ಮೂರು ವರ್ಷಗಳ ಅವಧಿಯ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ (ಎಂಸಿಎ) ಕೋರ್ಸ್ ಅನ್ನು ಎರಡು ವರ್ಷಗಳ ಅವಧಿಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಕೌನ್ಸಿಲ್ (ಎಐಸಿಟಿಇ) ಕಡಿತಗೊಳಿಸಿದೆ. ಇನ್ಮುಂದೆ ವಿದ್ಯಾರ್ಥಿಗಳು ಎಂಸಿಎ ಕೋರ್ಸ್ ಅನ್ನು ಎರಡು ವರ್ಷಗಳಲ್ಲೇ ಅಧ್ಯಯನ ಮಾಡಬಹದು.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು(ಎಐಸಿಟಿಇ) ಇದರ ಜೊತೆಗೆ 2020 -21ನೇ ಶೈಕ್ಷಣಿಕ ಸಾಲಿನಿಂದ ಈ ನಿಯಮ ಜಾರಿಗೆ ಬರಲಿದೆ ಎಂದು ಟ್ವೀಟ್ ನಲ್ಲಿ ತಿಳಿಸಿದೆ. ಯುಜಿಸಿ ಕಳೆದ ವರ್ಷವೇ ಎಂಸಿಎ ಶೈಕ್ಷಣಿಕ ಅವಧಿ ಕಡಿತಗೊಳಿಸಲು ಸೂಚಿಸಿತ್ತು. ಅದರ ಅನ್ವಯದಂತೆ ಬದಲಾವಣೆ ಮಾಡಲಾಗಿದೆ ಎಂದು ಎಐಸಿಟಿಇ ಹೇಳಿದೆ.
ಯುಜಿಸಿ 545ನೇ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧಾರವಾದಂತೆ ಡಿಸೆಂಬರ್ 19, 2019ಕ್ಕೆ ಎಐಸಿಟಿಇಗೆ ಈ ಕುರಿತಂತೆ ನಿರ್ದೇಶನ ಸಿಕ್ಕಿದೆ. ಇತೀಚೆಗೆ ನಡೆದ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಇದಲ್ಲದೆ, ಉನ್ನತ ಶಿಕ್ಷಣ ಪದವಿ ಪರೀಕ್ಷೆಗಳನ್ನು ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಯುಜಿಸಿ ಆದೇಶ ಮಾಡಿದೆ. ವಿದ್ಯಾರ್ಥಿಗಳ ಭವಿಷ್ಯ ದೃಷ್ಟಿಯಿಂದ ಪರೀಕ್ಷೆ ಒಂದು ಮಹತ್ವದ ವಿಷಯವಾಗಿದೆ ಎಂದು ಯುಜಿಸಿ ತಿಳಿಸಿದೆ. ಎಲ್ಲಾ ವಿಶ್ವವಿದ್ಯಾಲಯದ ಕುಲಪತಿಗಳು ಕಾಲೇಜು ಪಾಂಶುಪಾಲರುಗಳಿಗೆ ಸುತ್ತೋಲೆ ಹೊರಡಿಸಿ ಈ ಆದೇಶ ಮಾಡಿರುವುದಲ್ಲದೆ, ರಾಜ್ಯ ಸರ್ಕಾರಕ್ಕೂ ಮಾಹಿತಿಯನ್ನು ರವಾನೆ ಮಾಡಿದೆ.


Click it and Unblock the Notifications











