ಸರ್ಕಾಡಿಯನ್ ಗಡಿಯಾರ ಸಂಶೋಧಕರಿಗೆ 2017ನೇ ವೈದ್ಯಕೀಯ ನೊಬೆಲ್ ಪ್ರಶಸ್ತಿ

ಜೀವಿಗಳ ಆಂತರಿಕ ಜೈವಿಕ ಗಡಿಯಾರದ ಕುರಿತ ಕೈಗೊಂಡ ಸಂಶೋಧನೆಗೆ ಈ ಪ್ರಶಸ್ತಿ ನೀಡಲಾಗಿದ್ದು, ಇವರ ಸಂಶೋಧನೆಗೆ 'ಸರ್ಕಾಡಿಯನ್ ಗಡಿಯಾರ' ಎಂದು ಹೆಸರಿಸಲಾಗಿದೆ.

2017ನೇ ಸಾಲಿನ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಮೂವರು ಅಮೆರಿಕನ್ನರು ಭಾಜನರಾಗಿದ್ದಾರೆ.

ಅಮೆರಿಕ ಮೂಲದವರಾದ ಜೆಫ್ರಿ ಹಾಲ್, ಮೈಕೆಲ್ ರೋಸ್ಬಾಶ್ ಮತ್ತು ಮೈಕೆಲ್ ಡಬ್ಲ್ಯೂ. ಯಂಗ್ ಈ ಸಾಲಿನ ವೈದ್ಯಕೀಯ ನೊಬೆಲ್ ಪ್ರಶಸ್ತಿ ಪಡೆದಿರುವ ವಿಜ್ಞಾನಿಗಳು. ಈ ಮೂವರು 7.19 ಕೋಟಿ ಬಹುಮಾನ ಮೊತ್ತವನ್ನು ಹಂಚಿಕೊಳ್ಳಲಿದ್ದಾರೆ.

ಜೀವಿಗಳ ಆಂತರಿಕ ಜೈವಿಕ ಗಡಿಯಾರದ ಕುರಿತ ಕೈಗೊಂಡ ಸಂಶೋಧನೆಗೆ ಈ ಪ್ರಶಸ್ತಿ ನೀಡಲಾಗಿದ್ದು, ಇವರ ಸಂಶೋಧನೆಗೆ 'ಸರ್ಕಾಡಿಯನ್ ಗಡಿಯಾರ' ಎಂದು ಹೆಸರಿಸಲಾಗಿದೆ.

2017ನೇ ವೈದ್ಯಕೀಯ ನೊಬೆಲ್ ಪ್ರಶಸ್ತಿ

ಈ ಸಂಶೋಧನೆಯ ಮೂಲಕ ವಿವಿಧ ಸಮಯ ವಲಯಗಳಲ್ಲಿ ಸಂಚರಿಸುವಾಗ ಜನರು ಜೆಟ್​ಲ್ಯಾಗ್​ಗೆ ಏಕೆ ಒಳಗಾಗುತ್ತಾರೆ ಮತ್ತು ಅದರಿಂದ ಅವರ ಆರೋಗ್ಯದ ಮೇಲಾಗುವ ಪರಿಣಾಮಗಳು ಏನು ಎಂಬುದನ್ನು ಸಂಶೋಧಕರು ವಿವರಿಸಿದ್ದಾರೆ.

ಆಂತರಿಕ ಜೈವಿಕ ಗಡಿಯಾರ ಎಲ್ಲ ಜೀವಿಗಳ ದೇಹದ ಮೇಲೆ ವಿವಿಧ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಹಾರ್ಮೋನ್‌ ಮಟ್ಟ, ನಿದ್ರೆ, ಆಹಾರ ಸೇವನೆ, ಒತ್ತಡ, ಖಿನ್ನತೆ, ದೇಹದ ತಾಪಮಾನದಲ್ಲೂ ವ್ಯತ್ಯಾಸಗಳು ಕಂಡು ಬರುತ್ತವೆ. ಆಂತರಿಕ ಜೈವಿಕ ಗಡಿಯಾರ ಮತ್ತು ಹೊರಗಿನ ವಾತಾವರಣ ಎರಡೂ ಸೇರಿದಾಗ ಸಮಯಕ್ಕೆ ತಕ್ಕಂತೆ ದೇಹ ಬಳಲುತ್ತದೆ. ಜೀವನ ಶೈಲಿ ಮತ್ತು ಸರ್ಕಾಡಿಯನ್‌ ಗಡಿಯಾರ ನಡುವೆ ಹೊಂದಾಣಿಕೆಯಾಗದಿದ್ದರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಕ್ಯಾನ್ಸರ್‌ನಂತಹ ಕಾಯಿಲೆಗಳಿಗೂ ತುತ್ತಾಗುವ ಸಾಧ್ಯತೆಗಳಿರುತ್ತವೆ ಎನ್ನುವುದನ್ನು ಈ ವಿಜ್ಞಾನಿಗಳು ಅಧ್ಯಯನ ನಡೆಸಿದ್ದರು.

ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ

ನೊಬೆಲ್ ಪುರಸ್ಕೃತರ ಹಿನ್ನೆಲೆ

  • ಅಮೆರಿಕದ ನ್ಯೂಯಾರ್ಕ್ ನ ಜೆಫ್ರಿ ಹಾಲ್ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪದವಿ ಪಡೆದುಕೊಂಡಿದ್ದಾರೆ.
  • ಕನ್ಸಾಸ್ ನ ಮೈಕೆಲ್ ರೋಸ್ಬಾಶ್ ಮಸಾಚ್ಯುಸೆಟ್ಸ್ ತಾಂತ್ರಿಕ ವಿದ್ಯಾಲಯದ ಪದವೀಧರರು. ಇವರಿಬ್ಬರೂ ಬ್ರಾಯಂಡಿಸ್ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸಿದ್ದಾರೆ.
  • ಮಿಯಾಮಿಯ ಮೈಕೆಲ್ ಯಂಗ್, ಸ್ಟಾನ್​ಫೋರ್ಡ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್​ನಲ್ಲಿ ಪದವಿ ಪಡೆದುಕೊಂಡಿದ್ದಾರೆ. ಇವರು ರಾಕೆಫೆಲ್ಲರ್ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಮಂಗಳವಾರ ಭೌತವಿಜ್ಞಾನ, ಬುಧವಾರ ರಸಾಯನವಿಜ್ಞಾನ ಹಾಗೂ ಗುರುವಾರ ಸಾಹಿತ್ಯ ಮತ್ತು ಶುಕ್ರವಾರ ಶಾಂತಿಗಾಗಿ ನೀಡುವ ನೊಬೆಲ್‌ ಪ್ರಶಸ್ತಿಯನ್ನು ಪ್ರಕಟಿಸುವುದಾಗಿ ನೊಬೆಲ್‌ ಸಮಿತಿ ತಿಳಿಸಿದೆ. ಶಾಂತಿ ಪ್ರಶಸ್ತಿಗೆ 318 ಮಂದಿಯನ್ನು ನಾಮನಿರ್ದೇಶನ ಮಾಡಲಾಗಿದೆ.

For Quick Alerts
ALLOW NOTIFICATIONS  
For Daily Alerts

English summary
Scientists Jeffrey Hall, Michael Rosbash and Michael Young won the 2017 Nobel Prize for Physiology or Medicine for their discoveries of molecular mechanisms controlling our biological clocks.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X