ನಿರುದ್ಯೋಗ ಸಮಸ್ಯೆ ನಿವಾರಿಸಲು ಕೆರಿಯರ್ ಗೈಡೆನ್ಸ್ ಸೆಲ್

ರಾಜ್ಯದ 786 ಅನುದಾನಿತ ಹಾಗೂ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕೌಶಲ ಅಭಿವೃದ್ಧಿ ಕೇಂದ್ರ (ಕೆರಿಯರ್ ಗೈಡೆನ್ಸ್ ಸೆಲ್) ತೆರೆಯಲಾಗುತ್ತಿದ್ದು, ಅಕ್ಟೋಬರ್​ನಲ್ಲಿ ಎಲ್ಲ ಕಾಲೇಜುಗಳಲ್ಲಿ ಈ ಕೇಂದ್ರಗಳು ಆರಂಭಗೊಳ್ಳಲಿವೆ.

ನಿರುದ್ಯೋಗ ಸಮಸ್ಯೆ ಬಗೆಹರಿಸಲು, ಉನ್ನತ ಶಿಕ್ಷಣದ ಬಗ್ಗೆ ಮತ್ತಷ್ಟು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು, ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕೌಶಲ ಅಭಿವೃದ್ಧಿ ಕೇಂದ್ರ (ಕೆರಿಯರ್ ಗೈಡೆನ್ಸ್ ಸೆಲ್) ತೆರೆಯಲು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಮುಂದಾಗಿದೆ.

ರಾಜ್ಯದ 786 ಅನುದಾನಿತ ಹಾಗೂ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕೌಶಲ ಅಭಿವೃದ್ಧಿ ಕೇಂದ್ರ (ಕೆರಿಯರ್ ಗೈಡೆನ್ಸ್ ಸೆಲ್) ತೆರೆಯಲಾಗುತ್ತಿದ್ದು, ಅಕ್ಟೋಬರ್​ನಲ್ಲಿ ಎಲ್ಲ ಕಾಲೇಜುಗಳಲ್ಲಿ ಈ ಕೇಂದ್ರಗಳು ಆರಂಭಗೊಳ್ಳಲಿವೆ.

ಕೆರಿಯರ್ ಗೈಡೆನ್ಸ್ ಸೆಲ್

ಈಗಾಗಲೇ ಕಾಲೇಜು ಶಿಕ್ಷಣ ಇಲಾಖೆ ಕಾಲೇಜುಗಳಿಗೆ ಈ ಕುರಿತು ಸುತ್ತೋಲೆ ಹೊರಡಿಸಿದ್ದು, 300ಕ್ಕೂ ಹೆಚ್ಚು ಕಾಲೇಜುಗಳು ನೋಡಲ್ ಅಧಿಕಾರಿ ನೇಮಕ ಮಾಡಿ ಕಾಲೇಜು ಶಿಕ್ಷಣ ಇಲಾಖೆಗೆ ಪತ್ರ ಬರೆದಿವೆ.

ಗ್ರಾಮೀಣ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವುದು ಈ ಸೆಲ್​ಗಳ ಮುಖ್ಯ ಧ್ಯೇಯ. ಕೆರಿಯರ್ ಗೈಡೆನ್ಸ್ ಸೆಲ್​ಗಳಲ್ಲಿ ಪತ್ರಿಕೆಗಳು, ನಿಯತಕಾಲಿಕೆಗಳು, ಉದ್ಯೋಗ ಮಾಹಿತಿ ಪತ್ರಿಕೆಗಳು ದೊರೆಯುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಗಳು, ಅವುಗಳಿಗೆ ಅರ್ಜಿ ಹಾಕುವ ವಿಧಾನ, ತರಬೇತಿ ದೊರೆಯುವ ಸ್ಥಳ, ಉನ್ನತ ವ್ಯಾಸಂಗ, ಸಂಶೋಧನೆಗೆ ಇರುವ ಅವಕಾಶಗಳ ಬಗ್ಗೆಯೂ ಈ ಸೆಲ್​ಗಳಲ್ಲಿ ಮಾಹಿತಿ ನೀಡುವ ವ್ಯವಸ್ಥೆ ಇರುತ್ತದೆ. ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗಕ್ಕೆ ಇರುವ ಅವಕಾಶ, ಕೇಂದ್ರ, ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ನೌಕರಿ ಅರ್ಜಿ ಆಹ್ವಾನದ ಮಾಹಿತಿಯನ್ನೂ ಇಲ್ಲಿ ಒದಗಿಸಲಾಗುತ್ತದೆ.

ಪ್ರತಿ ಕೇಂದ್ರಕ್ಕೆ 40-60 ಲಕ್ಷ ರೂ. ವಿನಿಯೋಗಿಸಲಾಗುತ್ತದೆ. ಕೇಂದ್ರಗಳಲ್ಲಿ ಕಂಪ್ಯೂಟರ್ ಹಾಗೂ 8-10 ಜನ ಸಿಬ್ಬಂದಿ ಇರಲಿದ್ದು, ಅವರು ಅರ್ಜಿದಾರರ ಬಯೋಡೇಟಾ ಕೂಡ ಸಿದ್ಧಪಡಿಸಿಕೊಡಲು ನೆರವಾಗಲಿದ್ದಾರೆ.

ಕೇವಲ ಪದವಿ ಕಾಲೇಜುಗಳಲ್ಲಿ ಮಾತ್ರವಲ್ಲ, ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಕೌಶಲ ಜ್ಯೇಷ್ಠತಾ ಕೇಂದ್ರ (ಸೆಂಟರ್ ಆಫ್ ಎಕ್ಸಲೆನ್ಸ್) ಆರಂಭಿಸಲಾಗುತ್ತದೆ. ಎಲ್ಲೆಲ್ಲಿ ಉದ್ಯೋಗ ವಿನಿಮಯ ಕೇಂದ್ರಗಳಿವೆಯೋ ಅಲ್ಲಿ ಅವುಗಳನ್ನು ಮೇಲ್ದರ್ಜೆಗೆ ಏರಿಸಿ ಈ ಕೇಂದ್ರಗಳನ್ನು ಆರಂಭಿಸಲಾಗುತ್ತದೆ.

ಉದ್ಯೋಗ ವಿನಿಮಯ ಕೇಂದ್ರ ಇಲ್ಲದ ಕಡೆಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಮತ್ತಿತರ ಕಡೆಗಳಲ್ಲಿ ಈ ಕೌಶಲ್ಯ ಜ್ಯೇಷ್ಠತಾ ಕೇಂದ್ರಗಳನ್ನು ತೆರೆಯಲಾಗುತ್ತದೆ. ಇಲ್ಲಿ ಉದ್ಯೋಗ ನೋಂದಣಿ ಹಾಗೂ ಮೌಲ್ಯಾಂಕನ ಕೂಡ ನಡೆಯುತ್ತದೆ

More News  

For Quick Alerts
ALLOW NOTIFICATIONS  
For Daily Alerts

English summary
Karnataka skill development corporation send circular to all government colleges and aided colleges to open career guidance cell to help students to get jobs and higher education.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+