ಭದ್ರತಾಪಡೆಗೆ ಸೇರ ಬಯಸುವ ಅಭ್ಯರ್ಥಿಗಳಿಗೆ ಪೂರ್ವಸಿದ್ದತೆ ಬಗ್ಗೆ ತರಬೇತಿ

ಭಾರತೀಯ ಕರಾವಳಿ ಭದ್ರತಾಪಡೆಗೆ ಸೇರ ಬಯಸುವ ರಾಜ್ಯದ ಹಿಂದುಳಿದ ವರ್ಗಗಳ ಅರ್ಹ ಪುರುಷ ಅಭ್ಯರ್ಥಿಗಳಿಗೆ ಆಯ್ಕೆಯ ಪೂರ್ವಸಿದ್ದತೆ ಬಗ್ಗೆ ವೃತ್ತಿ ಮಾರ್ಗದರ್ಶನ ಮತ್ತು ತರಬೇತಿ ನೀಡಲು ಅರ್ಜಿಗಳನ್ನು ಆಹ್ವಾನಿಸಿದೆ.

ಸಿಂಡಿಕೇಟ್ ಬ್ಯಾಂಕ್: ಬ್ಯಾಂಕಿಂಗ್ ಪಿಜಿ ಕೋರ್ಸ್ ಗೆ ಅರ್ಜಿ ಆಹ್ವಾನ

ಉಚಿತ ಊಟ ಮತ್ತು ವಸತಿ ಸೌಲಭ್ಯದೊಂದಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2017-18 ನೇ ಸಾಲಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡುತ್ತಿದ್ದು, ರಾಜ್ಯದ ಹಿಂದುಳಿದ ವರ್ಗಗಳಿಗೆ ಸೇರಿದ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಕ್ಲಾಟ್‌) 2018: ಅರ್ಜಿ ಪ್ರಕ್ರಿಯೆ ಪ್ರಾರಂಭ

ಭದ್ರತಾಪಡೆ ಪೂರ್ವಸಿದ್ದತೆ ಬಗ್ಗೆ ತರಬೇತಿ

 

ಆಸಕ್ತ ಆಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಜನವರಿ 10 ಕೊನೆಯ ದಿನವಾಗಿರುತ್ತದೆ.

ಸೂಚನೆ

ಅಭ್ಯರ್ಥಿಯು ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಅಥವಾ ೩ಬಿ ಗೆ ಸೇರಿರಬೇಕು.

ಅಭ್ಯರ್ಥಿಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದು, ಒಂದನೇ ತರಗತಿಯಿಂದ 10+2 ವರೆಗಿನ ವಿದ್ಯಾಭ್ಯಾಸದಲ್ಲಿ ಕನಿಷ್ಠ 7 ವರ್ಷಗಳು ಕರ್ನಾಟಕದಲ್ಲಿ ವಿದ್ಯಾಭ್ಯಾಸ ಮಾಡಿರಬೇಕು.

ಅಭ್ಯರ್ಥಿಯ ಮತ್ತು ಕುಟುಂಬದ ವಾರ್ಷಿಕ ಆದಾಯ ಮಿತಿ

  • ಪ್ರವರ್ಗ-1 ರೂ.2.50 ಲಕ್ಷ
  • ಪ್ರವರ್ಗ 2ಎ, 3ಎ ಮತ್ತು 3ಬಿ ರೂ.1.00 ಲಕ್ಷ

ವಯೋಮಿತಿ

ಕನಿಷ್ಠ 18 ರಿಂದ ಗರಿಷ್ಠ 22 ವರ್ಷಗಳು

ವಿದ್ಯಾರ್ಹತೆ

ಕೇಂದ್ರ/ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯ 10+2 ನ ವಿಜ್ಞಾನ ವಿಭಾಗದಲ್ಲಿ ಸರಾಸರಿ ಒಟ್ಟು ಶೇ.50 ಅಂಕಗಳೊಂದಿಗೆ ಉತ್ತೀರ್ಣವಾಗಿದ್ದು, ಗಣಿತ ಮತ್ತು ಭೌತಶಾಸ್ತ್ರ ವಿಷಯಗಳಲ್ಲಿ ಕನಿಷ್ಠ ತಲಾ 50 ಅಂಕಗಳನ್ನು ಪಡೆದಿರಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-01-2018

ಅಭ್ಯರ್ಥಿಗಳ ಆಯ್ಕೆ

ಅಭ್ಯರ್ಥಿಯ ಶೈಕ್ಷಣಿಕ, ದೇಹದಾರ್ಢ್ಯ, ವೈದ್ಯಕೀಯ ಪರೀಕ್ಷೆಯನ್ನು ನಡೆಸಿ ಅಂತಿಮವಾಗಿ ಅಭ್ಯರ್ಥಿಗಳನ್ನು ತರಬೇತಿಗೆ ಅಯ್ಕೆ ಮಾಡಲಾಗುವುದು.

ಪರೀಕ್ಷೆಗೆ ಅಭ್ಯರ್ಥಿಗಳು ಹಾಜರುಪಡಿಸಬೇಕಾದ ದಾಖಲೆಗಳು

  • ಅಭ್ಯರ್ಥಿಗಳು ಸಲ್ಲಿಸಿರುವ ಆನ್-ಲೈನ್ ಅರ್ಜಿ ಪ್ರತಿ/ಸ್ವೀಕೃತಿ ಪ್ರತಿ
  • ಆನ್-ಲೈನ್ ಅರ್ಜಿ ಜೊತೆ ಅಪ್ಲೋಡ್ ಮಾಡಲು ತಿಳಿಸಿರುವ ಎಲ್ಲಾ ದಾಖಲಾತಿಗಳ ಒಂದು ಸೆಟ್ ದೃಢೀಕೃತ ಪ್ರತಿ
  • ಅಭ್ಯರ್ಥಿಯ ಪಾಸ್ಪೋರ್ಟ್ ಅಳತೆಯ ಇತ್ತೀಚಿನ ೪ ಭಾವಚಿತ್ರಗಳು
  • ಅಭ್ಯರ್ಥಿಯ ಭಾವಚಿತ್ರ ಮತ್ತು ವಿಳಾಸವಿರುವ ಯಾವುದಾದರೊಂದು ಅಧಿಕೃತ ಗುರುತಿನ ಚೀಟಿ

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Backward Classes Welfare Department invites application for 2017-18 career guidance and training for qualified male candidates from backward classes of the state who wish to join Indian Coast Guard.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X