ಕೇಳ್ರಪ್ಪೋ ವಿದ್ಯಾರ್ಥಿಗಳೇ... ಸಿಬಿಎಸ್‍ಇಯಿಂದ ಹೊಸ ರೂಲ್ಸ್... ಅದಕ್ಕೆ ಕಾರಣ ಏನು ಗೊತ್ತಾ?

ಸಿಬಿಎಸ್‍ಇ ಇದೀಗ 10ನೇ ತರಗತಿ ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ರೂಲ್ಸ್ ಒಂದು ಜಾರಿಗೊಳಿಸಿದೆ.

ಸಿಬಿಎಸ್‍ಇ ಇದೀಗ 10ನೇ ತರಗತಿ ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ರೂಲ್ಸ್ ಒಂದು ಜಾರಿಗೊಳಿಸಿದೆ. ನಿಮಗೆ ಗೊತ್ತಿರುವ ಹಾಗೆ ಜಾಯಿಂಟ್ ಎಂಟ್ರೇಸ್ ಎಕ್ಸಾಂ, ನ್ಯಾಷನಲ್ ಎಲಿಜಿಬಿಲಿಟಿ ಕಂ ಎಂಟ್ರೇಸ್ ಟೆಸ್ಟ್, ಕಾಮನ್ ಅಡ್ಮಿಷನ್ ಟೆಸ್ಟ್ ಪರೀಕ್ಷೆಗೆ ತಡವಾಗಿ ಬರುವ ವಿದ್ಯಾರ್ಥಿಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಇದೀಗ ಅದೇ ನಿಯಮ ಸಿಬಿಎಸ್ ಇ 10ನೇ ಹಾಗೂ 12ನೇ ತರಗತಿ ಪರೀಕ್ಷೆಗಳಿಗೂ ಅನ್ವಯಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೇಳ್ರಪ್ಪೋ ವಿದ್ಯಾರ್ಥಿಗಳೇ...  ಸಿಬಿಎಸ್‍ಇಯಿಂದ ಹೊಸ ರೂಲ್ಸ್... ಅದಕ್ಕೆ ಕಾರಣ ಏನು ಗೊತ್ತಾ?

ಸಿಬಿಎಸ್‍ಇ ಪರೀಕ್ಷೆ ವೇಳೆ ಯಾರು 10.05 ಗಂಟೆ ಬಳಿಕ ಬರುವ ವಿದ್ಯಾರ್ಥಿಗಳನ್ನ ಪರೀಕ್ಷೆಗೆ ಬರೆಯಲು ಅವಕಾಶ ನೀಡಲಾಗುವುದಿಲ್ಲ ಎಂದು ತಿಳಿಸಲಾಗಿದೆ. ಟ್ರಾಫಿಕ ಜಾಮ್ ಸೇರಿದಂತೆ ಯಾವುದೇ ಕಾರಣ ನೀಡಿದರೂ ಕೂಡಾ ಈ ಪ್ರವೇಶ ನೀಡದೇ ಈ ನಿಯಮವನ್ನ ಕಡ್ಡಾಯವಾಗಿ ಪಾಲಿಸಲಾಗುವುದು ಎಂದು ತಿಳಿಸಲಾಗಿದೆ.

ಅಷ್ಟೇ ಅಲ್ಲ ಈ ನಿಯಮ ಜಾರಿಗೆ ಕಾರಣ ನೀಡಿರುವ ಬೋರ್ಡ, ಸೆಕ್ಯುರಿಟಿ ಲೆವೆಲ್ ಕಡಿಮೆ ಮಾಡಲು ಹಾಗೂ ಪ್ರಶ್ನಾಪತ್ರಿಕೆ ಲೀಕ್ ಸಂಖ್ಯೆ ಕಡಿಮೆ ಮಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಈ ಮೊದಲು 2018ರ ವರೆಗೆ ಪರೀಕ್ಷಾ ನಿಯಮ ಹೀಗಿತ್ತು. ಪರೀಕ್ಷೆಯು ಬೆಳಗ್ಗೆ 9.30ಕ್ಕೆ ಪ್ರಾರಂಭವಾಗಿ, 10.15 ಕ್ಕೆ ಪ್ರಶ್ನಾಪತ್ರಿಕೆ ನೀಡಲಾಗುವುದು. ಜತೆಗೆ 15 ನಿಮಿಷ ಪ್ರಶ್ನಾಪತ್ರಿಕೆ ಓದಲು ನೀಡಲಾಗುವುದು. ಬಳಿಕ 10.30ಗೆ ಪರೀಕ್ಷೆ ಬರೆಯಲು ಪ್ರಾರಂಭಿಸಬಹುದು. ಆದ್ರೆ ವಿದ್ಯಾರ್ಥಿಗಳು ತಡವಾಗಿ ಪರೀಕ್ಷೆಗೆ ಹಾಜರಾಗುತ್ತಿದ್ದರು. 11.15ಕ್ಕೆ ಪರೀಕ್ಷೆ ಹಾಲ್‍ಗೆ ಹಾಜರಾಗುತ್ತಿದ್ದು, ಇನ್ನು ಮುಂದೆ ಈ ವರ್ತನೆ ವಿರುದ್ಧ ಕಠೀಣ ಕ್ರಮ ಕೈಗೊಂಡು. ತಡವಾಗಿ ಬರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ರವೇಶ ನಿರಾಕರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

For Quick Alerts
ALLOW NOTIFICATIONS  
For Daily Alerts

English summary
CBSE has proposed a new rule for the students of class 10 and class 12. As you know that the competitive exams like Joint Entrance Exam (JEE), National Eligibility Cum Entrance Test (NEET) or Common Admission Test (CAT) does not allow the late candidates to appear for the exams
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X