ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 10 ಮತ್ತು 12ನೇ ತರಗತಿಯ ಮಾದರಿ ಪ್ರಶ್ನೆ ಪತ್ರಿಕೆಯನ್ನು ಬಿಡುಗಡೆ ಮಾಡಿದ್ದು, ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.

ಸಿಬಿಎಸ್ಇ 2020ರ ಫೆಬ್ರವರಿ ತಿಂಗಳಿನಲ್ಲಿ ಬೋರ್ಡ್ ಪರೀಕ್ಷೆಯನ್ನು ನಡೆಸಲಿದೆ ಮತ್ತು ಶೀಘ್ರದಲ್ಲಿ ಪರೀಕ್ಷಾ ದಿನಾಂಕಗಳನ್ನು ಬಿಡುಗಡೆ ಮಾಡಲಿದೆ.
ಇದೀಗ ಅಧಿಕೃತವೆಬ್‌ಸೈಟ್ ನಲ್ಲಿ ಬಂಗಾಳಿ, ಇಂಗ್ಲಿಷ್, ಅರೇಬಿಕ್, ಅಕೌಂಟನ್ಸಿ, ಫಿಸಿಕಲ್ ಸೈನ್ಸ್, ಜಿಯಾಗ್ರಫಿ, ಗಣಿತ ಮತ್ತು ರಸಾಯನಶಾಸ್ತ್ರದ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡುಗಡೆ ಮಾಡಲಾಗಿದೆ. ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಹೋಗಿ ವೀಕ್ಷಿಸಬಹುದು.
2019-20ರಿಂದ 10 ಮತ್ತು 12ನೇ ತರಗತಿಯ ಸರ್ಕಾರಿ ಶಾಲೆಗಳ ಸುಮಾರು 3 ಲಕ್ಷ ವಿದ್ಯಾರ್ಥಿಗಳಿಗೆ ಸಿಬಿಎಸ್‌ಇ ಪರೀಕ್ಷಾ ಶುಲ್ಕವನ್ನು ಪಾವತಿಸುವ ಪ್ರಸ್ತಾಪವನ್ನು ದೆಹಲಿ ಕ್ಯಾಬಿನೆಟ್ ಅಂಗೀಕರಿಸಿದೆ. ಈ ಕ್ರಮದಿಂದ ಸರ್ಕಾರವು ಸುಮಾರು 57 ಕೋಟಿ ರೂ ವೆಚ್ಚವನ್ನು ಭರಿಸಲಿದೆ.
ವಿದ್ಯಾರ್ಥಿಗಳು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ವೀಕ್ಷಿಸಲು ಅಧಿಕೃತ ವೆಬ್‌ಸೈಟ್ http://cbseacademic.nic.in/ ಚೆಕ್ ಮಾಡಿ.


Click it and Unblock the Notifications











