ದಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ದೆಹಲಿ ಇದೀಗ ಎಂಬಿಬಿಎಸ್ ಪ್ರೋಗ್ರಾಂ ನ ರಿಜಿಸ್ಟ್ರೇಶನ್ ಪ್ರಕ್ರಿಯೆ ಕುರಿತ್ತಂತೆ ನೋಟಿಫಿಕೇಶನ್ ರಿಲೀಸ್ ಮಾಡಿದೆ. ಈ ನೋಟಿಫಿಕೇಶನ್ ಪ್ರಕಾರ, ಎಂಬಿಬಿಎಸ್ ಪ್ರೋಗ್ರಾಂನ ರಿಜಿಸ್ಟ್ರೇಶನ್ ಪ್ರಕ್ರಿಯೆಯು ನವಂಬರ್ 30 ರಿಂದ ಪ್ರಾರಂಭವಾಗಲಿದೆ ಎಂದು ತಿಳಿದುಬಂದಿದೆ. ಈ ಮೊದಲು ರಿಜಿಸ್ಟ್ರೇಶನ್ ಪ್ರಕ್ರಿಯೆಯು ನವಂಬರ್ 15 ರಿಂದ ಪ್ರಾರಂಭವಾಗಲಿದೆ ಎಂದು ತಿಳಿಸಲಾಗಿತ್ತು.
ಇದೀಗ ನವಂಬರ್ 30 ರಿಂದ ರಿಜಿಸ್ಟ್ರೇಶನ್ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಈ ಪ್ರಕ್ರಿಯೆಯು ಜನವರಿ 3,2019 ರವರೆಗೆ ನಡೆಯಲಿದೆ. ಜನವರಿ 7, 2019 ರಂದು ಅಭ್ಯರ್ಥಿಗಳು ತಮ್ಮ ರಿಜಿಸ್ಟ್ರೇಶನ್ ಸ್ಟೇಟಸ್ ಚೆಕ್ ಮಾಡಿಕೊಳ್ಳ ಬಹುದಾಗಿದೆ. ಒಮ್ಮೆ ರಿಜಿಸ್ಟ್ರೇಶನ್ ಪ್ರಕ್ರಿಯೆ ಕಂಪ್ಲೀಟ್ ಆದ ಕೂಡಲೇ ಮತ್ತೆ ಯಾವುದೇ ತಿದ್ದುಪಡಿಗೆ ಅವಕಾಶವಿರುವುದಿಲ್ಲ. ಜನವರಿ 22, 2019 ರಂದು ಕೊನೆಯದಾಗಿ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದಾಗಿದೆ.
ಬೇಸಿಕ್ ರಿಜಿಸ್ಟ್ರೇಶನ್ ಪ್ರಕ್ರಿಯೆ ಕಂಪ್ಲೀಟ್ ಆದ ಕೂಡಲೇ ಫ್ರೆಬ್ರವರಿ 21 ರಿಂದ ಮಾರ್ಚ್ 13, 2019 ಸಂಜೆ 5 ಗಂಟೆಯೊಳಗೆ ಅಭ್ಯರ್ಥಿಗಳು ಶುಲ್ಕ ಪಾವತಿಸಬೇಕು ಹಾಗೆಯೇ ಪರೀಕ್ಷೆ ಕೇಂದ್ರವನ್ನ ಆಯ್ಕೆ ಮಾಡಿಕೊಳ್ಳಬೇಕಾಗಿದೆ.