ಎಐಐಎಂಎಸ್ ಪಿಜಿ ಜುಲೈ ಪರೀಕ್ಷೆಯ ಆನ್‌ಲೈನ್ ರಿಜಿಸ್ಟ್ರೇಶನ್ ಪ್ರಕ್ರಿಯೆ ಇದೀಗ ಪ್ರಾರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಆಫೀಶಿಯಲ್ ಸೈಟ್‌ಗೆ aiimsexams.org ವಿಸಿಟ್ ಮಾಡಿ, ರಿಜಿಸ್ಟ್ರೇಶನ್ ಮಾಡಿಕೊಳ್ಳಬಹುದಾಗಿದೆ. ಎಐಐಎಂಎಸ್ ಪಿಜಿಯ ಪ್ರವೇಶ ಪರೀಕ್ಷೆಯು ವರ್ಷಕ್ಕೆ ಎರಡು ಬಾರಿ ನಡೆಯಲಿದೆ. ಹೆಚ್ಚಾಗಿ ಜನವರಿ ಹಾಗೂ ಜುಲೈ ತಿಂಗಳಿನಲ್ಲಿ ಈ ಪರೀಕ್ಷೆ ನಡೆಯಲಿದೆ. ಜನವರಿಯಲ್ಲಿ ನಡೆಯಲಿರುವ ಈ ಪರೀಕ್ಷೆಯ ರಿಜಿಸ್ಟ್ರೇಶನ್ ಪ್ರಕ್ರಿಯೆ ಈಗಾಗಲೇ ಕೊನೆಗೊಂಡಿದ್ದು, ಈ ಪರೀಕ್ಷೆಯು ಇದೀಗ ನವಂಬರ್ 18 ರಂದು ನಡೆಯಲಿದೆ. ಹಾಗೂ ನವಂಬರ್ ತಿಂಗಳ ಮೊದಲ ವಾರದಂದು ಈ ಪರೀಕ್ಷೆಯ ಅಡ್ಮಿಟ್ ಕಾರ್ಡ್ ಪ್ರಕಟವಾಗಲಿದೆ.

ಎಐಐಎಂಎಸ್ ಪಿಜಿ 2019 ಪರೀಕ್ಷೆಯು 5 ಎಂಡಿ ಪ್ರೋಗ್ರಾಂ ಹಾಗೂ ಬೇಸಿಕ್ ಕ್ಲೀನಿಕಲ್ ಮತ್ತು ಕ್ಲೀನಿಕಲ್ ಸೈನ್ಸ್ ವಿಭಾಗದಲ್ಲಿ 499 ಎಂಡಿ ಹಾಗೂ ಎಂಎಸ್ ಸೀಟುಗಳಿಗಾಗಿ ನಡೆಯಲಿದೆ. ಈ ಪರೀಕ್ಷೆಯ ಪ್ರಮುಖ ಕೇಂದ್ರವು 1956 ರಂದು ನವದೆಹಲಿಯಲ್ಲಿ ಸ್ಥಾಪಿತವಾಗಿದೆ. ದೇಶದಾದ್ಯಂತ ಈ ಸಂಸ್ಥೆಯು 6 ಶಿಕ್ಷಣ ಸಂಸ್ಥೆಗಳನ್ನ ಹೊಂದಿದೆ ಅವುಗಳೆಂದ್ರೆ ಎಐಐಎಂಎಸ್ ಭೂಪಾಲ್, ಎಐಐಎಂಎಸ್ ಭುಬನೇಶ್ವರ್, ಎಐಐಎಂಎಸ್ ಜೋಧ್ಪುರ್, ಎಐಐಎಂಎಸ್ ಪಾಟ್ನಾ ಹಾಗೂ ಎಐಐಎಂಎಸ್ ರಿಷಿಕೇಶ್.
ಎಐಐಎಂಎಸ್ ಪಿಜಿ 2019 ಅರ್ಹತೆಗಳು:
- ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದಿಂದ ಅಧೀಕೃತಗೊಂಡಿರುವ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಪಡೆಯಬೇಕಾದ್ರೆ ಈ ಅರ್ಹತೆ ಕಡ್ಡಾಯವಾಗಿ ಇರಲೇ ಬೇಕು. ಎಂಡಿ/ಎಂಎಸ್ ಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಎಂಬಿಬಿಎಸ್ ಪದವಿ ಪಡೆದಿರಬೇಕು ಹಾಗೂ ಎಂಡಿಎಸ್ ಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಬಿಡಿಎಸ್ ಪದವಿ ಪಡೆದಿರಬೇಕು
- ಜನವರಿ 31, 2019 ರೊಳಗೆ ಅಭ್ಯರ್ಥಿಗಳು ಒಂದು ವರ್ಷದ ಇಂಟರ್ನ್ ಶಿಪ್ ಕಂಪ್ಲೀಟ್ ಮಾಡಿರಬೇಕು
- ಸಾಮಾನ್ಯ ಕೆಟಗರಿ ಅಭ್ಯರ್ಥಿಗಳಿಗೆ ಎಂಬಿಬಿಎಸ್ ನಲ್ಲಿ ಕನಿಷ್ಟ 55 ಶೇ. ಅಂಕ ಗಳಿಸಿರಬೇಕು. ಹಾಗೂ ಎಸ್‌ಸಿ/ ಎಸ್‌ಟಿ ಕೆಟಗರಿ ಸೇರಿದ ಅಭ್ಯರ್ಥಿಗಳು ಎಂಬಿಬಿಎಸ್ ನಲ್ಲಿ ಕನಿಷ್ಟ 50 ಶೇ ಅಂಕ ಗಳಿಸಿರಬೇಕು.


Click it and Unblock the Notifications











