ವೇತನ ಹೆಚ್ಚಳ: ಕಾಲೇಜು ಶಿಕ್ಷಕರಿಗೆ ಕೇಂದ್ರದಿಂದ ದೀಪಾವಳಿ ಬಂಪರ್ ಕೊಡುಗೆ

ಪ್ರಾಧ್ಯಾಪಕರ ವೇತನ ಪರಿಷ್ಕರಣೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದ್ದು, 7ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರಾಧ್ಯಾಪಕರು ಮತ್ತು ಅವರಿಗೆ ಸರಿಸಮಾನ ಹುದ್ದೆಯಲ್ಲಿರುವ ಸಿಬ್ಬಂದಿ ವೇತನ ಹೆಚ್ಚಿಸಿದೆ

ಜಿ ಎಸ್ ಟಿ ಕಡಿಮೆ ಮಾಡುವ ಮೂಲಕ ದಸರಾ ಉಡುಗೊರೆ ನೀಡಿದ್ದ ಕೇಂದ್ರ ಸರ್ಕಾರ ಈಗ ದೀಪಾವಳಿಗೆ ಉಡುಗೊರೆಯಾಗಿ ಪ್ರಾಧ್ಯಾಪಕರ ವೇತನ ಹೆಚ್ಚಿಸಿದೆ.

ಪ್ರಾಧ್ಯಾಪಕರ ವೇತನ ಪರಿಷ್ಕರಣೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದ್ದು, 7ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರಾಧ್ಯಾಪಕರು ಮತ್ತು ಅವರಿಗೆ ಸರಿಸಮಾನ ಹುದ್ದೆಯಲ್ಲಿರುವ ಸಿಬ್ಬಂದಿಯ ವೇತನ ಹೆಚ್ಚಿಸಲಾಗಿದೆ.

ಪ್ರಾಧ್ಯಾಪಕರ ವೇತನ ಹೆಚ್ಚಳ

ಕೇಂದ್ರ ಸರ್ಕಾರದ ಈ ನಡೆಯಿಂದಾಗಿ ಸುಮಾರು 7.58 ಲಕ್ಷ ಪ್ರಾಧ್ಯಾಪಕರಿಗೆ ಅನುಕೂಲವಾಗಲಿದೆ. 2016ರ ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ಹೊಸ ವೇತನ ಜಾರಿಯಾಗಲಿದ್ದು, ಕೇಂದ್ರೀಯ ಮತ್ತು ರಾಜ್ಯಗಳಲ್ಲಿನ ವಿಶ್ವವಿದ್ಯಾಲಯಗಳು, ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಭಾರತೀಯ ತಂತ್ರಜ್ಞಾನ ಸಂಸ್ಥೆಗಳ ಪ್ರಾಧ್ಯಾಪಕರಿಗೆ ಅನ್ವಯಿಸುತ್ತದೆ.

ಯಾರ ಸಂಬಳ ಎಷ್ಟು?

ಸಹಾಯಕ ಪ್ರಾಧ್ಯಾಪಕರ ವೇತನ ಪ್ರತಿ ತಿಂಗಳು ₹47ಸಾವಿರದಿಂದ 57ಸಾವಿರಕ್ಕೆ ಹೆಚ್ಚಳವಾಗಲಿದೆ.

ಸಹಾಯಕ ಪ್ರಾಧ್ಯಾಪಕರ (ಗ್ರೇಡ್‌-2) ವೇತನ ಪ್ರತಿ ತಿಂಗಳು ₹56ಸಾವಿರದಿಂದ 68ಸಾವಿರಕ್ಕೆ

ಸಹಾಯಕ ಪ್ರಾಧ್ಯಾಪಕ (ಗ್ರೇಡ್‌-3) ವೇತನ ಪ್ರತಿ ತಿಂಗಳು ₹65ಸಾವಿರದಿಂದ 80ಸಾವಿರಕ್ಕೆ ಹೆಚ್ಚಳವಾಗಲಿದೆ.

ಸಹ ಪ್ರಾಧ್ಯಾಪಕರ ವೇತನ ಪ್ರತಿ ತಿಂಗಳು 1.07ಲಕ್ಷದಿಂದ 1.31 ಲಕ್ಷಕ್ಕೆ

ಪ್ರಾಧ್ಯಾಪಕರ ವೇತನ ₹1.16ರಿಂದ 1.44ಲಕ್ಷಕ್ಕೆ ಹೆಚ್ಚಳವಾಗಲಿದೆ.

ಪ್ರಾಧ್ಯಾಪಕರ ವೇತನ ಹೆಚ್ಚಳ

'ವಿಶ್ವವಿದ್ಯಾಲಯ ಅನುದಾನ ಆಯೋಗ ಅಥವಾ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಅನುದಾನ ಪಡೆಯುವ 106 ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು, ರಾಜ್ಯ ಸರ್ಕಾರಗಳಿಂದ ಅನುದಾನ ಪಡೆಯುವ 329 ವಿಶ್ವವಿದ್ಯಾಲಯಗಳು ಹಾಗೂ 12,912 ಸರ್ಕಾರ ಮತ್ತು ಖಾಸಗಿ ಅನುದಾನಿತ ಕಾಲೇಜುಗಳ ಪ್ರಾಧ್ಯಾಪಕರು ಮತ್ತು ಅವರ ಸರಿಸಮಾನ ಹುದ್ದೆಯಲ್ಲಿರುವ ಸಿಬ್ಬಂದಿ ಹೊಸ ವೇತನದ ಲಾಭ ಪಡೆಯಲಿದ್ದಾರೆ' ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ತಿಳಿಸಿದ್ದಾರೆ.

More News  

For Quick Alerts
ALLOW NOTIFICATIONS  
For Daily Alerts

English summary
The Union Cabinet chaired by the Prime Minister Narendra Modi on Wednesday has approved revision of pay scales for about 8 lakh teachers and other equivalent academic staff under the recommendations of Seventh Central Pay Commission.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+