ಬೆಂಗಳೂರು ವಿವಿ ದೂರ ಶಿಕ್ಷಣ ಪ್ರವೇಶಾತಿ ದಿನಾಂಕ ವಿಸ್ತರಣೆ

ವಿದ್ಯಾರ್ಥಿ ಹಾಗೂ ಪಾಲಕರ ಕೋರಿಕೆಯ ಮೇರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಅಂಚೆ ತೆರಪು ಹಾಗೂ ದೂರ ಶಿಕ್ಷಣ ನಿರ್ದೇಶನಾಲಯವು 2016-17ನೇ ಸಾಲಿನ ಪ್ರವೇಶಾತಿಯನ್ನ ದಿನಾಂಕ 20 ರವರೆಗೂ ವಿಸ್ತರಿಸಿದೆ.

ವಿದ್ಯಾರ್ಥಿ ಹಾಗೂ ಪಾಲಕರ ಕೋರಿಕೆಯ ಮೇರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಅಂಚೆ ತೆರಪು ಹಾಗೂ ದೂರ ಶಿಕ್ಷಣ ನಿರ್ದೇಶನಾಲಯವು 2016-17ನೇ ಸಾಲಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ವರ್ಷದ ಸ್ನಾತಕ ಪದವಿ ಹಾಗೂ ಪ್ರಥಮ ಮತ್ತು ದ್ವಿತೀಯ ವರ್ಷದ ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಹಾಗೂ ಪಿಜಿ ಡಿಪ್ಲೊಮಾ, ಡಿಪ್ಲೊಮಾ, ಸರ್ಟಿಫಿಕೇಟ್‌ ಕೊರ್ಸ್‌ಗಳಿಗೆ ಪ್ರವೇಶಾತಿಯನ್ನು ದಂಡ ಶುಲ್ಕ ರೂ. 300ಗಳೊಂದಿಗೆ ಎ. 20ರ ವರೆಗೆ ವಿಸ್ತರಿಸಿದೆ

ಬೆಂಗಳೂರು ವಿಶ್ವವಿದ್ಯಾಲಯವು ಫೆಬ್ರವರಿಯಲ್ಲಿ 2016 -17 ನೇ ಸಾಲಿನ ಶೈಕ್ಷಣಿಕ ವರ್ಷದ ಅಂಚೆ ತೆರಪು ಹಾಗೂ ದೂರ ಶಿಕ್ಷಣ ಮುಕ್ತ ವಿಶ್ವವಿದ್ಯಾಲಯ ಯೋಜನೆಗಳಡಿ ವಿವಿಧ ಕೋರ್ಸುಗಳ ದಾಖಲಾತಿಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿತ್ತು.

ಪ್ರವೇಶಾತಿ ದಿನಾಂಕ ವಿಸ್ತರಣೆ

ಅರ್ಜಿ ಸಲ್ಲಿಕೆ ವಿವರ

  • ಕೋರ್ಸುಗಳ ವಿವರ ಮತ್ತು ಅರ್ಹತಾ ನಿಯಮ/ ಶುಲ್ಕಗಳ ವಿವರ ಮತ್ತು ಅಗತ್ಯವಾದ ಮಾಹಿತಿಗಳನ್ನು ವೆಬ್ಸೈಟ್ ವಿಳಾಸ bangaloreuniversity.ac.ರಲ್ಲಿ ಪಡೆಯಬಹುದಾಗಿದೆ.
  • ಪ್ರವೇಶ ಕೈಪಿಡಿಯ ಸಹಿತ ಅರ್ಜಿ ಶುಲ್ಕ ರೂ.550 /- (ಪ.ಜಾ-ಪ.ಪಂ. ವಿದ್ಯಾಥಿಗಳಿಗೆ ರೂ.250 /-) ಅನ್ನು ಅಭ್ಯರ್ಥಿಗಳು ವಿಶ್ವವಿದ್ಯಾಲಯದ ಉಳಿತಾಯ ಖಾತೆ ಸಂಖ್ಯೆ : 64062451218 ಸ್ಟೇಟ್ ಬ್ಯಾಂಕ್ ಆಫ್ ಮೈಸೂರು,ನಾಗರಭಾವಿ ಶಾಖೆ, ಬೆಂಗಳೂರು ಅಥವಾ ಚಾಲ್ತಿ ಖಾತೆ ಸಂಖ್ಯೆ: 917020020468197 , ಆಕ್ಸಿಸ್ ಬ್ಯಾಂಕ್ ರಾಜಾಜಿ ನಗರ , ಬೆಂಗಳೂರು, ಈ ಖಾತೆಗಳಿಗೆ ಅಂತರ್ಜಾಲದ ಮೂಲಕ ಜಮೆ ಮಾಡಿ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಸಲ್ಲಿಸಬಹುದು.

ಅರ್ಜಿಗಳನ್ನು ಪಡೆಯುವ ಸ್ಥಳ

  • ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ನಾಗರಭಾವಿ ಶಾಖೆ, ಬೆಂಗಳೂರು.
  • ಅಂಚೆ ತೆರಪು ಹಾಗೂ ದೂರ ಶಿಕ್ಷಣ ನಿರ್ದೇಶನಾಲಯ, ಜ್ಞಾನಭಾರತಿ ಆವರಣ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು-560056
  • ಭರ್ತಿ ಮಾಡಿದ ಅರ್ಜಿಗಳನ್ನು ಎಲ್ಲಾ ದಾಖಲೆಗಳೊಂದಿಗೆ ಅರ್ಜಿ ಶುಲ್ಕದ ರಶೀತಿ ಪ್ರತಿಯನ್ನು ಒಳಗೊಂಡಂತೆ ನಿಗದಿತ ದಿನಾಂಕದೊಳಗೆ ಅಂಚೆ ತೆರಪು ಹಾಗೂ ದೂರ ಶಿಕ್ಷಣ ನಿರ್ದೇಶನಾಲಯ, ಜ್ಞಾನಭಾರತಿ ಆವರಣ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು-560056 ಇಲ್ಲಿಗೆ ಸಲ್ಲಿಸುವುದು.

ಹೆಚ್ಚಿನ ಮಾಹಿತಿಗಾಗಿ bu.online-ap1.com ಗಮನಿಸಿ

ದೂರವಾಣಿ ಸಂಖ್ಯೆ: 080-22961261, 080-22961267

More News  

For Quick Alerts
ALLOW NOTIFICATIONS  
For Daily Alerts

English summary
bangalore university distance education application dates extended to april 20
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+