7ನೇ ವೇತನ ಆಯೋಗ: ಕೇಂದ್ರ ಸರ್ಕಾರಿ ನೌಕರರ ವೇತನ ಶೇ.28ರಷ್ಟು ಹೆಚ್ಚಳ

ಕೇಂದ್ರ ಸರ್ಕಾರಿ ನೌಕರರ ಸಂಬಳ ಹೆಚ್ಚಳ ಕುರಿತಂತೆ ನವೆಂಬರ್ ತಿಂಗಳಿನಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಬಗ್ಗೆ ಮೋದಿ ಭರವಸೆ ನೀಡಿದ್ದಾರೆ. ವೇತನ ಸಂಹಿತೆಯ ಕರಡು ಪ್ರತಿ ಶಿಫಾರಸ್ಸಿನಲ್ಲಿ ಕೆಲಸದ ಅವಧಿಯ ಬಗ್ಗೆ ಬದಲಾವಣೆ ಇದ್ದರೂ ಕೂಡ ಕನಿಷ್ಠ ವೇತನದಲ್ಲಿ ಬದಲಾವಣೆ ಮಾಡಿಲ್ಲ.

ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳ: ಭರವಸೆ ನೀಡಿದ ಮೋದಿ

 

7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಕೇಂದ್ರ ಸರ್ಕಾರಿ ನೌಕರರಿಗೆ 18,000ರೂ ಕನಿಷ್ಠ ವೇತನ ಪ್ರತಿ ತಿಂಗಳಿಗೆ ಸಿಗಲಿದೆ. ವೇತನ ಸಂಹಿತೆಯ ಕರಡು ಪ್ರತಿಯಂತೆ ಉದ್ಯೋಗಿಗಳು ದಿನಕ್ಕೆ 9 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ವೇತನವನ್ನು ನಿರ್ಧರಿಸಲು ಮೂರು ಭೌಗೋಳಿಕ ವರ್ಗೀಕರಣಗಳನ್ನು ಸೂಚಿಸಲಾಗಿದೆ. ಗೃಹಭತ್ಯೆಯನ್ನು ನಗರಕ್ಕೆ ಅನುಗುಣವಾಗಿ ವಿಂಗಡಿಸುವುದರ ಬಗ್ಗೆ ಯಾವುದೇ ಸೂಚನೆಗಳು ಪ್ರಸ್ತಾಪವಾಗಿಲ್ಲ ಎನ್ನಲಾಗಿದೆ.

ಕೇಂದ್ರ ಸರ್ಕಾರಿ ಸ್ವಾಮ್ಯದ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರೂಪ್ ಬಿ ಹಾಗೂ ಗ್ರೂಪ್ ಸಿ ನಾನ್ ಗೆಜೆಟೆಡ್ ಅಧಿಕಾರಿಗಳಿಗೆ ಅನುತ್ಪಾದನಾ ಮಿಲಿತ ಬೋನಸ್ ನೀಡಲಾಗಿದೆ. ಡಿಎ ಜೊತೆಗೆ ಟಿಎ ಕೂಡ ಸಿಕ್ಕಿದೆ. ಆದರೆ ಕನಿಷ್ಠ ವೇತನ ಏರಿಕೆ ಮಾಡಲಾಗಿಲ್ಲ.

ಒಂದು ತಿಂಗಳಲ್ಲಿ 26 ದಿನಗಳಿಗೆ ತಿಂಗಳ ವೇತನವನ್ನು ನಿಗದಿಪಡಿಸಲಾಗುತ್ತದೆ ಅದರ ಅನ್ವಯದಂತೆ ಉತ್ಪಾದನಾ ಕಾರ್ಖಾನೆಗಳೂ ಪ್ರತಿ ದಿನ 9 ಗಂಟೆ ಅವಧಿ ಕೆಲಸ ಮಾಡುವಂತೆ ಮನವಿ ಮಾಡಿವೆ. ಸದ್ಯ ಈ ಲೆಕ್ಕಾಚಾರದಂತೆ ಪ್ರತಿ ದಿನ ಒಬ್ಬ ವ್ಯಕ್ತಿಗೆ 692/- ರೂಗಳು ಸಿಗಲಿದೆ. ಅದರೆ ಸರ್ಕಾರ ಈಗ ವೇತನ ಪರಿಷ್ಕರಣೆ ಮಾಡಲಿದ್ದು, ಕನಿಷ್ಠ ವೇತನ ಕೂಡಾ ದೇಶವ್ಯಾಪ್ತಿ ಬದಲಾಗಲಿದೆ.

ಕೇಂದ್ರ ಸರ್ಕಾರಿ ನೌಕರರ ಸಂಬಳ ಶೇ28ರಷ್ಟು ಏರಿಕೆಯಾಗಲಿದ್ದು, ಇದನ್ನು ರಾಜ್ಯ ಸರ್ಕಾರಿ ನೌಕರರಿಗೂ ಹಂತ ಹಂತವಾಗಿ ಜಾರಿಗೊಳಿಸಲು ಮಂಡಳಿ ಸೂಚಿಸಿದೆ. 7ನೇ ವೇತನ ಆಯೋಗದ ಅನ್ವಯ ರಾಜ್ಯ ಸರ್ಕಾರಿ ನೌಕರರಿಗೂ ಸಮಾನ ವೇತನ, ಭತ್ಯೆ, ಕೆಲಸದ ಅವಧಿ, ರಜಾ ದಿನ ನಿಗದಿ ಮಾಡುವಂತೆ ಬೇಡಿಕೆ ಇದೆ.

ಕನಿಷ್ಟ ವೇತನವನ್ನು 18,000 ದಿಂದ 26,000 ರೂಪಾಯಿಗೆ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಿ ನೌಕರರು ಆಗ್ರಹಿಸಿದ್ದಾರೆ. 3.7 ಫಿಟ್ಮೆಂಟ್ ಫಾರ್ಮುಲಾದಂತೆ ಮೂಲ ವೇತನ ಏರಿಕೆಗೆ ಆಗ್ರಹಿಸಲಾಗಿದೆ. ಆದರೆ, 21,000 ರೂ ಗಳಿಗೆ ನಿಗದಿ ಪಡಿಸಿ 3.00 ಫಿಟ್ಮೆಂಟ್ ನಂತೆ ಮೂಲ ವೇತನ ಏರಿಕೆ ಮಾಡುವ ನಿರೀಕ್ಷೆಯಿದೆ. ಹೀಗಾಗಿ ಕನಿಷ್ಠ ವೇತನ 21 ಸಾವಿರ ದಿಂದ 26 ಸಾವಿರ ರೂ ತನಕ ಏರಿಕೆ ಮಾಡುವ ಸಾಧ್ಯತೆಯಿದೆ.

 

ಪ್ರತಿ ದಿನಕ್ಕೆ 2,700 ಕ್ಯಾಲೋರಿ ನಿವ್ವಳ ಆಹಾರ ಸೇವನೆ ಯುನಿಟ್ಟುಗಳು ಹಾಗೂ ಪ್ರತಿ ಕುಟುಂಬಕ್ಕೆ 66 ಮೀಟರ್ ಬಟ್ಟೆ , ಶೇ10ರಷ್ಟು ಮನೆ ಬಾಡಿಗೆ, ಇಂಧನ, ವಿದ್ಯುತ್ ಪೂರೈಕೆ, ಇನ್ನಿತರೆ ಸೌಲಭ್ಯಗಳಿಗಾಗಿ ಶೇ 20ರಷ್ಟು ಕಡಿತವಾಗಲಿದ್ದು, ಇದರಲ್ಲಿ ಯಾವುದೇ ಬದಲಾವಣೆಯಾಗಿರುವುದಿಲ್ಲ. ತುರ್ತು ಪರಿಸ್ಥಿತಿಯ ಖರ್ಚು ವೆಚ್ಚದ ಕಡಿತ ಶೇ 25ರಷ್ಟು ಎಂದು ನಿಗದಿ ಮಾಡಲಾಗಿದೆ.

For Quick Alerts
ALLOW NOTIFICATIONS  
For Daily Alerts

English summary
Modi promises minimum wages for central government employees will rise upto 28 percent.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X