Kerala's Kuttiyamma : ಓದಿಗೆ ವಯಸ್ಸಿನ ಹಂಗಿಲ್ಲ...100ಕ್ಕೆ 89 ಅಂಕ ಪಡೆದು ಪಾಸ್ ಆದ 104ನೇ ವಯಸ್ಸಿನ ಕುಟ್ಟಿಯಮ್ಮ

ಶಿಕ್ಷಣಕ್ಕೆ ವಯಸ್ಸಿನ ಹಂಗಿಲ್ಲ ಎಂಬುದನ್ನ 104ನೇ ವಯಸ್ಸಿನ ಮಹಿಳೆಯೊಬ್ಬರು ಸಾಬೀತುಪಡಿಸಿದ್ದಾರೆ. ಕೇರಳದ ಕೊಟ್ಟಾಯಂನ ಮಹಿಳೆ ಕುಟ್ಟಿಯಮ್ಮ ತಮ್ಮ 104 ನೇ ವಯಸ್ಸಿನಲ್ಲಿ ರಾಜ್ಯ ಸಾಕ್ಷರತಾ ಮಿಷನ್ ಪರೀಕ್ಷೆಯಲ್ಲಿ 100 ಕ್ಕೆ 89 ಅಂಕಗಳನ್ನು ಗಳಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

104ರ ವಯಸ್ಸಿನಲ್ಲಿ 100ಕ್ಕೆ 89 ಅಂಕಗಳಿಸಿ ಪಾಸ್ ಆದ ಕುಟ್ಟಿಯಮ್ಮ

ತನ್ನ 104 ನೇ ವಯಸ್ಸಿನಲ್ಲಿ ಪರೀಕ್ಷೆಯನ್ನು ಬರೆದು ಉತ್ತಮ ಅಂಕದೊಂದಿಗೆ ತೇರ್ಗಡೆ ಹೊಂದಿರುವ ಕುಟ್ಟಿಯಮ್ಮ ಬಗ್ಗೆ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಕೇರಳ ಶಿಕ್ಷಣ ಸಚಿವ ವಸುದೇವನ್‌ ಶಿವಕುಟ್ಟಿ ಹಂಚಿಕೊಂಡಿದ್ದಾರೆ. ಟ್ವಿಟ್ಟರ್ ನಲ್ಲಿ "ಜ್ಞಾನದ ಲೋಕಕ್ಕೆ ಪ್ರವೇಶ ಪಡೆಯಲು ವಯಸ್ಸು ಯಾವುದೇ ಅಡೆತಡೆಯಾಗುವುದಿಲ್ಲ. ಅತ್ಯಂತ ಗೌರವ ಮತ್ತು ಪ್ರೀತಿಯಿಂದ, ಕುಟ್ಟಿಯಮ್ಮ ಮತ್ತು ಇತರ ಎಲ್ಲಾ ಹೊಸ ಕಲಿಕೆದಾರರಿಗೆ ನಾನು ಶುಭ ಹಾರೈಸುತ್ತೇನೆ." ಎಂದು ಸಚಿವರು ಟ್ವೀಟ್ ಮಾಡಿದ್ದಾರೆ. ಇವರು ಶಿಕ್ಷಣದ ನಿರಂತರ ಯಾನಕ್ಕೆ ಸ್ಪೂರ್ತಿ ಎಂದು ಶುಭಹಾರೈಸಿದ್ದಾರೆ.

ಕೊಟ್ಟಾಯಂನ ಅಯರ್‌ಕುನ್ನಮ್‌ ಪಂಚಾಯತ್‌ನಲ್ಲಿ ಸಾಕ್ಷರತಾ ಪರೀಕ್ಷೆಯನ್ನು ಆಯೋಜನೆ ಮಾಡಲಾಗಿದ್ದು, ಸಾಕ್ಷರತಾ ಪರೀಕ್ಷೆಯಲ್ಲಿ 104 ವರ್ಷದ ಕುಟ್ಟಿಯಮ್ಮ ಕೂಡಾ ಭಾಗಿಯಾಗಿದ್ದರು. ಕೊಟ್ಟಾಯಂನ ತಿರುವಂಚೂರ್ ಆಯರ್ಕುನ್ನಂ ಪಂಚಾಯತ್‌ನ ನಿವಾಸಿ ಕುಟ್ಟಿಯಮ್ಮ ಅವರು ಎಂದಿಗೂ ಶಾಲೆಗೆ ಹೋಗಿರುವುದಿಲ್ಲ. ಅವರು ಸಾಕ್ಷರತಾ ತರಗತಿಗಳಿಗೆ ಮಾತ್ರ ಹಾಜರಾಗಿದ್ದರು.ಸಾಕ್ಷರತಾ ಪ್ರೇರಕ ಕಾರ್ಯಕ್ರಮದ ಮೂಲಕ ಶಿಕ್ಷಣದತ್ತ ಒಲವು ತೋರಿದ 104 ವರ್ಷದ ಕುಟ್ಟಿಯಮ್ಮ ಎಲ್ಲಾ ತರಗತಿಗೆ ಹಾಜರಾಗಿದ್ದಾರೆ. ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆ ತನ್ನ ಮನೆಯಲ್ಲೇ ಸಾಕ್ಷರತಾ ಪ್ರೇರಕ ಕಾರ್ಯಕ್ರಮದಲ್ಲಿ ಭಾಗಿಯಾದ ಕುಟ್ಟಿಯಮ್ಮ ಓದುವುದು ಹಾಗೂ ಬರೆಯುವುದನ್ನು ಕಲಿತಿದ್ದಾರೆ. ಈ ತರಗತಿಗಳಿಗೆ ನಿರಂತರವಾಗಿ ಹಾಜರಾದ ಬಳಿಕ ಕುಟ್ಟಿಯಮ್ಮ ನಾಲ್ಕನೇ ತರಗತಿಯ ಪರೀಕ್ಷೆಯನ್ನು ಬರೆಯಲು ಅರ್ಹರಾಗಿದ್ದಾರೆ.

ಕೇರಳ ರಾಜ್ಯ ಸಾಕ್ಷರತಾ ಮಿಷನ್‌ ಪ್ರಾಧಿಕಾರವು ರಾಜ್ಯ ಸರ್ಕಾರದಿಂದ ಧನಸಹಾಯವನ್ನು ಹೊಂದಿದೆ. ಎಲ್ಲ ನಾಗರಿಕರಿಗೆ ಸಾಕ್ಷರತೆ, ಮುಂದುವರಿದ ಶಿಕ್ಷಣ ಮತ್ತು ಜೀವಮಾನದ ಕಲಿಕೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ಪ್ರಸ್ತುತ 4, 7, 10, 11, 12ನೇ ತರಗತಿಗಳಿಗೆ ಸಮಾನತೆ ಕಲಿಕಾ ಕಾರ್ಯಕ್ರಮಗಳನ್ನು ಒದಗಿಸುತ್ತಿದೆ.

For Quick Alerts
ALLOW NOTIFICATIONS  
For Daily Alerts

English summary
104 year old woman from kerala scored 89 out of 100 in literacy exam.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X