಡ ಪುಸ್ತಕವನ್ನ ಖರೀದಿಸಿದು ಉತ್ತಮ

ಜೆನರಲ್ ಸೈನ್ಸ್ ಫಾರ್ ಇಂಡಿಯನ್ ರೈಲ್ವೆ ಆರ್ಆರ್ ಬಿ ಎಕ್ಸಾಮ್ - ALP/Group D/NTPC/JE

ರೈಲ್ವೆ ಟು ದಿ ಪಾಯಿಂಟ್ ಜೆನರಲ್ ನಾಲೆಜ್ಡ್ ಮತ್ತು ಜನರಲ್ ಸೈನ್ಸ್ -KICX

ಆಬ್ಜೆಕ್ಟೀವ್ ಜೆನರಲ್ ಸೈನ್ಸ್

ರವಿ ಭೂಷಣ್ ಅವರ ಲೂಸೆಂಟ್ ಜನರಲ್ ಸೈನ್ಸ್

ರಮೇಶ್ ಪಬ್ಲಿಶಿಂಗ್ ಹೌಸ್‌ನ ಆರ್ ಆರ್ ಬಿ: ಸೀನಿಯರ್ ಸೆಕ್ಷನ್ ಇಂಜಿನಿಯರ್

ಆರಿಹಂಟ್ ಎಕ್ಸ್‌ಪಟ್ರ್ಸ್ ಅವರ ಎನ್ಸೈಕ್ಲೋಪೀಡಿಯಾ ಆಫ್ ಜನರಲ್ ಸೈನ್ಸ್

ತಾಂತ್ರಿಕ ಸಾಮರ್ಥ್ಯ ವಿಭಾಗ
 

ತಾಂತ್ರಿಕ ಸಾಮರ್ಥ್ಯ ವಿಭಾಗ

Image Souce

ತಾಂತ್ರಿಕ ಸಾಮರ್ಥ್ಯ ವಿಭಾಗಕ್ಕೆ ಇಂಜಿನಿಯರ್ ವಿದ್ಯಾರ್ಥಿಗಳು, ಪರಿಸರ ಮತ್ತು ಮಾಲಿನ್ಯ ನಿಯಂತ್ರಣ, ರಾಸಾಯನಿಕ ಲೋಹಶಾಸ್ತ್ರ, ಕಂಪ್ಯೂಟರ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಮಾಪನ, ಸಿವಿಲ್ ಎಂಜಿನಿಯರಿಂಗ್, ಯಾಂತ್ರಿಕ ಎಂಜಿನಿಯರಿಂಗ್ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ತಮ್ಮ ಟೆಕ್ನಿಕಲ್ ಜ್ಞಾನವನ್ನ ಬಳಸಿಕೊಳ್ಳಬೇಕು.

ಈ ವಿಷಯಕ್ಕೆ ಸಂಬಂಧಪಟ್ಟಂತೆ ಕೆಲವೊಂದು ಪುಸ್ತಕಗಳ ಇಲ್ಲಿ ಲಿಸ್ಟ್ ಇಲ್ಲಿ ನೀಡಲಾಗಿದೆ ನೋಡಿಕೊಳ್ಳಿ

ಡಾ ಚಂದ್ರಶೇಖರ್ ಅಗರ್ವಾಲ್ ಅವರ ಆರ್ಆರ್ ಬಿ ಟೆಕ್ನಿಕಲ್ ಎಕ್ಸಾಮ್ಸ್

ಡಾ. ಲಾಲ್ ಮತ್ತು ಮಿಶ್ರಾ ಅವರ ಆರ್ಆರ್ ಬಿ ಟೆಕ್ನಿಕಲ್ ಎಲೆಕ್ಟ್ರಿಕಲ್ (ಗ್ರೇಡ್ -೩) ರಿಕ್ರ್ಯುಟ್ ಮೆಂಟ್ ಎಕ್ಸಾಮ್

ಕಿರಣ್ ಪ್ರಕಾಶನ್ ಅವರ ರೈಲ್ವೆ ಟೆಕ್ನಿಕಲ್ ಪ್ರಶ್ನಾಪತ್ರಿಕೆ ಬ್ಯಾಂಕ್

ಖನ್ನಾ ಹಾಗೂ ವರ್ಮಾ ಅವರ ಉಪ್ಕಾರ್ ರೈಲ್ವೇ ರಿಕ್ರ್ಯುಟ್ ಮೆಂಟ್ ಬೋರ್ಡ್ ಎಕ್ಸಾಮಿನೇಶನ್

ಅಂಕಗಣಿತದ ವಿಭಾಗ

ಅಂಕಗಣಿತದ ವಿಭಾಗ

Image Souce

ಅಂಕಗಣಿತ ಪರೀಕ್ಷೆಯನ್ನ ಸುಲಭವಾಗಿ ಪಾಸ್ ಮಾಡಬೇಕಾದ್ರೆ ಅಭ್ಯರ್ಥಿಗಳು ಬೀಜಗಣಿತ, ತ್ರಿಕೋನಮಿತಿ, ದತ್ತಾಂಶ ವ್ಯಾಖ್ಯಾನ, ಷೇರುಗಳು ಮತ್ತು ಲಾಭಾಂಶಗಳು, ಲಾಭ ಮತ್ತು ನಷ್ಟ, ಮಾಪನಾಂಕ, ಅನುಪಾತ ಮತ್ತು ಪ್ರಮಾಣ ಹಾಗೂ ಇನ್ನಿತ್ತರ ವಿಷಯದಲ್ಲಿ ಜ್ಞಾನ ಹೊಂದಿರಬೇಕು. ಹಾಗಾಗಿ ಈ ಕೆಳಗೆ ನೀಡಿರುವ ಪುಸ್ತಕಗಳನ್ನ ರೆಫರ್ ಮಾಡಿ

ಆರ್.ಎಸ್ ಅಗರ್ವಾಲ್ ಅವರ ಅಂಕಗಣಿತ ಪುಸ್ತಕ

ಉಪ್ಕಾರ್ ಪಬ್ಲಿಕೇಶನ್ಸ್ ನ ಕ್ವಿಕರ್ ರೀಸೋನಿಂಗ್ ಟೆಸ್ಟ್

ಆರ್.ಎಸ್ ಅಗರ್ವಾಲ್ ಅವರ ವರ್ಬಲ್ ಹಾಗೂ ನಾನ್ ವರ್ಬಲ್ ರೀಸೋನಿಂಗ್

ದಿಶಾ ಎಕ್ಸ್‌ಪರ್ಟ್ ಅವರ ಇಂಡಿಯನ್ ರೈಲ್ವೆ ಅಸಿಸ್ಟೆಂಟ್ ಲೊಕೊ ಪೈಲಟ್ ಪರೀಕ್ಷೆ

ಇಂದು ಸಿಜ್ವಾಲಿ ಮತ್ತು ಬಿಎಸ್ ಸಿಜ್ವಾಲಿ ಅವರ ನ್ಯೂ ಅಪ್ರೋಚ್ ಟು ರೀಸೋನಿಂಗ್ ವರ್ಬಲ್ ಮತ್ತು ನಾನ್ ವರ್ಬಲ್ : ನಾನ್ ವರ್ಬಲ್ ಮತ್ತು ಅನಾಲಿಟಿಕಲ್

ಸಾಗಿರ್ ಅಹ್ಮದ್ ಅವರ ಟೈಮ್ ಕಾಂಪೆಟೆಟೀವ್ ಅಂಕಗಣಿತ ಆಬ್ಜೆಕ್ಟೀವ್

ಸಾಮಾನ್ಯ ಅರಿವು ವಿಭಾಗ

ಸಾಮಾನ್ಯ ಅರಿವು ವಿಭಾಗ

Image Souce

ಈ ವಿಭಾಗದ ಪರೀಕ್ಷೆಗೆ ಇತ್ತೀಚಿಗಿನ ಪ್ರಚಲಿತ ವಿದ್ಯಾಮಾನದ ಆಗುಹೋಗು ಬಗ್ಗೆ ಅಭ್ಯರ್ಥಿಗಳು ತಿಳಿದುಕೊಂಡಿರಬೇಕು. ಈ ಟಾಪಿಕ್ ಇತಿಹಾಸ, ಭೂಗೋಳ ಶಾಸ್ತ್ರ, ಮತ್ತು ರಾಜ್ಯಶಾಸ್ತ್ರ ಅಧ್ಯಯನ ವಿಷಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನ ಈ ಪುಸ್ತಕ ಒಳಗೊಂಡಿದೆ

ಇತಿಹಾಸ ಟಾಪಿಕ್ ಪ್ರಾಚೀನ ಇತಿಹಾಸ, ಮಧ್ಯಕಾಲೀನ ಇತಿಹಾಸ ಮತ್ತು ಆಧುನಿಕ ಇತಿಹಾಸ ಮಾಹಿತಿಯನ್ನ ಒಳಗೊಂಡಿದೆ

ಭೌಗೋಳಿಕ ವಿಭಾಗವು ಭೂಮಿಯ ಚಲನೆ, ಭೂಮಿಯ ಆಂತರಿಕತೆ, ರೇಖಾಂಶಗಳು ಮತ್ತು ಅಕ್ಷಾಂಶಗಳು, ಸೌರವ್ಯೂಹ, ಭಾರತದಲ್ಲಿ ಕೃಷಿ, ಇತ್ಯಾದಿ ಮಾಹಿತಿಯನ್ನ ಕವರ್ ಮಾಡಿಕೊಂಡಿರುತ್ತದೆ

ಈ ಕೆಳಗೆ ನೀಡಿರುವ ಪುಸ್ತಕಗಳನ್ನ ಈ ಮೇಲೆ ನೀಡಿರುವ ಟಾಪಿಕ್ ಗೆ ರೆಫರ್ ಮಾಡಬಹುದು

ಲೂಸೆಂಟ್ ಪಬ್ಲಿಕೇಶನ್ಸ್ ಅವರ ಲೂಸೆಂಟ್ ಜೆನರಲ್ ನಾಲೆಡ್ಜ್

ಉಪ್ಕಾರ್ ಪಬ್ಲಿಕೇಶನ್ಸ್ ಅವರ ಪ್ರತಿಯೋಗಿತ ದರ್ಪಣ

ಮಲಯಾಳಂ ಮನೋರಮಾ ಅವರ ಮನೋರಮಾ ಇಯರ್ ಬುಕ್

ಜನರಲ್ ನಾಲೆಜ್ಡ್ ಮತ್ತು ಅವರನೆಸ್ ೨೦೧೭ ಫಾರ್ ರೈಲ್ವೇ ರಿಕ್ರ್ಯುಟ್ ಮೆಂಟ್

ದಿಶಾ ಎಕ್ಸ್‌ಪರ್ಟ್ ಅವರ ಎಕ್ಸಾಮ್ಸ್ ((NTPC/ALP/ASM/Technical)

For Quick Alerts
ALLOW NOTIFICATIONS  
For Daily Alerts

English summary
RRB exams are conducted every year to fill up lakhs of vacancies in the Indian Railways. Getting a job in railway sector is not easy. Many aspirants would love to work for Indian Railways but are unable to crack the exam
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more