ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆಗಳ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಐಐಎಂ) ಪ್ರವೇಶಾತಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ (ಕಾಮನ್ ಅಡ್ಮಿಷನ್ ಟೆಸ್ಟ್-ಕ್ಯಾಟ್)ಗೆ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ಆಗಸ್ಟ್ 7 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 18 ಕೊನೆಯ ದಿನ ಎಂದು ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ತದನಂತರ ಸೆಪ್ಟೆಂಬರ್ 25,2019ರ ವರೆಗೆ ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಲಾಗಿತ್ತು.

ಕ್ಯಾಟ್ ಪರೀಕ್ಷೆ ತೆಗೆದುಕೊಳ್ಳ ಬಯಸುವ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಸೆ.25 ಅಂದರೆ ಇಂದು ಕೊನೆಯ ದಿನವಾಗಿದೆ. ನವೆಂಬರ್ 24 ರಂದು ರಾಷ್ಟ್ರದ ಸುಮಾರು 156 ನಗರಗಳಲ್ಲಿ ಕ್ಯಾಟ್ ಪರೀಕ್ಷೆಯು ದಿನದ ಎರಡು ಅವಧಿಯಲ್ಲಿ ನಡೆಯಲಿದೆ.
ಪ್ರಮುಖ ದಿನಾಂಕಗಳು:
ಆನ್-ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 07-08-2019
ಆನ್-ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-9-2019
ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳುವ ದಿನಾಂಕ: 23-10-2019
ಕ್ಯಾಟ್ ಪರೀಕ್ಷೆಗಳು ನಡೆಯುವ ದಿನಾಂಕ: 24-11-2019

ಅರ್ಜಿ ಶುಲ್ಕ :
ಸಾಮಾನ್ಯ ಮತ್ತು ಓಬಿಸಿ ಅಭ್ಯರ್ಥಿಗಳಿಗೆ ರೂ.1900/-
ಪ.ಜಾ/ಪ.ಪಂ/ಅಂಗವಿಕಲ ಅಭ್ಯರ್ಥಿಗಳಿಗೆ ರೂ.950/-
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬಹುದು.
ಸಿಎಟಿ ಪರೀಕ್ಷೆ :
ಸಿಎಟಿ ಅಥವಾ ಸಾಮಾನ್ಯ ಪ್ರವೇಶ ಪರೀಕ್ಷೆಯು ದೇಶದಲ್ಲಿ ನಡೆಯುವ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದೆನಿಸಿದೆ. ಪ್ರತಿಷ್ಠಿತ ಐಐಎಂಗಳು ಮತ್ತು ಎಫ್‌ಎಂಎಸ್, ಎಂಡಿಐ, ಎಸ್‌ಪಿ ಜೈನ್, ಐಐಟಿಗಳು ಸೇರಿದಂತೆ ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾವಹಾರಿಕ (ಬಿಸಿನೆಸ್) ಪದವಿಗೆ ಪ್ರವೇಶ ಪಡೆಯಲು ಸಿಎಟಿ ಅರ್ಹತೆ ಕಡ್ಡಾಯ.
ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಹೋಗಲು ಇಲ್ಲಿ
ಕ್ಲಿಕ್ ಮಾಡಿ ಮತ್ತು ಪ್ರಕಟಣೆಯನ್ನು ಓದಲು ಮುಂದೆ ನೋಡಿ


Click it and Unblock the Notifications











