CBSE 2020: 10 ಮತ್ತು 12ನೇ ತರಗತಿ ಪರೀಕ್ಷೆಗಳ ಹೊಸ ದಿನಾಂಕ ಪ್ರಕಟ

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್ಇ) 10 ನೇ ತರಗತಿ ಮತ್ತು 12ನೇ ತರಗತಿ ಬಾಕಿ ಉಳಿದ ಪರೀಕ್ಷೆಯನ್ನು ಜುಲೈ 1 ರಿಂದ ಜುಲೈ 15, 2020 ರವರೆಗೆ ನಡೆಸಲಾಗುವುದು ಎಂದು ಟ್ವೀಟ್ ಮೂಲಕ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ತಿಳಿಸಿದ್ದಾರೆ.

ಸಿಬಿಎಸ್ಇ ಹೊಸ ಪರೀಕ್ಷಾ ದಿನಾಂಕ ರಿಲೀಸ್

ಉನ್ನತ ಮೂಲಗಳ ಪ್ರಕಾರ 12ನೇ ತರಗತಿ ಬಾಕಿ ಉಳಿದ ವಿಷಯಗಳ ಪರೀಕ್ಷೆಯನ್ನು ಜೆಇಇ ಮೇನ್ಸ್ ಪರೀಕ್ಷೆಗೆ ಮುನ್ನ ಪೂರ್ಣಗೊಳಿಸಲು ನಿರ್ಧರಿಸಲಾಗಿದೆಯಂತೆ. ನೀಟ್ ಪರೀಕ್ಷೆಯನ್ನು ಐದು ದಿನಗಳ ಕಾಲ ಜುಲೈ 18 ರಿಂದ 23 ರವರೆಗೆ ನಡೆಸಲು ಈಗಾಗಲೇ ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಅದರಂತೆಯೇ ಈ ದಿನಾಂಕದೊಳಗೆ ಪರೀಕ್ಷೆ ಮುಗಿಸಲು ನಿರ್ಧಾರ ಕೈಗೊಳ್ಳಲಾಗಿದೆಯಂತೆ. ಈ ಪರೀಕ್ಷೆಗಳ ಫಲಿತಾಂಶವನ್ನು ಆಗಸ್ಟ್ನಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಈಗಾಗಲೇ ನಡೆದಿರುವ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗಿದೆ. ಬಾಕಿ ಉಳಿದ ಪತ್ರಿಕೆಗಳ ದಿನಾಂಕಗಳನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು ಎಂಬ ಮಾಹಿತಿಗಳು ಉನ್ನತ ಮೂಲಗಳಿಂದ ತಿಳಿದಿವೆ.

ಏಪ್ರಿಲ್ 1 ರಂದು ಸುಮಾರು 90 ವಿಷಯಗಳ ಪೈಕಿ 29 ವಿಷಯಗಳಿಗೆ ಪರೀಕ್ಷೆ ನಡೆಸುವುದಾಗಿ ಸಿಬಿಎಸ್ಇ ಹೇಳಿತ್ತು. ಆದರೆ ದೇಶದಲ್ಲಿ ಲಾಕ್ಡೌನ್ ಹಿನ್ನೆಲೆ ಯಾವುದೇ ಪರೀಕ್ಷೆಗಳನ್ನು ಜರುಗಿಸಲು ಸಾಧ್ಯವಾಗಲಿಲ್ಲ. ಸಿಬಿಎಸ್ಇ 10 ನೇ ತರಗತಿ ಪರೀಕ್ಷೆಯನ್ನು ಈಶಾನ್ಯ ದೆಹಲಿ ಹೊರತು ಪಡಿಸಿ, ಉಳಿದ ಎಲ್ಲಾ ಪ್ರದೇಶಗಳ ವಿದ್ಯಾರ್ಥಿಗಳಿಗೆ ಕೊರೊನಾ ಸಮಸ್ಯೆಯ ಹಿನ್ನೆಲೆ ರದ್ದು ಮಾಡಲಾಗಿದೆ.

More News  

For Quick Alerts
ALLOW NOTIFICATIONS  
For Daily Alerts

English summary
CBSE class 10 and 12 new exam dates has been announced.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+