ಬೆಂಗಳೂರು ವಿಶ್ವವಿದ್ಯಾಲಯ: ಫಲಿತಾಂಶ ವಿಳಂಬ ಸಾಧ್ಯತೆ

ಸ್ಕ್ಯಾ‌ನಿಂಗ್‌ ಮಾಡುವ ಗುತ್ತಿಗೆ ಅಂತಿಮಗೊಳ್ಳದ ಕಾರಣ ಈ ಪ್ರಕ್ರಿಯೆ ಇನ್ನೂ ಆರಂಭಗೊಂಡಿಲ್ಲ. ಇದರಿಂದಾಗಿ ಫಲಿತಾಂಶ ಒಂದರಿಂದ ಎರಡು ತಿಂಗಳು ವಿಳಂಬ ಆಗಬಹುದು ಎಂದು ಹೇಳಲಾಗುತ್ತಿದೆ.

ಈ ಬಾರಿಯ ಬೆಂಗಳೂರು ವಿಶ್ವವಿದ್ಯಾಲಯದ ಪದವಿ ಕೋರ್ಸ್‌ಗಳ ಫಲಿತಾಂಶಗಳು ವಿಳಂಬವಾಗುವ ಸಾಧ್ಯತೆ ಇದೆ.

ಸ್ಕ್ಯಾ‌ನಿಂಗ್‌ ಮಾಡುವ ಗುತ್ತಿಗೆ ಅಂತಿಮಗೊಳ್ಳದ ಕಾರಣ ಈ ಪ್ರಕ್ರಿಯೆ ಇನ್ನೂ ಆರಂಭಗೊಂಡಿಲ್ಲ. ಇದರಿಂದಾಗಿ ಫಲಿತಾಂಶ ಒಂದರಿಂದ ಎರಡು ತಿಂಗಳು ವಿಳಂಬ ಆಗಬಹುದು ಎಂದು ಹೇಳಲಾಗುತ್ತಿದೆ.

ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿದ ನಂತರ ಕಂಪ್ಯೂಟರ್‌ಗೆ ದಾಖಲೀಕರಿಸುವ ಸಂಬಂಧ ಸ್ಕ್ಯಾ‌ನಿಂಗ್‌ ಪ್ರಕ್ರಿಯೆಗೆ ಗುತ್ತಿಗೆದಾರರು ಮುಂದೆ ಬಂದಿಲ್ಲ. ಹೀಗಾಗಿ ಫಲಿತಾಂಶದಲ್ಲಿ ಈ ವರ್ಷವೂ ವಿಳಂಬವಾಗುವ ಲಕ್ಷಣಗಳು ಕಂಡು ಬಂದಿವೆ.

ಬೆಂಗಳೂರು ವಿವಿ ಫಲಿತಾಂಶ ವಿಳಂಬ ಸಾಧ್ಯತೆ

ಪರೀಕ್ಷೆ ಮುಗಿದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಇಷ್ಟರೊಳಗೆ ಆರಂಭಗೊಳ್ಳಬೇಕಿತ್ತು. ಮೌಲ್ಯಮಾಪನ ಮಾಡಿದ ಉತ್ತರ ಪತ್ರಿಕೆಗಳನ್ನು ಕಂಪ್ಯೂಟರ್‌ಗೆ ದಾಖಲಿಸುವ ಕಾರ್ಯವನ್ನು ಕಳೆದ ವರ್ಷ ಖಾಸಗಿ ಗುತ್ತಿಗೆದಾರರೊಬ್ಬರಿಗೆ ನೀಡಲಾಗಿತ್ತು. ಅವರ ಗುತ್ತಿಗೆ ಅವಧಿ ಪೂರ್ಣಗೊಂಡಿದೆ.

ಗುತ್ತಿಗೆದಾರರಿಂದ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. ಸಿಂಡಿಕೇಟ್‌ ಸಭೆಗಳಲ್ಲಿ ಚರ್ಚೆ ನಡೆಸಿದರೂ ಪರ್ಯಾಯ ಮಾರ್ಗ ಕಂಡುಕೊಳ್ಳಲಾಗಿಲ್ಲ. ಮತ್ತೊಂದೆಡೆ ಹೊಸದಾಗಿ ಟೆಂಡರ್‌ ಪ್ರಕ್ರಿಯೆ ನಡೆಸಿದರೂ ಯಾವುದೇ ಗುತ್ತಿಗೆದಾರರು ಪಾಲ್ಗೊಂಡಿಲ್ಲ. ಆದ ಕಾರಣ ವಿವಿಯು ಹಳೆಯ ಗುತ್ತಿಗೆದಾರರಿಗೇ ನೀಡಬೇಕು. ಇಲ್ಲವೇ ಮ್ಯಾನುಯಲ್‌ ಪದ್ಧತಿಯನ್ನು ಮುಂದುವರಿಸಬೇಕು. ಮ್ಯಾನುಯಲ್‌ ಪದ್ಧತಿ ಮುಂದುವರಿಸಿದರೆ ಹೆಚ್ಚು ಕಾಲಾವಕಾಶ ತೆಗೆದುಕೊಳ್ಳುವುದರಿಂದ ಫಲಿತಾಂಶ ಮತ್ತಷ್ಟು ತಡವಾಗುವ ಸಾಧ್ಯತೆ ಇದೆ.

ಈ ಸಮಸ್ಯೆ ಕುರಿತು ಚರ್ಚಿಸಲು ಮಂಗಳವಾರ ಬೆಂಗಳೂರು ವಿವಿಯು ವಿಶೇಷ ಸಿಂಡಿಕೇಟ್‌ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಈ ವಿಚಾರವನ್ನು ಚರ್ಚಿಸಲಾಗಿದ್ದು, ಉತ್ತರ ಪತ್ರಿಕೆಗಳ ಸ್ಕ್ಯಾ‌ನಿಂಗ್‌ ವ್ಯವಸ್ಥೆಯನ್ನು ಗುತ್ತಿಗೆದಾರರೊಬ್ಬರಿಗೆ ವಹಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ಯಾರಿಗೆ ಕೊಡಬೇಕು ಎಂಬುದು ನಿರ್ಧಾರವಾಗಿಲ್ಲ.

ಒಂದು, ಮೂರು ಹಾಗೂ ಐದನೇ ಸೆಮಿಸ್ಟರ್‌ನ ಪದವಿ ಪರೀಕ್ಷೆಗಳು ಇದೇ ತಿಂಗಳ 4 ರಿಂದ ಆರಂಭಗೊಂಡಿದ್ದು, 27ರ ವರೆಗೂ ನಡೆಯಲಿವೆ.

ಸುಮಾರು 3.50 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಜನವರಿ ಮೊದಲ ವಾರದ ವೇಳೆಗೆ ಮೌಲ್ಯಮಾಪನ ಕಾರ್ಯ ಪೂರ್ಣಗೊಳಿಸಲಾಗುವುದು. ಈ ಹಿಂದಿನಂತೆ ಉತ್ತರ ಪತ್ರಿಕೆಗಳ ಸ್ಕ್ಯಾ‌ನಿಂಗ್‌ ಕೂಡ ನಡೆಯುತ್ತದೆ. ಹೀಗಾಗಿ ಫಲಿತಾಂಶದಲ್ಲಿ ಯಾವುದೇ ವಿಳಂಬವಾಗುವುದಿಲ್ಲ ಎಂದು ಬೆಂಗಳೂರು ವಿವಿ ಮೌಲ್ಯಮಾಪನ ಕುಲಸಚಿವರಾದ ಸಿ.ಶಿವರಾಜು ತಿಳಿಸಿದ್ದಾರೆ.

More News  

For Quick Alerts
ALLOW NOTIFICATIONS  
For Daily Alerts

English summary
Bangalore University degree courses results likely to be delayed this time. Thescanning process has not yet begun because the scanning contract is not finalized. This results in a delay of one to two months.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+