ರಾಜ್ಯದ 13 ಶಿಕ್ಷಕರಿಗೆ ರಾಷ್ಟ್ರ ಪ್ರಶಸ್ತಿ ಗೌರವ

ಶಿಕ್ಷಕರ ದಿನಾಚರಣೆ ಪ್ರಯುಕ್ತ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಪ್ರತಿ ವರ್ಷ ಈ ಪ್ರಶಸ್ತಿಯನ್ನು ನೀಡುತ್ತಿದ್ದು, ಈ ಬಾರಿ ರಾಜ್ಯದ 13 ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಲಭಿಸಿದೆ.

2017ನೇ ಸಾಲಿನ ರಾಷ್ಟ್ರೀಯ ಶಿಕ್ಷಕ ಪುರಸ್ಕಾರ ಪ್ರಶಸ್ತಿಯನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಪ್ರಕಟಿಸಿದೆ.

ಶಿಕ್ಷಕರ ದಿನಾಚರಣೆ ಪ್ರಯುಕ್ತ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಪ್ರತಿ ವರ್ಷ ಈ ಪ್ರಶಸ್ತಿಯನ್ನು ನೀಡುತ್ತಿದ್ದು, ಈ ಬಾರಿ ರಾಜ್ಯದ 13 ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಲಭಿಸಿದೆ.

ಶಿಕ್ಷಣ ತಜ್ಞ ಹಾಗೂ ಭಾರತದ ಎರಡನೇ ರಾಷ್ಟ್ರಪತಿಯಾಗಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟುಹಬ್ಬದ ಪ್ರಯುಕ್ತ ದೇಶಾದ್ಯಂತ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತ, ಮಕ್ಕಳ ಭವಿಷ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುವ ಶಿಕ್ಷಕರಿಗೆ ರಾಷ್ಟ್ರೀಯ ಪುರಸ್ಕಾರ ನೀಡಲಾಗುವುದು.

13 ಶಿಕ್ಷಕರಿಗೆ ರಾಷ್ಟ್ರ ಪ್ರಶಸ್ತಿ ಗೌರವ

ಪ್ರಾಥಮಿಕ ಶಾಲೆ ವಿಭಾಗ

ವಿ. ಅಶೋಕ್ ಕುಮಾರ್- ಸ.ಕಿ.ಪ್ರಾ. ಶಾಲೆ ಚಿನ್ನೇನಹಳ್ಳಿ, ಶ್ರೀರಂಗಪಟ್ಟಣ.
ಎಸ್.ಆರ್. ಅಚ್ಯುತರಾವ್-ಎನ್.ಜಿ. ಕೊಪ್ಪಲು, ಕಡೂರು.
ಎಂ.ಕೃಷ್ಣಪ್ಪ-ಮುಖ್ಯ ಶಿಕ್ಷಕ ಪುಲಗೂರು ಕೋಟೆ, ಶ್ರೀನಿವಾಸಪುರ,
ಕುಮಾರ ಎಚ್.ಸಿ.-ಸೊಪ್ಪುಗುಡ್ಡೆ ತೀರ್ಥಹಳ್ಳಿ,
ದಿವಾಕರ ಹೆಗಡೆ-ನೆಲೆಮಾವು, ಸಿದ್ದಾಪುರ,
ರತ್ನಮ್ಮ ಬಿ.ಎನ್-ಮಾಯಸಂದ್ರ, ಆನೇಕಲ್.

ವಿಶೇಷ ಶಿಕ್ಷಕರು (ಪ್ರಾಥಮಿಕ)

ಎಚ್. ಗೋವಿಂದಪ್ಪ- ಸರ್ಕಾರಿ ಕಿವುಡು ಮಕ್ಕಳ ಶಾಲೆ ಬಳ್ಳಾರಿ. ಪ್ರೌಢಶಾಲೆ ವಿಭಾಗ:
ಪುರಂದರ ನಾರಾಯಣ ಭಟ್-ವಿದ್ಯಾಬೋಧಿನಿ ಹೈಸ್ಕೂಲ್ ಬಳಿಲ, ಸುಳ್ಯ,
ಪಂಡಿತ್ ಕೆ.ಬಲ್ರೆ-ಪಿ.ವಿ. ಹೈಸ್ಕೂಲ್ ಘಾಟ್​ಬೋರೋಲ ಹುಮ್ನಾಬಾದ್,
ಜಿ.ಎಂ. ಮಂಜುನಾಥ್-ಸರ್ಕಾರಿ ಪಿಯು ಕಾಲೇಜು ಗೌನೀಪಳ್ಳಿ, ಶ್ರೀನಿವಾಸಪುರ.

ಕೇಂದ್ರೀಯ ವಿದ್ಯಾಲಯ ಸಂಘಟನ್ ಪ್ರಾಥಮಿಕ: (ಸಂಸ್ಕೃತ ವಿಭಾಗ)

ಗಂಗಾಧರ್ ಆರ್. ಬೋಡೆ- ಕೇಂದ್ರೀಯ ವಿದ್ಯಾಲಯ ಮಲ್ಲೇಶ್ವರ ಬೆಂಗಳೂರು,
ಶ್ರೀಧರ್ ಎನ್. ಹೆಗಡೆ- ಕೆವಿ ನಂ.1, ಹುಬ್ಬಳ್ಳಿ.

ನವೋದಯ ವಿದ್ಯಾಲಯ ಸಮಿತಿ

ರಾಮಚಂದ್ರ ಜಿ. ದೇಶಪಾಂಡೆ- ಸಮಾಜ ವಿಜ್ಞಾನ ಶಿಕ್ಷಕ, ಜವಾಹರ್ ನವೋದಯ ವಿದ್ಯಾಲಯ ಹಾನಗಲ್, ಹಾವೇರಿ ಜಿಲ್ಲೆ.

ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರಿಗೆ ಸೆಪ್ಟೆಂಬರ್ 5ರಂದು ನವದೆಹಲಿಯಲ್ಲಿ ನಡೆಯುವ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.

ರಾಷ್ಟ್ರಪ್ರಶಸ್ತಿಗೆ ಶಿಫಾರಸ್ಸು ಮಾಡಲ್ಪಡುವ ಶಿಕ್ಷಕರು 15 ವರ್ಷ ಹಾಗೂ ಮುಖ್ಯೋಪಧ್ಯಾಯರಾದರೆ ಕನಿಷ್ಠ 20 ವರ್ಷ ಸೇವೆ ಸಲ್ಲಿಸಿರಬೇಕು.

ಪ್ರಶಸ್ತಿಗೆ ಆಯ್ಕೆಯಾಗುವ ಶಿಕ್ಷಕರು ಸಚ್ಚಾರಿತ್ರ್ಯವನ್ನು ಹೊಂದಿರಬೇಕು. ಅವರ ಬಗೆಗೆ ಯಾವುದೇ ದೂರು, ವಿಚಾರಣೆ, ನ್ಯಾಯಾಲಯದ ಪ್ರಕರಣಗಳು ಇರಬಾರದು. ಈ ಬಗ್ಗೆ ಆಯ್ಕೆ ಸಮಿತಿಗಳು ಪ್ರಮಾಣ ಪತ್ರವನ್ನು ದೃಢೀಕರಿಸಬೇಕು.

More News  

For Quick Alerts
ALLOW NOTIFICATIONS  
For Daily Alerts

English summary
National Award for Teachers is the National award to the Teachers awarded by the President of India on 5 September (Teacher's Day) every year to give public recognition to meritorious teachers working in primary, middle and secondary schools in India. 13 teachers from karnataka selected for this award.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+