ಕೇಳ್ರಪ್ಪೋ ವಿದ್ಯಾರ್ಥಿಗಳೇ... ಸಿಬಿಎಸ್‍ಇಯಿಂದ ಹೊಸ ರೂಲ್ಸ್... ಅದಕ್ಕೆ ಕಾರಣ ಏನು ಗೊತ್ತಾ?

By Nishmitha

ಸಿಬಿಎಸ್‍ಇ ಇದೀಗ 10ನೇ ತರಗತಿ ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ರೂಲ್ಸ್ ಒಂದು ಜಾರಿಗೊಳಿಸಿದೆ. ನಿಮಗೆ ಗೊತ್ತಿರುವ ಹಾಗೆ ಜಾಯಿಂಟ್ ಎಂಟ್ರೇಸ್ ಎಕ್ಸಾಂ, ನ್ಯಾಷನಲ್ ಎಲಿಜಿಬಿಲಿಟಿ ಕಂ ಎಂಟ್ರೇಸ್ ಟೆಸ್ಟ್, ಕಾಮನ್ ಅಡ್ಮಿಷನ್ ಟೆಸ್ಟ್ ಪರೀಕ್ಷೆಗೆ ತಡವಾಗಿ ಬರುವ ವಿದ್ಯಾರ್ಥಿಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಇದೀಗ ಅದೇ ನಿಯಮ ಸಿಬಿಎಸ್ ಇ 10ನೇ ಹಾಗೂ 12ನೇ ತರಗತಿ ಪರೀಕ್ಷೆಗಳಿಗೂ ಅನ್ವಯಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೇಳ್ರಪ್ಪೋ ವಿದ್ಯಾರ್ಥಿಗಳೇ...  ಸಿಬಿಎಸ್‍ಇಯಿಂದ ಹೊಸ ರೂಲ್ಸ್... ಅದಕ್ಕೆ ಕಾರಣ ಏನು ಗೊತ್ತಾ?

ಸಿಬಿಎಸ್‍ಇ ಪರೀಕ್ಷೆ ವೇಳೆ ಯಾರು 10.05 ಗಂಟೆ ಬಳಿಕ ಬರುವ ವಿದ್ಯಾರ್ಥಿಗಳನ್ನ ಪರೀಕ್ಷೆಗೆ ಬರೆಯಲು ಅವಕಾಶ ನೀಡಲಾಗುವುದಿಲ್ಲ ಎಂದು ತಿಳಿಸಲಾಗಿದೆ. ಟ್ರಾಫಿಕ ಜಾಮ್ ಸೇರಿದಂತೆ ಯಾವುದೇ ಕಾರಣ ನೀಡಿದರೂ ಕೂಡಾ ಈ ಪ್ರವೇಶ ನೀಡದೇ ಈ ನಿಯಮವನ್ನ ಕಡ್ಡಾಯವಾಗಿ ಪಾಲಿಸಲಾಗುವುದು ಎಂದು ತಿಳಿಸಲಾಗಿದೆ.

ಅಷ್ಟೇ ಅಲ್ಲ ಈ ನಿಯಮ ಜಾರಿಗೆ ಕಾರಣ ನೀಡಿರುವ ಬೋರ್ಡ, ಸೆಕ್ಯುರಿಟಿ ಲೆವೆಲ್ ಕಡಿಮೆ ಮಾಡಲು ಹಾಗೂ ಪ್ರಶ್ನಾಪತ್ರಿಕೆ ಲೀಕ್ ಸಂಖ್ಯೆ ಕಡಿಮೆ ಮಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಈ ಮೊದಲು 2018ರ ವರೆಗೆ ಪರೀಕ್ಷಾ ನಿಯಮ ಹೀಗಿತ್ತು. ಪರೀಕ್ಷೆಯು ಬೆಳಗ್ಗೆ 9.30ಕ್ಕೆ ಪ್ರಾರಂಭವಾಗಿ, 10.15 ಕ್ಕೆ ಪ್ರಶ್ನಾಪತ್ರಿಕೆ ನೀಡಲಾಗುವುದು. ಜತೆಗೆ 15 ನಿಮಿಷ ಪ್ರಶ್ನಾಪತ್ರಿಕೆ ಓದಲು ನೀಡಲಾಗುವುದು. ಬಳಿಕ 10.30ಗೆ ಪರೀಕ್ಷೆ ಬರೆಯಲು ಪ್ರಾರಂಭಿಸಬಹುದು. ಆದ್ರೆ ವಿದ್ಯಾರ್ಥಿಗಳು ತಡವಾಗಿ ಪರೀಕ್ಷೆಗೆ ಹಾಜರಾಗುತ್ತಿದ್ದರು. 11.15ಕ್ಕೆ ಪರೀಕ್ಷೆ ಹಾಲ್‍ಗೆ ಹಾಜರಾಗುತ್ತಿದ್ದು, ಇನ್ನು ಮುಂದೆ ಈ ವರ್ತನೆ ವಿರುದ್ಧ ಕಠೀಣ ಕ್ರಮ ಕೈಗೊಂಡು. ತಡವಾಗಿ ಬರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ರವೇಶ ನಿರಾಕರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

For Quick Alerts
ALLOW NOTIFICATIONS  
For Daily Alerts

    English summary
    CBSE has proposed a new rule for the students of class 10 and class 12. As you know that the competitive exams like Joint Entrance Exam (JEE), National Eligibility Cum Entrance Test (NEET) or Common Admission Test (CAT) does not allow the late candidates to appear for the exams

    ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
    Kannada Careerindia

    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more