ಭಾರತೀಯರಿಗೆ ಮುಳುವಾದ ವಿದೇಶಿ ವೀಸಾ ನೀತಿ

ವಿದೇಶದಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ಮತ್ತು ವಿದೇಶಗಳಲ್ಲಿ ಕೆಲಸ ಮಾಡಬೇಕೆಂಬ ಆಸೆ ಹೊತ್ತವರಿಗೆ ಈಗ ಸಂಕಷ್ಟ ಎದುರಾಗಿದೆ. ವಿದೇಶಗಳಲ್ಲಿ ಜಾರಿಗೊಳಿಸುತ್ತಿರುವ ನೂತನ ವೀಸಾ ನಿಯಮಗಳು ಈಗ ಭಾರತೀಯರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಕೆಲದಿನಗಳ ಹಿಂದಷ್ಟೆ ವಿಶ್ವದ ದೊಡ್ಡಣ್ಣ ಅಮೆರಿಕ ಎಚ್1-ಬಿ ವೀಸಾ ರದ್ದುಗೊಳಿಸಿ ವಿಶ್ವವನ್ನೆ ನಡುಗಿಸಿತ್ತು. ಇದರಿಂದಾಗಿ ಹಲವು ಮಂದಿ ತಮ್ಮ ವಿದೇಶಿ ಕನಸುಳನ್ನು ಕೈಬಿಟ್ಟಿದ್ದರು ಕೂಡ. ಈಗ ಅಮೆರಿಕ ರೀತಿಯಲ್ಲೇ ಆಸ್ಟ್ರೇಲಿಯಾ ಕೂಡ ವಿದೇಶಿಗರಿಗೆ ನೀಡುವ 457 ವೀಸಾ ರದ್ದುಗೊಳಿಸುವ ಮೂಲಕ ಜಗತ್ತಿಗೆ ಶಾಕ್ ನೀಡಿದೆ.

ವಿದೇಶಿ ಉದ್ಯೋಗಕ್ಕಾಗಿಯೇ ಜಾರಿಗೆ ಬಂದಿದ್ದ 457 ವೀಸಾ ಈಗ ರದ್ದಾಗಿದೆ. ಆಸ್ಟ್ರೇಲಿಯಾದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಮ್ ಟರ್ನ್​ಬುಲ್ ತಿಳಿಸಿದ್ದಾರೆ.

ಆಸ್ಟ್ರೇಲಿಯಾ 457 ವೀಸಾ ರದ್ದು

 

457 ವೀಸಾ ಹಿನ್ನೆಲೆ

1996 ರಲ್ಲಿ ಆಸ್ಟ್ರೇಲಿಯಾ '457 ವೀಸಾ ಯೋಜನೆ'ಯನ್ನು ಆರಂಭಿಸಿತು. ಈ ಮೂಲಕ ಆಸ್ಟ್ರೇಲಿಯಾದಲ್ಲಿ ಹಲವು ಉದ್ಯೋಗಗಳನ್ನು ಸೃಷ್ಟಿಸಿ ಉದ್ಯಮ ವೃತ್ತಿಪರರು ಮತ್ತು ಕೌಶಲಯುತ ವಲಸಿಗರನ್ನು ತನ್ನತ್ತ ಸೆಳೆಯಿತು. ನಾಲ್ಕು ವರ್ಷ ಅವಧಿಯ 457 ವೀಸಾ ಅನೇಕ ಭಾರತೀಯರಿಗೆ ವರದಾನವಾಗಿ ಆಸ್ಟ್ರೇಲಿಯಾದಲ್ಲಿ ನೆಲೆಸುವಂತೆ ಮಾಡಿತು. 457 ವೀಸಾ ಬಳಸಿ 650 ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಉದ್ಯೋಗವನ್ನು ಪಡೆಯಬಹುದಾಗಿತ್ತು.

ಸ್ವದೇಶಿಗರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡುವ ಸಲುವಾಗಿ 'ಆಸ್ಟ್ರೇಲಿಯಾ ಫಸ್ಟ್' ಎಂಬ ನೀತಿಯನ್ನು ಅನುಸರಿಸಲಿದ್ದು, 457 ವೀಸಾದ ಬದಲಾಗಿ ನೂತನ ವೀಸಾ ನೀತಿಯನ್ನು ಜಾರಿಗೆ ತರಲಾಗುವುದು. ಇದರಲ್ಲಿ ಹಲವು ನಿರ್ಬಂಧಗಳಿರಲಿದ್ದು, ನಿಗದಿತ ಕೌಶಲ ಹೊಂದಿರುವ ಉದ್ಯೋಗಿಗಳನ್ನು ಮಾತ್ರ ನೇಮಿಸಲು ಅವಕಾಶವಿರಲಿದೆ.  ನೂತನ ವೀಸಾ ನೀತಿಯಲ್ಲಿ 200 ಕೆಲಸಗಳನ್ನು ತೆಗೆದುಹಾಕಲಾಗಿದೆ. ಇದರಲ್ಲಿ ಕಾಲ್​ಸೆಂಟರ್ ಮ್ಯಾನೇಜರ್, ನಟನೆ ಮುಂತಾದವು ಸೇರಿವೆ.

ಐಟಿ ಉದ್ಯೋಗಿಗಳಿಗೆ ಸಮಸ್ಯೆ

457 ವೀಸಾ ಬಳಸುತ್ತಿರುವವರಲ್ಲಿ ಐಟಿ ಉದ್ಯೋಗಿಗಳ ಪ್ರಮಾಣವೇ ಹೆಚ್ಚು. ಇದರಲ್ಲಿ ಶೇ.78ರಷ್ಟು ಭಾರತೀಯರೇ ಇದ್ದಾರೆ. ಇವರು ಸಿಡ್ನಿ ಮತ್ತು ಮೆಲ್ಬೋರ್ನ್​ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಹೀಗಾಗಿ 457 ವೀಸಾ ರದ್ದುಪಡಿಸಿರುವುದು ಭಾರತೀಯ ಮೂಲದ ಐಟಿ ಉದ್ಯೋಗಿಗಳಿಗೆ ಸಮಸ್ಯೆಯಾಗಲಿದೆ.

96,000 ಜನರಿಗೆ 457 ವೀಸಾ

2016 ಡಿಸೆಂಬರ್ 30ರವರೆಗೆ 95,757 ಉದ್ಯೋಗಿಗಳಿಗೆ 457 ಪ್ರೖೆಮರಿ ವೀಸಾ ನೀಡಲಾಗಿದೆ. ಜತೆಗೆ 76,430 ಜನರಿಗೆ 457 ಸೆಕೆಂಡರಿ ವೀಸಾ ನೀಡಲಾಗಿದೆ. 457 ಪ್ರೖೆಮರಿ ವೀಸಾ ಪಡೆದಿರುವವರ ಕುಟುಂಬಸ್ಥರಿಗೆ 457 ಸೆಕೆಂಡರಿ ವೀಸಾ ನೀಡಲಾಗುತ್ತದೆ.

ಈಗಾಗಲೇ 457 ವೀಸಾ ನೀತಿಯಡಿ ವೀಸಾ ಪಡೆದಿರುವವರಿಗೆ ಹೊಸ ವೀಸಾ ನೀತಿ ಪರಿಣಾಮ ಬೀರಲಾರದು. ಆದರೆ ವೀಸಾ ನವೀಕರಣ ಮಾಡಿಕೊಳ್ಳುವಾಗ ಸಮಸ್ಯೆಯಾಗುವ ಸಾಧ್ಯತೆಯಿದೆ.

ಹೊಸ ಯೋಜನೆ

457 ವೀಸಾ ಬದಲಾಗಿ ಎರಡು ನೂತನ ವೀಸಾ ಯೋಜನೆಗಳನ್ನು ಜಾರಿಗೆ ಬರಲಿವೆ. ಒಂದು 2 ವರ್ಷಗಳ ವೀಸಾ ಆಗಿರಲಿದೆ. ಇದನ್ನು ಮತ್ತೆ 2 ವರ್ಷಗಳ ಕಾಲ ಮುಂದುವರಿಸಲು ಅವಕಾಶ ವಿದೆ. ಮತ್ತೊಂದು ನಿಗದಿತ ಗುಣಮಟ್ಟದ ಕೌಶಲ ಹೊಂದಿರುವವರಿಗಾಗಿಯೇ 4 ವರ್ಷಗಳ ವೀಸಾ ವ್ಯವಸ್ಥೆಯನ್ನ್ನು ಜಾರಿಗೆ ತರಲಾಗುತ್ತಿದೆ, ಇದಕ್ಕೆ ಸಾಕಷ್ಟು ಷರತ್ತುಗಳನ್ನು ವಿಧಿಸಲಾಗುತ್ತದೆ.

For Quick Alerts
ALLOW NOTIFICATIONS  
For Daily Alerts

  English summary
  PRIME Minister Malcolm Turnbull has announced he is scrapping the controversial 457 visa program for skilled migrants as part of a bid to tackle unemployment.
  --Or--
  Select a Field of Study
  Select a Course
  Select UPSC Exam
  Select IBPS Exam
  Select Entrance Exam

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more