ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಎಐ) ಮ್ಯಾನೇಜರ್ ಮತ್ತು ಜ್ಯೂನಿಯರ್ ಎಕ್ಸಿಕ್ಯುಟಿವ್ ಹುದ್ದೆಗಳ ಪ್ರವೇಶ ಪರೀಕ್ಷೆಯ ಪ್ರವೇಶ ಪತ್ರವನ್ನು ಪ್ರಕಟ ಮಾಡಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಎಎಐ ಒಟ್ಟು 368 ಹುದ್ದೆಗಳನ್ನು ಭರ್ತಿ ಮಾಡಲು ಜನವರಿ 29,2021ರೊಳಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಪ್ರವೇಶ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಇದೀಗ ಪ್ರವೇಶ ಪರೀಕ್ಷೆಯ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡುವುದು ಹೇಗೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.

ಪ್ರವೇಶ ಪತ್ರ ಡೌನ್‌ಲೋಡ್ ಮಾಡುವುದು ಹೇಗೆ ? ಇಲ್ಲಿ ತಿಳಿಯಿರಿ:
ಸ್ಟೆಪ್ 1: ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ https://www.aai.aero/ ಗೆ ಭೇಟಿ ನೀಡಿ.
ಸ್ಟೆಪ್ 2: ಹೋಂ ಪೇಜ್ ನಲ್ಲಿ ಲಭ್ಯವಿರುವ 'Link For Downloading Admit Card' ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ನಂತರ ಇನ್ನೊಂದು ಪುಟಕ್ಕೆ ಹೋಗುವಿರಿ ಅಲ್ಲಿ ನಿಮ್ಮ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ನೀಡಿ ಲಾಗಿನ್ ಆಗಿ
ಸ್ಟೆಪ್ 4: ಪ್ರವೇಶ ಪತ್ರವು ಸ್ಕ್ರೀನ್ ಮೇಲೆ ಮೂಡುವುದು ಅದನ್ನು ಸೇವ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ
ಅಭ್ಯರ್ಥಿಗಳು ನೇರವಾಗಿ ಪ್ರವೇಶಪತ್ರವನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











