ಬೃಹತ್ ಕ್ಯಾಂಪಸ್‌ನಲ್ಲಿ 15 ಸಾವಿರ ಉದ್ಯೋಗಗಳ ಸೃಷ್ಟಿಸಲಿರುವ ಅಮೆಜಾನ್

ಆನ್‌ಲೈನ್ ಮೂಲಕ ವ್ಯಾಪಾರ ನಡೆಸುತ್ತಿರುವ ಅನೇಕ ಕಂಪನಿಗಳಲ್ಲೊಂದಾದ ಅಮೆಜಾನ್ ಡಾಟ್‌ಕಾಮ್ ಭಾರತದಲ್ಲಿ ತನ್ನ ವ್ಯವಹಾರವನ್ನು ವಿಸ್ತರಿಸಲು ಹೈದರಾಬಾದ್‌ನಲ್ಲಿ ತನ್ನ ಅತಿದೊಡ್ಡ ಕ್ಯಾಂಪಸ್ ಅನ್ನು ತೆರೆದಿದೆ.

ಮೇಜಾನ್‌ನ ಅಮೇಜಿಂಗ್‌ ಕ್ಯಾಂಪಸ್‌ನಲ್ಲಿ 15 ಸಾವಿರ ಉದ್ಯೋಗಗಳನ್ನು ಸೃಷ್ಟಿಸಲಿದೆ

ದೇಶದ ಆರ್ಥಿಕ ಕುಸಿತದಿಂದಾಗಿ ನಿರುದ್ಯೋಗ ಸಮಸ್ಯೆಯು ಹೆಚ್ಚುತ್ತಿದೆ. ಆದರೆ ಸಿಹಿ ಸುದ್ಧಿ ಏನೆಂದರೆ ಅಮೆಜಾನ್‌ ಸುಮಾರು 15 ಸಾವಿರ ಜನರಿಗೆ ಉದ್ಯೋಗವನ್ನು ಸೃಷ್ಟಿಸಲು ಮುಂದಾಗಿದೆ.

ಅಮೆಜಾನ್ ಡಾಟ್ ಕಾಮ್ :

ಅಮೆಜಾನ್ ಡಾಟ್ ಕಾಮ್ :

ಸಿಯಾಟಲ್‌ನಲ್ಲಿ ನೆಲೆಗೊಂಡಿರುವ ಅಮೆಜಾನ್ ಪ್ರಸ್ತುತ ಭಾರತದಲ್ಲಿ ಮಿಲಿಯನ್ ಡಾಲರ್ ಹೂಡಿಕೆಯೊಂದಿಗೆ ಹೊಸ ಕ್ಯಾಂಪಸ್ ನಿರ್ಮಿಸುತ್ತಿದೆ. ಇದರಲ್ಲಿ ಸುಮಾರು 15 ಸಾವಿರ ಮಂದಿ ಉದ್ಯೋಗ ಪಡೆಯುವ ನಿರೀಕ್ಷೆಯಿದೆ. ಪ್ರಸ್ತುತ ಕಂಪನಿಯು 62 ಸಾವಿರ ಉದ್ಯೋಗಿಗಳನ್ನು ಹೊಂದಿದೆ. ಅದರಲ್ಲಿ ಮೂರನೆಯ ಒಂದು ಭಾಗದಷ್ಟು ಉದ್ಯೋಗಿಗಳು ಹೈದರಾಬಾದ್‌ನಲ್ಲಿದ್ದಾರೆ.

ಹೈದರಾಬಾದ್ ನಲ್ಲಿ ನಿರ್ಮಿಸಿದ ಹೊಸ ಕಟ್ಟಡ:

ಹೈದರಾಬಾದ್ ನಲ್ಲಿ ನಿರ್ಮಿಸಿದ ಹೊಸ ಕಟ್ಟಡ:

ಆನ್‌ಲೈನ್ ವ್ಯವಹಾರ ತಾಣವಾಗಿರುವ ಅಮೆಜಾನ್‌ನ ಹೊಸ ಕಟ್ಟಡ ಬುಧವಾರ ಹೈದರಾಬಾದ್‌ನಲ್ಲಿ ಪ್ರಾರಂಭವಾಗಿದೆ. 9.5 ಎಕರೆ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಈ ಕಟ್ಟಡವು ಭಾರತದ ಮೊಟ್ಟ ಮೊದಲ ಬೃಹತ್ ಕಟ್ಟಡ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

 

62,000 ಉದ್ಯೋಗಿಗಳನ್ನು ಹೊಂದಿದೆ:

62,000 ಉದ್ಯೋಗಿಗಳನ್ನು ಹೊಂದಿದೆ:

2004 ರಲ್ಲಿ ಭಾರತದಕ್ಕೆ ಮೊದಲ ಭಾರಿಗೆ ಬಂದ ಅಮೆಜಾನ್ ಹೈದರಾಬಾದ್‌ನಲ್ಲಿ 62,000 ಉದ್ಯೋಗಿಗಳೊಂದಿಗೆ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಪ್ರಸ್ತುತ, ಕಂಪನಿಯು ಭಾರತದಲ್ಲಿ ಮಾತ್ರ ಸುಮಾರು 62 ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ.

 

ಲಕ್ಷಾಂತರ ಗುತ್ತಿಗೆ ಕಾರ್ಮಿಕರನ್ನು ಹೊಂದಿದೆ:

ಲಕ್ಷಾಂತರ ಗುತ್ತಿಗೆ ಕಾರ್ಮಿಕರನ್ನು ಹೊಂದಿದೆ:

ಅಮೆಜಾನ್ ತನ್ನ ತಾಯ್ನಾಡಿಗಿಂತ ಭಾರತದಲ್ಲಿ ಹೆಚ್ಚಿನ ಕಾರ್ಮಿಕರನ್ನು ಹೊಂದಿದ್ದು, ಲಕ್ಷಾಂತರ ಗುತ್ತಿಗೆ ಕಾರ್ಮಿಕರನ್ನು ಸಹ ಹೊಂದಿದೆ. ಇದಲ್ಲದೆಯೇ ಭಾರತದಲ್ಲಿ 1.55 ಲಕ್ಷ ಗುತ್ತಿಗೆ ಕಾರ್ಮಿಕರು ಅಮೆಜಾನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

 

2 ಲಕ್ಷ ಉದ್ಯೋಗಗಳು:

2 ಲಕ್ಷ ಉದ್ಯೋಗಗಳು:

"ಕಳೆದ 15 ವರ್ಷಗಳಲ್ಲಿ ನಾವು ಅಮೆಜಾನ್‌ನ ಆಲ್ ಇನ್ ಒನ್ ವಿತರಣಾ ಕೇಂದ್ರಗಳನ್ನು ಸೇರಿದಂತೆ ಭಾರತದ 13 ರಾಜ್ಯಗಳಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಉದ್ಯೋಗಗಳನ್ನು ಸೃಷ್ಟಿಸಿದ್ದೇವೆ" ಎಂದು ಅಮೆಜಾನ್ ಇಂಡಿಯಾದ ವ್ಯವಸ್ಥಾಪಕ ಅಮರ್ ಅಗರ್ವಾಲ್ ಹೇಳಿದ್ದಾರೆ.

ಹೈದರಾಬಾದ್‌ನಲ್ಲಿರುವ ಮೂರು ಪಟ್ಟು ಹೆಚ್ಚು ಉದ್ಯೋಗಿಗಳು:

ಹೈದರಾಬಾದ್‌ನಲ್ಲಿರುವ ಮೂರು ಪಟ್ಟು ಹೆಚ್ಚು ಉದ್ಯೋಗಿಗಳು:

ಅಮೇರಿಕಾದ ಸಿಯಾಟಲ್‌ನಲ್ಲಿರುವ ಅಮೆಜಾನ್‌ನ ಪ್ರಧಾನ ಕಚೇರಿಯಲ್ಲಿ ಕೇವಲ 5,000 ಉದ್ಯೋಗಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಭಾರತದ ಹೈದರಾಬಾದ್‌ನ ಕಚೇರಿಯಲ್ಲಿ ಅದರ ಮೂರು ಪಟ್ಟು ಹೆಚ್ಚು ಉದ್ಯೋಗಿಗಳಿದ್ದಾರೆ.

ಬಾರ್ಲಿ ಬಿಸ್ಕೆಟ್ ಕಂಪನಿ:

ಬಾರ್ಲಿ ಬಿಸ್ಕೆಟ್ ಕಂಪನಿ:

ಭಾರತದ ಅತಿದೊಡ್ಡ ಬಿಸ್ಕೆಟ್ ತಯಾರಕ ಬಾರ್ಲಿ ಇತ್ತೀಚೆಗೆ 10 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿತ್ತು.

ಭಾರತದಲ್ಲಿ ಆರ್ಥಿಕ ಮಟ್ಟದ ಕುಸಿತದ ಪರಿಣಾಮವಾಗಿ ವಿವಿಧ ವಲಯಗಳು ತೀವ್ರ ನಷ್ಟವನ್ನು ಎದುರಿಸುತ್ತಿರುವುದರಿಂದ ಬಾರ್ಲಿ ಬಿಸ್ಕತ್ತು ಸಂಸ್ಥೆಯು ಸುಮಾರು 10 ಸಾವಿರ ಉದ್ಯೋಗಿಗಳನ್ನು ವಜಾ ಮಾಡುತ್ತಿದೆ ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದರು.

ಒಂದು ಮಿಲಿಯನ್ ಕಾರ್ಮಿಕರು:

ಒಂದು ಮಿಲಿಯನ್ ಕಾರ್ಮಿಕರು:

1929 ರಲ್ಲಿ ಸ್ಥಾಪನೆಯಾದ ಬಾರ್ಲಿ ಕಂಪನಿಯು ಸುಮಾರು ಒಂದು ಮಿಲಿಯನ್ ನಷ್ಟು ಉದ್ಯೋಗಿಗಳನ್ನು ನೇಮಿಸಿಕೊಂಡಿದೆ. ಕಂಪನಿಯು ದೇಶಾದ್ಯಂತ 10 ಉತ್ಪಾದನಾ ಕೇಂದ್ರಗಳನ್ನು ಹೊಂದಿದ್ದು ,ಕಳೆದ ವಾರ ಬ್ರಿಟಾನಿಯಾ ಬಿಸ್ಕತ್‌ನ ವ್ಯವಸ್ಥಾಪಕ ನಿರ್ದೇಶಕ ವರುಣ್ ಬೆರ್ರಿ ಕಂಪನಿಯ ಮಾರಾಟ ಕುಸಿಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

 

More News  

For Quick Alerts
ALLOW NOTIFICATIONS  
For Daily Alerts

English summary
Amazon opening its largest campus in hyderabad and creating 15,000 jobs.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+