ಸಿಎ ಪರಿಷ್ಕೃತ ಪರೀಕ್ಷಾ ದಿನಾಂಕವನ್ನು ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟಂಟ್ಸ್ ಆಫ್ ಇಂಡಿಯಾ (ಐಸಿಎಐ) ಪ್ರಕಟ ಮಾಡಿದೆ. ದೇಶದೆಲ್ಲೆಡೆ ಎದುರಾದ ಕೊರೋನಾ ಸಮಸ್ಯೆಯಿಂದಾಗಿ ಸಿಎ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಈಗ ಲಾಕ್‌ಡೌನ್ ಸಡಿಲಿಕೆಯಾದ ಬೆನ್ನಲ್ಲೇ ಹೊಸ ದಿನಾಂಕವನ್ನು ಪ್ರಕಟ ಮಾಡಲಾಗಿದೆ.

ಜುಲೈ 29 ರಿಂದ ಆಗಸ್ಟ್ 16 ರವರೆಗೆ ಚಾರ್ಟರ್ಡ್ ಅಕೌಂಟಂಟ್ ಫೌಂಡೇಷನ್ ಕೋರ್ಸ್, ಸಿಎ ಇಂಟರ್ ಮಿಡಿಯೇಟ್ ಮತ್ತು ಸಿಎ ಅಂತಿಮ ಪರೀಕ್ಷೆಗಳು ನಡೆಯಲಿವೆ ಎಂದು ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟಂಟ್ಸ್ ಆಫ್ ಇಂಡಿಯಾ (ಐಸಿಎಐ) ಸಂಸ್ಥೆ ತಿಳಿಸಿದೆ. ಈ ಮೊದಲು 2020 ರ ಮೇ ತಿಂಗಳಲ್ಲಿ ನಡೆಯಬೇಕಿದ್ದ ಪರೀಕ್ಷೆಗಳನ್ನು ಜೂನ್‌ಗೆ ಮುಂದೂಡಲಾಗಿತ್ತು. ದೇಶದಲ್ಲಿ ಕೊರೊನಾ ಪರಿಸ್ಥಿತಿ ಪರಿಶೀಲನೆ ಮಾಡಿ ಈ ಪರಿಷ್ಕೃತ ದಿನಾಂಕವನ್ನು ಐಸಿಎಐ ಪ್ರಕಟಿಸಿದೆ.
ಇಂಟರ್‌ಮಿಡಿಯೇಟ್ ಹಳೆ ಮತ್ತು ಹೊಸ ಸ್ಕೀಮ್‌ನ ವಿದ್ಯಾರ್ಥಿಗಳಿಗೆ ಗ್ರೂಪ್-1 ಪರೀಕ್ಷೆಗಳು ಜುಲೈ 30, ಆಗಸ್ಟ್ 2, 4, 6 ರಂದು ನಡೆಯಲಿದೆ. ಗ್ರೂಪ್-2 ಪರೀಕ್ಷೆಗಳ ಪೈಕಿ ಹಳೆ ಸ್ಕೀಮ್ ನವರಿಗೆ ಆಗಸ್ಟ್ 8, 10 ಮತ್ತು 13 ರಂದು ಹಾಗೂ ಹೊಸ ಸ್ಕೀಮ್ ನವರಿಗೆ ಆಗಸ್ಟ್ 8, 10, 13 ಮತ್ತು 16 ರಂದು ಪರೀಕ್ಷೆಗಳು ನಡೆಯಲಿವೆ. ಹಳೆ ಮತ್ತು ಹೊಸ ಸ್ಕೀಮ್ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಗ್ರೂಪ್-1 ಪರೀಕ್ಷೆಗಳು ಜುಲೈ 29, 31, ಆಗಸ್ಟ್ 3 ಮತ್ತು 5 ರಂದು, ಗ್ರೂಪ್-2 ಪರೀಕ್ಷೆಗಳು ಆಗಸ್ಟ್ 7, 9, 11 ಮತ್ತು 14 ರಂದು ನಡೆಯಲಿವೆ. ಫೌಂಡೇಷನ್ ಕೋರ್ಸ್ ಪರೀಕ್ಷೆಗಳು ಆಗಸ್ಟ್ 7, 9, 11, 14 ರಂದು ನಡೆಯಲಿವೆ.


Click it and Unblock the Notifications











