CAT Exam 2021 : ಪರೀಕ್ಷಾ ಪ್ರವೇಶ ಪತ್ರ ಅ.27ರಂದು ಪ್ರಕಟ ಸಾಧ್ಯತೆ

ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್‌ ಮ್ಯಾನೇಜ್ಮೆಂಟ್ (IIM) ಅಹಮದಾಬಾದ್ ಕ್ಯಾಟ್ ಪರೀಕ್ಷೆಯ ಪ್ರವೇಶ ಪತ್ರವನ್ನು ಅಕ್ಟೋಬರ್ 27,2021ರಂದು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಿದೆ. ಈ ಪರೀಕ್ಷೆಗೆ ನೊಂದಾಯಿಸಿಕೊಂಡ ಅಭ್ಯರ್ಥಿಗಳು ಪ್ರವೇಶ ಪತ್ರ ಪ್ರಕಟವಾದ ಬಳಿಕ ಡೌನ್‌ಲೋಡ್ ಮಾಡಿಕೊಳ್ಳಬಹುದು.

 
ಕ್ಯಾಟ್ ಪರೀಕ್ಷಾ ಪ್ರವೇಶ ಪತ್ರ ಅ.27 ರಂದು ಪ್ರಕಟ

ಸಾಮಾನ್ಯ ಪ್ರವೇಶ ಪರೀಕ್ಷೆ (CAT) 2021 ಇದು ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿದ್ದು, ನವೆಂಬರ್ 28,2021ರಂದು ನಿಗದಿಪಡಿಸಲಾಗಿದೆ. ಭಾರತದೆಲ್ಲೆಡೆ 159 ನಗರಗಳಲ್ಲಿ 400 ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಕ್ಯಾಟ್ 2021 ಪರೀಕ್ಷೆಯ ಪಠ್ಯಕ್ರಮ, ಪರೀಕ್ಷೆಯ ಮಾದರಿ ಮತ್ತು ಪರೀಕ್ಷಾ ವಿಧಾನದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಐಐಎಂ ತಿಳಿಸಿದೆ.

ಪರೀಕ್ಷೆಯು ಒಟ್ಟು 2 ಗಂಟೆಗಳ ಅವಧಿಯದಾಗಿದ್ದು, ಒಟ್ಟು 76 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಈ ಭಾರಿ ಪರೀಕ್ಷೆಯನ್ನು ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸುವ ಮೂಲಕ ನಡೆಸಲಾಗುತ್ತಿದೆ.

ಕ್ಯಾಟ್ 2021 ಪರೀಕ್ಷೆಯ ಅರ್ಜಿ ಸಲ್ಲಿಕೆಯ ಅವಧಿಯು ಸೆಪ್ಟೆಂಬರ್ 22,2021ರ ಸಂಜೆ 5 ಗಂಟೆಗೆ ಕೊನೆಗೊಂಡಿದೆ. ಈ ಭಾರಿ ಪರೀಕ್ಷೆಗೆ ಸುಮಾರು 2.3 ಲಕ್ಷ ಅಭ್ಯರ್ಥಿಗಳು ಹಾಜರಾಗುವ ಸಾಧ್ಯತೆ ಇದೆ. ಪ್ರವೇಶ ಪತ್ರ ಪ್ರಕಟವಾದ ಬಳಿಕ ಡೌನ್‌ಲೋಡ್ ಮಾಡುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ.

ಪ್ರವೇಶ ಪತ್ರ ಡೌನ್‌ಲೋಡ್ ಮಾಡುವುದು ಹೇಗೆ

ಸ್ಟೆಪ್ 1: ಐಐಎಂ ನ ಅಧಿಕೃತ ವೆಬ್‌ಸೈಟ್‌ https://iimcat.ac.in/per/g01/pub/756/ASM/WebPortal/1/index.html?756@@1@@1#! ಗೆ ಭೇಟಿ ನೀಡಿ.
ಸ್ಟೆಪ್ 2: CAT 2021 ಪರೀಕ್ಷೆಯ ಪ್ರವೇಶ ಪತ್ರ ಡೌನ್‌ಲೋಡ್‌ನ ಲಿಂಕ್‌ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಅಭ್ಯರ್ಥಿಗಳು ನಿಮ್ಮ ರಿಜಿಸ್ಟರ್ ನಂಬರ್ ಮತ್ತು ಪಾಸ್‌ವರ್ಡ್‌ ನೀಡಿ ಲಾಗಿನ್ ಆಗಿ
ಸ್ಟೆಪ್ 4: ನಿಮ್ಮ ಪ್ರವೇಶ ಪತ್ರವು ಸ್ಕ್ರೀನ್ ಮೇಲೆ ಲಭ್ಯವಾಗುವುದು ಅದನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್‌ ತೆಗೆದುಕೊಳ್ಳಿ.

 

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪರೀಕ್ಷೆಯ ಪ್ರವೇಶ ಪತ್ರ ಜೊತೆಗೆ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗುವುದು ಕಡ್ಡಾಯವಾಗಿರುತ್ತದೆ. ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುವ ಮುನ್ನ ಪ್ರವೇಶ ಪತ್ರದಲ್ಲಿರುವ ಸೂಚನೆಗಳನ್ನು ಓದಿಕೊಳ್ಳತಕ್ಕದ್ದ

For Quick Alerts
ALLOW NOTIFICATIONS  
For Daily Alerts

English summary
CAT exam 2021 admit card to be release on october 27 in official website. Candidates who applied for this exam, they can download admit card after it released
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X