CBSE CISCE Result 2022 : ಬೋರ್ಡ್ ಪರೀಕ್ಷೆಗಳ ಫಲಿತಾಂಶ ಜು.15ರೊಳಗೆ ಪ್ರಕಟ ನಿರೀಕ್ಷೆ

ಸಿಬಿಎಸ್ಇ ಸಿಐಎಸ್‌ಸಿಇ ಬೋರ್ಡ್ ಪರೀಕ್ಷೆಯ ಫಲಿತಾಂಶ ಜು.15ರೊಳಗೆ ಪ್ರಕಟ ಸಾಧ್ಯತೆ

ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ 10 ಮತ್ತು 12ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶವನ್ನು ಜುಲೈ 15 ರೊಳಗೆ ಪ್ರಕಟಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಮೌಲ್ಯಮಾಪನ ಪ್ರಕ್ರಿಯೆ ಈಗಾಗಲೇ ಪ್ರಾರಂಭಗೊಂಡಿದ್ದು, ಜುಲೈ 15ರೊಳಗೆ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ. ಫಲಿತಾಂಶ ಪ್ರಕಟವಾದ ಬಳಿಕ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ವೀಕ್ಷಿಸಬಹುದು.

ಸಿಬಿಎಸ್ಇ ಸಿಐಎಸ್‌ಸಿಇ ಬೋರ್ಡ್ ಪರೀಕ್ಷೆಯ ಫಲಿತಾಂಶ ಜು.15ರೊಳಗೆ ಪ್ರಕಟ ಸಾಧ್ಯತೆ

COVID-19 ಸಾಂಕ್ರಾಮಿಕದ ದೃಷ್ಟಿಯಿಂದ 2021-22 ರಲ್ಲಿ 10 ಮತ್ತು 12 ನೇ ತರಗತಿಗಳ ಬೋರ್ಡ್ ಪರೀಕ್ಷೆಗಳಿಗೆ ಶೈಕ್ಷಣಿಕ ಅವಧಿಯನ್ನು ವಿಭಜಿಸುವುದು, ಎರಡು ಅವಧಿಯ ಅಂತ್ಯದ ಪರೀಕ್ಷೆಗಳನ್ನು ನಡೆಸುವುದು ಮತ್ತು ಪಠ್ಯಕ್ರಮವನ್ನು ತರ್ಕಬದ್ಧಗೊಳಿಸುವುದು ವಿಶೇಷ ಮೌಲ್ಯಮಾಪನ ಯೋಜನೆಯ ಭಾಗವಾಗಿತ್ತು ಎಂದು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಘೋಷಿಸಿತು. ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) ಇದನ್ನು ಅನುಸರಿಸಿತ್ತು. 10 ನೇ ತರಗತಿ CBSE ಪರೀಕ್ಷೆಗಳು ಮೇ 24 ರಂದು ಮುಕ್ತಾಯಗೊಂಡಿದ್ದರೆ, 12 ನೇ ತರಗತಿ ಪರೀಕ್ಷೆಗಳು ಜೂನ್ 15 ರಂದು ಕೊನೆಗೊಂಡಿವೆ.

10 ನೇ ತರಗತಿಯ CISCE ಪರೀಕ್ಷೆಗಳು ಮೇ 20 ರಂದು ಮತ್ತು 12 ನೇ ತರಗತಿಯ ಪರೀಕ್ಷೆಗಳು ಜೂನ್ 13 ರಂದು ಮುಕ್ತಾಯಗೊಂಡವು. ಬಹುತೇಕ ರಾಜ್ಯ ಮಂಡಳಿಗಳು ತಮ್ಮ ಫಲಿತಾಂಶಗಳನ್ನು ಪ್ರಕಟಿಸಿವೆ. ಸಾಂಕ್ರಾಮಿಕ ರೋಗದ ದೃಷ್ಟಿಯಿಂದ CBSE ಮತ್ತು CISCE ಗಾಗಿ 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳ ವೇಳಾಪಟ್ಟಿಯನ್ನು ಅದರ ಸಾಮಾನ್ಯ ವೇಳಾಪಟ್ಟಿಯಿಂದ ವಿಳಂಬಗೊಳಿಸಲಾಯಿತು.

More News  

For Quick Alerts
ALLOW NOTIFICATIONS  
For Daily Alerts

English summary
CBSE CISCE board exam results to be release by july 15.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+