7th Pay Commission : ಕೇಂದ್ರ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಶೇ 3ರಷ್ಟು ಡಿಎ ಹೆಚ್ಚಳ

ದೀಪಾವಳಿ ಹಬ್ಬದ ಪ್ರಯುಕ್ತ ಕೇಂದ್ರ ಸರ್ಕಾರವು ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ಬಂಪರ್ ಕೊಡುಗೆಯನ್ನು ನೀಡಿದೆ. 7ನೇ ವೇತನ ಆಯೋಗದಡಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೇಕಡ 3 ರಷ್ಟು ಡಿಎ ಭತ್ಯೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟವು ಅನಮೋದನೆ ನೀಡಿದೆ.

 
7ನೇ ವೇತನ ಆಯೋಗ: ಕೇಂದ್ರ ಉದ್ಯೋಗಿಗಳಿಗೆ ದೀಪಾವಳಿ ಬಂಪರ್ ಗಿಫ್ಟ್

ಈ ಡಿಎ ಏರಿಕೆಯೊಂದಿಗೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಡಿಯರ್ನೆಸ್ ಭತ್ಯೆ (ಡಿಎ) ಮತ್ತು ಡಿನರ್ನೆಸ್ ರಿಲೀಫ್ (ಡಿಆರ್) 28% ರಿಂದ 31% ರಷ್ಟಾಗಲಿದೆ. 7ನೇ ವೇತನ ಆಯೋಗದಡಿ ಸುಮಾರು 47.14 ಕೇಂದ್ರ ಸರ್ಕಾರಿ ನೌಕರರು ಮತ್ತು 68.62 ಲಕ್ಷ ಪಿಂಚಣಿದಾರರು ಈ ಪ್ರಯೋಜನವನ್ನು ಪಡೆಯಲಿದ್ದಾರೆ. ಒಮ್ಮೆ ಡಿಕೆ ಏರಿಕೆ ಜಾರಿಗೆ ಬಂದ ನಂತರ ಹೆಚ್ಚುವರಿ ಕಂತು ಜುಲೈ 1, 2021 ರಿಂದ ಜಾರಿಗೆ ಬರಲಿದೆ.

ಗುರುವಾರ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಡಿಯರ್ನೆಸ್ ಭತ್ಯೆ (ಡಿಎ) ಮತ್ತು ಡಿನರ್ನೆಸ್ ರಿಲೀಫ್ (ಡಿಆರ್) ಹೆಚ್ಚಿಸುವ ನಿರ್ಧಾರವನ್ನು ಕೇಂದ್ರ ಸಂಪುಟ ಅನುಮೋದಿಸಿದೆ. ಡಿಎ ಹೆಚ್ಚಳದಿಂದ ವಾರ್ಷಿಕವಾಗಿ ಅಂದಾಜು 9,488.70 ಕೋಟಿ ತಲುಪಲಿದೆ.

"ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟವು ಇಂದು ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಹೆಚ್ಚುವರಿ ಕಂತನ್ನು ಬಿಡುಗಡೆ ಮಾಡಲು ಅನುಮೋದನೆ ನೀಡಿದೆ. ಇದು ಜುಲೈ 1,2021ರಿಂದ ಜಾರಿಗೆ ಬರಲಿದ್ದು, ಪ್ರಸ್ತುತ ಇರುವ ಮೂಲ ವೇತನ/ಪಿಂಚಣಿಯ ದರ ಶೇ. 28% ರಿಂದ ಶೇ. 3% ರಷ್ಟು ಹೆಚ್ಚಳವಾಗಲಿದೆ"ಎಂದು ಪಿಐಬಿ ಪ್ರಕಟಣೆಯಲ್ಲಿ ಹೇಳಿದೆ.

"ಈ ಹೆಚ್ಚಳವು ಅಂಗೀಕೃತ ಸೂತ್ರಕ್ಕೆ ಅನುಸಾರವಾಗಿದೆ ಮತ್ತು 7 ನೇ ಕೇಂದ್ರೀಯ ವೇತನ ಆಯೋಗದ ಶಿಫಾರಸುಗಳನ್ನು ಆಧರಿಸಿದೆ. ಡಿಯರ್ನೆಸ್ ಅಲೋವೆನ್ಸ್ ಮತ್ತು ಡಿಯರ್ನೆಸ್ ರಿಲೀಫ್ ಎರಡರ ಹೆಚ್ಚಳದಿಂದಾಗಿ ವರ್ಷಕ್ಕೆ ಒಟ್ಟು 9,488.70 ಕೋಟಿ ತಲುಪಲಿದೆ. ಇದರಿಂದ ಸುಮಾರು 47.14 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.62 ಲಕ್ಷ ಪಿಂಚಣಿದಾರರಿಗೆ ಲಾಭವಾಗುತ್ತದೆ" ಎಂದು ಬಿಡುಗಡೆಯಲ್ಲಿ ತಿಳಿಸಲಾಗಿದೆ.

 

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಆದಾಯ ಸಂಗ್ರಹಣೆಯಲ್ಲಿ ಕೊರತೆಯಿಂದಾಗಿ 2020 ರಲ್ಲಿ ಕೇಂದ್ರ ಸರ್ಕಾರ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಡಿಎ ಮತ್ತು ಡಿಆರ್ ಪ್ರಯೋಜನಗಳನ್ನು ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದನ್ನು ಗಮನಿಸಬಹುದು.

For Quick Alerts
ALLOW NOTIFICATIONS  
For Daily Alerts

English summary
Union cabinet approved 3 percent DA hike for central government employees and pensioners for diwali.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X