ವೀರಶೈವ ಲಿಂಗಾಯತ ಯುವ ವೇದಿಕೆಯಿಂದ 2017-2018 ಸಾಲಿನ ವೀರಶೈವ ಲಿಂಗಾಯತ ವಿದ್ಯಾರ್ಥಿಗಳಿಗೆ 'ಬಸವಜ್ಯೋತಿ' ವಿದ್ಯಾರ್ಥಿ ವೇತನ ಅರ್ಜಿ ಆಹ್ವಾನಿಸಲಾಗಿದೆ.
ಪ್ರಶಾಂತ್ ಕಲ್ಲೂರ್ ಅವರ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆ ಕಳೆದ ನಾಲ್ಕು ವರ್ಷಗಳಿಂದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಿಕೊಂಡು ಬರುತ್ತಿದೆ. ಈ ವರ್ಷ 800ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಗುರಿಯನ್ನು ಯುವ ವೇದಿಕೆ ಹೊಂದಿದೆ.
ವೆಬ್ ಸೈಟಿನಲ್ಲಿ ಅರ್ಜಿಯನ್ನು ಪಡೆದುಕೊಳ್ಳಬಹುದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 5ನೇ ಸೆಪ್ಟೆಂಬರ್, 2017.

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವವರಿಗೆ ನಿಬಂಧನೆಗಳು
- ವಿದ್ಯಾರ್ಥಿಯ ಇತ್ತೀಚಿನ 2 ಪಾಸ್ ಪೋರ್ಟ್ ಸೈಜಿನ ಫೋಟೊ.
- ವಿದ್ಯಾರ್ಥಿಯ ಕಳೆದ ವಾರ್ಷಿಕ ವಿದ್ಯಾಭ್ಯಾಸದ ಮಾಕ್ರ್ಸ್ ಕಾರ್ಡ್ ಅಥವಾ ಹಿಂದಿನ ಸೆಮಿಸ್ಟರ್ ನ ಮಾರ್ಕ್ ಕಾರ್ಡ್.
- ಆದಾಯ ಮತ್ತು ಜಾತಿ ದೃಡೀಕರಣ ಪತ್ರ.
- VEERASHAIVA LINGAYAT YUVA VEDIKE ಹೆಸರಿನಲ್ಲಿ ಬೆಂಗಳೂರಿನಲ್ಲಿ ಸಂದಾಯವಾಗುವಂತೆ 100/- ರೂಪಾಯಿಗಳ ಮನಿ ಆರ್ಡರ್ , ಪೋಸ್ಟಲ್ ಆರ್ಡ್ ಅಥವಾ ರಾಷ್ಟ್ರೀಕೃತ ಬ್ಯಾಕಿನ ಡಿ ಡಿ ಪಾವತಿಸಬೇಕು. (ನಿಮ್ಮ ಗಮನಕ್ಕೆ ಚೆಕ್ ಕಡ್ಡಾಯವಾಗಿ ಸ್ವೀಕರಿಸುವುದಿಲ್ಲ).
- ಅರ್ಜಿಯನ್ನು ಭರ್ತಿ ಮಾಡಿ ಈ ಮೇಲೆ ನಮೂದಿಸಿರುವಂತೆ 2 ಫೋಟೊ, ಮಾರ್ಕ್ಸ್ ಕಾರ್ಡ್, ಆದಾಯ ಹಾಗೂ ಜಾತಿ ದೃಢೀಕರಣ ಪತ್ರ ಹಾಗೂ 100 ರೂಪಾಯಿಗಳ ಮನಿ ಆರ್ಡರ್ , ಪೋಸ್ಟಲ್ ಆರ್ಡ್ ಅಥವಾ ರಾಷ್ಟ್ರೀಕೃತ ಬ್ಯಾಕಿನ ಡಿ ಡಿಯನ್ನು ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಅಥವಾ ಕೊರಿಯರ್ ಮೂಲಕ ಕಳುಹಿಸತಕ್ಕದ್ದು.
ಅರ್ಜಿ ಸಲ್ಲಿಸಲು ಮತ್ತು ಸಂಪೂರ್ಣ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವವರ ಗಮನಕ್ಕೆ
5ನೇ ತರಗತಿ ಮತ್ತು ಮೇಲ್ಪಟ್ಟ ಬಡ/ ಪ್ರತಿ ಭಾವಂತ ವಿದ್ಯಾರ್ಥಿ ಅರ್ಜಿ ಸಲ್ಲಿಸಬಹುದು. (ಉದಾ : 6ನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೆ, ಪಿಯುಸಿ, ಡಿಪ್ಲೊಮಾ, ಬಿಇ, ಬಿಎಡ್, ಎಂಎ, ಎಂಎಸ್ಸಿ , ಎಂಬಿಎ, ಎಂಬಿಬಿಎಸ್ ಇತ್ಯಾದಿ ಕಲಿಯುತ್ತಿರವ ವಿದ್ಯಾರ್ಥಿಗಳು)
- ನಿಮ್ಮ ಹ್ಯಾಂಡ್ ರೈಟಿಂಗ್ (ಕೈಬರಹ) ಅಚ್ಚುಕಟ್ಟಾಗಿ ಅರ್ಥವಾಗಿರುವಂತೆ ಬರೆದು ಕಳುಹಿಸಿ.
- ಡಿಡಿ / ಮನಿ ಆರ್ಡರ್ / ಪೋಸ್ಟಲ್ ಆರ್ಡರ್ ಫೋಲ್ಡ್ ಆಗದಂತೆ ಹಾಗೂ ಪಿನ್ ಹಾಕದಂತೆ ಅಚ್ಚುಕಟ್ಟಾಗಿ ಕಳುಹಿಸತಕ್ಕದ್ದು.
- ನಿಮ್ಮ ಅರ್ಜಿಯಲ್ಲಿ ಅಂಚೆಪೆಟ್ಟಿಗೆ ಸಂಖ್ಯೆ ತುಂಬಿಸುವುದು ಕಡ್ಡಾಯ.
- ಆಯ್ಕೆಯಾದ ವಿದ್ಯಾರ್ಥಿ ಪಟ್ಟಿಯನ್ನು ಎರಡು ಹಂತದಲ್ಲಿ ಬಿಡುಗಡೆಯಾಗಲಿದ್ದು ಸೆಪ್ಟೆಂಬರ್ 19ರ ಮಂಗಳವಾರ ಮೊದಲ ಪಟ್ಟಿ ಹಾಗೂ, ಎರಡನೇ ಪಟ್ಟಿ ಅಕ್ಟೋಬರ್ 10ರ ಮಂಗಳವಾರ ವೇದಿಕೆ ವೆಬ್ ಸೈಟಿನಲ್ಲಿ ಪ್ರಕಟಿಸಲಾಗುವುದು.
- ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಭರ್ತಿ ಮಾಡಿರುವ ಪುಟದೊಂದಿಗೆ ಈ ಮೇಲೆ ನಮೂದಿಸಿರುವ ದಾಖಲಾತಿಗಳನ್ನು (ಅಂಕಪಟ್ಟಿ, ಜಾತಿ ಪ್ರಮಾಣಪತ್ರ, 100 ರುಪಾಯಿ ಮನಿ ಆರ್ಡರ್ ಅಥವಾ ಪೋಸ್ಟಲ್ ಆರ್ಡರ್ ಅಥವಾ ಡಿಡಿ) ಮಾತ್ರ ಕಳುಹಿಸತಕ್ಕದು.
ಪೋಸ್ಟ್ ಅಥವಾ ಕೊರಿಯರ್ ಮೂಲಕ ಕಳುಹಿಸಬೇಕಾದ ವಿಳಾಸ
VEERASHAIVA LINGAYAT YUVA VEDIKE
#55, 2nd cross, 3rd main, AECS 1stage,
RMV 2nd stage, Sanjayanagara main road,
Ashwathnagara, Bengaluru - 560 094.
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 8861179393 / 080 40979393.
ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ವಿಳಾಸ ಗಮನಿಸಿ


Click it and Unblock the Notifications











