ಏರ್ ಇಂಡಿಯಾ ನೇಮಕಾತಿ 2019: ಕ್ಯಾಟೆರಿಂಗ್ ಏಜೆಂಟ್ಸ್ ಹುದ್ದೆಗಳ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನ

ಸರ್ಕಾರಿ ಸ್ವಾಮ್ಯದ ಎಂಟರ್ ಪ್ರೈಸ್ ಮತ್ತು ಫ್ಲಾಗ್ ಧಾರಕವಾಗಿರುವ ಭಾರತೀಯ ಏರ್ ಲೈನ್ಸ್ ನ ಏರ್ ಇಂಡಿಯಾ ಲಿಮಿಟೆಡ್ 14 ಕ್ಯಾಟರಿಂಗ್ ಏಜೆಂಟ್ ಗಳ ನೇಮಕಾತಿಗೆ ಪ್ರಕಟಣೆ ಹೊರಡಿಸಿದೆ. ಭಾರತೀಯ ನಾಗರೀಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳನ್ನು ಜನವರಿ 9,2019 ರಂದು ನಡೆಯಲಿರುವ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಖಾಲಿ ಇರುವ 14 ಕ್ಯಾಟರಿಂಗ್ ಏಜೆಂಟ್ ಪೋಸ್ಟ್ ಗಳಿಗೆ ಮೀಸಲಾತಿ ಮತ್ತು ಕಾಯ್ದಿರಿಸಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದು, ಅಭ್ಯರ್ಥಿಗಳು ದೆಹಲಿಯಲ್ಲಿ 5 ವರ್ಷಗಳವರೆಗೆ ಒಪ್ಪಂದದ ಅಥವಾ ಕಾಂಟ್ರ್ಯಾಕ್ಟ್ ಮೇರೆಗೆ ಕೆಲಸ ನಿರ್ವಹಿಸಬೇಕಾಗುತ್ತದೆ. ತದನಂದರ ಅವಧಿಯನ್ನು ಅವಶ್ಯಕತೆಗನುಗುಣವಾಗಿ ವಿಸ್ತರಿಸಲಾಗುವುದು.ಹುದ್ದೆಗಳ ವಿವರ , ಅರ್ಹತೆ , ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತಿತರ ವಿವರಗಳನ್ನು ತಿಳಿಯಲು ಮುಂದಕ್ಕೆ ಓದಿ.

ಏರ್ ಇಂಡಿಯಾ ನೇಮಕಾತಿ 2019: ಕ್ಯಾಟೆರಿಂಗ್ ಏಜೆಂಟ್ಸ್ ಹುದ್ದೆಗಳ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನ

 

CRITERIA DETAILS
Name Of The Posts ಕ್ಯಾಟರಿಂಗ್ ಏಜೆಂಟ್ಸ್
Organisation ಭಾರತೀಯ ಏರ್ ಲೈನ್ ಲಿಮಿಟೆಡ್
Educational Qualification ಪದವಿ/ಡಿಪ್ಲೊಮ ಇನ್ ಹೋಟೆಲ್ ಮ್ಯಾನೇಜ್ ಮೆಂಟ್
Experience ಅಪೇಕ್ಷಣೀಯ
Skills Required ಮೆಡಿಕಲ್ ಫಿಟ್ನೆಸ್
Job Location ದೆಹಲಿ
Salary Scale ತಿಂಗಳಿಗೆ 25,000/-ರೂ
Industry ಏವಿಯೇಶನ್
Application Start Date December 31, 2018
Application End Date January 10, 2019

ಖಾಲಿ ಹುದ್ದೆಗಳ ವರ್ಗದ ವಿವರ:

Categories No of Vacancies
GEN8
SC2
ST1
OBC3
Total 14

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತರಿರುವ ಅಭ್ಯರ್ಥಿಗಳು ಗಮನವಹಿಸಬೇಕಾಗಿರುವ ವಿಷಯವೆಂದರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18 ರಿಂದ 30ವರ್ಷದ ಒಳಗಿರಬೇಕು. ಎಸ್ ಸಿ/ಎಸ್ ಟಿ ಅಭ್ಯರ್ಥಿಗಳಿಗೆ 35 ವರ್ಷ ವಯಸ್ಸು ದಾಟಿರಬಾರದು ಮತ್ತು ಓಬಿಸಿ ಅಭ್ಯರ್ಥಿಗಳು 33 ವರ್ಷ ವಯಸ್ಸನ್ನು ದಾಟಿರಬಾರದು.

ಶೈಕ್ಷಣಿಕ ಅರ್ಹತೆಗಳು:

ಕ್ಯಾಟರಿಂಗ್ ಏಜೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಸಂಸ್ಥೆಯಲ್ಲಿ ಯಾವುದೇ ಪದವಿ ಅಥವಾ ಹೋಟೆಲ್ ಮ್ಯಾನೇಜ್ಮೆಂಟ್ ನಲ್ಲಿ ಡಿಪ್ಲೊಮ ಮಾಡಿರಬೇಕು.

ಅರ್ಜಿ ಸಲ್ಲಿಸುವ ಪುರುಷ ಅಥವಾ ಮಹಿಳೆಯು ಕಂಪ್ಯೂಟರ್ ಬಳಕೆಯ ಜೊತೆಗೆ ಎಕ್ಸೆಲ್/ವರ್ಡ್/ಎಂ ಎಸ್ ಔಟ್ಲುಕ್ ಮುಂತಾದವುಗಳ ಬಗೆಗೆ ಜ್ಞಾನ ಹೊಂದಿರಬೇಕು.

 

ಶುಲ್ಕದ ವಿವರ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಿರುವ ಅರ್ಹ ಅಭ್ಯರ್ಥಿಗಳು 'ಏರ್ ಇಂಡಿಯಾ ಲಿಮಿಟೆಡ್' ದೆಹಲಿಯ ಹೆಸಲಿನಲ್ಲಿ ಶುಲ್ಕ 1000/-ರೂಗಳ ಡಿಡಿಯನ್ನು ತೆಗೆಯಬೇಕು. ಎಸ್ ಸಿ/ಎಸ್ ಟಿ ಅಭ್ಯರ್ಥಿಗಳಿಗೆ ಈ ಶುಲ್ಕದಿಂದ ವಿನಾಯಿತಿಯನ್ನು ಹೊಂದಿರುತ್ತಾರೆ.

ಆಯ್ಕೆ ಪ್ರಕ್ರಿಯೆ ಮತ್ತು ಸಂಬಳದ ವಿವರ:

ಅಭ್ಯರ್ಥಿಗಳನ್ನು ಅವರ ಶೈಕ್ಷಣಿಕ ಅರ್ಹತೆ, ಸಾಫ್ಟ್ ಸ್ಕಿಲ್ಸ್ ಮತ್ತು ಅವರ ನೇರ ಸಂದರ್ಶನದ ಪರ್ಫಾರ್ಮೆನ್ಸ್ ಮೇಲೆ ಆಯ್ಕೆ ಮಾಡಲಾಗುತ್ತದೆ.

ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ತಿಂಗಳಿಗೆ 25,000/- ರೂ ಸಂಬಳ ನೀಡಲಾಗುತ್ತದೆ. ವರ್ಷದಿಂದ ವರ್ಷಕ್ಕೆ ಮೂಲ ವೇತನಕ್ಕೆ ತಿಂಗಳಿಗೆ ರೂ250/- ರಂತೆ ಸಂಬಳ ಹೆಚ್ಚಳ ಮಾಡಲಾಗುತ್ತದೆ.

ನೇರ ಸಂದರ್ಶನದ ಮಾಹಿತಿ:

ಈ ಹುದ್ದೆಗಳಿಗೆ ಅರ್ಜಿ ಸಲಿಸಲಿರುವ ಅರ್ಹ ಅಭ್ಯರ್ಥಿಗಳು ಜನವರಿ 9,2019 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 12:00PM ಗಂಟೆಗಳ ವರೆಗೆ ನಡೆಯಲಿರುವ ನೇರ ಸಂದರ್ಶನದಲ್ಲಿ ಹಾಜರಾಗಬೇಕು.

ಸಂದರ್ಶನ ನಡೆಯುವ ಸ್ಥಳ: ದಿ ಕಮ್ಯುನಿಟಿ ಸೆಂಟರ್, ಏರ್ ಇಂಡಿಯಾ ಹೌಸಿಂಗ್ ಕಾಲೋನಿ, ವಸಂತ್ ವಿಹಾರ್, ನವದೆಹಲಿ.

ಅರ್ಜಿ ಸಲ್ಲಿಸುವುದು ಹೇಗೆ:

ಅರ್ಜಿ ಸಲ್ಲಿಸಲಿರುವ ಅರ್ಹ ಅಭ್ಯರ್ಥಿಗಳು ಏರ್ ಇಂಡಿಯನ್ ಅಧಿಕೃತ ವೆಬ್ ಸೈಟ್ ನಿಂದ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಅರ್ಜಿಯಲ್ಲಿ ಕೇಳಲಾಗಿರುವ ಅವಶ್ಯಕ ವಿವರಗಳನ್ನು ಭರ್ತಿ ಮಾಡಿ ಅಥವಾ ಅರ್ಜಿಯನ್ನು ಡೌನಲೋಡ್ ಮಾಡಲು ಮತ್ತು ಮಾಹಿತಿಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ನೇರ ಸಂದರ್ಶನದಲ್ಲಿ ಭಾಗವಹಿಸಲಿರುವ ಅಭ್ಯರ್ಥಿಗಳು ಈ ದಾಖಲೆಗಳು/ಪ್ರಮಾಣ ಪತ್ರಗಳನ್ನು ಸಂದರ್ಶನದ ಸ್ಥಳಕ್ಕೆ ಕಡ್ಡಾಯವಾಗಿ ತರಬೇಕು.

  • ಜನನ /ವಿಳಾಸದ ಪುರಾವೆಗಾಗಿ 10ನೇ ತರಗತಿ/ಎಸ್ ಎಸ್ ಎಲ್ ಸಿ ಪ್ರಮಾಣಪತ್ರ
  • ಜಾತಿ ಪ್ರಮಾಣ ಪತ್ರ
  • ಅನುಭವಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವುದಿದ್ದಲ್ಲಿ ಪ್ರಮಾಣಪತ್ರಗಳನ್ನು ತರಬೇಕು.
  • ನಿಮ್ಮ ಇತ್ತೀಚಿನ ಎರಡು ಪಾಸ್ ಪೋರ್ಟ್ ಗಾತ್ರದ ಭಾವಚಿತ್ರಗಳು ತರಬೇಕು.

For Quick Alerts
ALLOW NOTIFICATIONS  
For Daily Alerts

English summary
Air India, a government-owned enterprise and flag bearer of the Indian airlines with Air Indian Limited has invited applications from Indian nationals for filling 14 Catering Agents posts through Walk-In-Interviews scheduled on 09th January 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more