ಸಿಬಿಎಸ್‌ಇ 10 ಮತ್ತು 12ನೇ ತರಗತಿ ಪರೀಕ್ಷೆಗಳು ರದ್ದು!

ಜುಲೈ 1 ರಿಂದ 15ರ ವರೆಗೆ ನಡೆಯಬೇಕಾಗಿದ್ದ ಸಿಬಿಎಸ್ಇ 10 ಮತ್ತು 12ನೇ ತರಗತಿಯ ಬಾಕಿ ಉಳಿದ ವಿಷಯಗಳ ಪರೀಕ್ಷೆಯನ್ನು ರದ್ದುಪಡಿಸಲಾಗಿದೆ ಎಂದು ಸಿಬಿಎಸ್ಇ ಮತ್ತು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ಇಂದು ತಿಳಿಸಿವೆ.

ಜುಲೈ 1ರಿಂದ ನಡೆಯಲಿದ್ದ ಸಿಬಿಎಸ್ಇ ಪರೀಕ್ಷೆಗಳು ಕ್ಯಾನ್ಸಲ್!

10ನೇ ತರಗತಿ ಪರೀಕ್ಷೆಯನ್ನು ಪೂರ್ಣ ಪ್ರಮಾಣದಲ್ಲಿ ರದ್ದುಗೊಳಿಸಲಾಗಿದೆ. ಆದರೆ 12ನೇ ತರಗತಿ ಪರೀಕ್ಷೆಯನ್ನು ತಾತ್ಕಲಿಕವಾಗಿ ರದ್ದು ಮಾಡಲಾಗಿದ್ದು, ಸಿಬಿಎಸ್ಇ ಆಡಳಿತ ಮಂಡಳಿ ಮುಂದೆ ಸುಪ್ರೀಂಕೋರ್ಟ್ ಎರಡು ಆಯ್ಕೆ ನೀಡಿದೆ. ಕೊರೊನಾ ಭೀತಿ ಎಲ್ಲವೂ ಕಡಿಮೆ ಆದ್ಮೇಲೆ ಪರೀಕ್ಷೆ ನಡೆಸುವುದಾದರೆ ಆಯೋಜಿಸಬಹುದು ಅಥವಾ ಈ ಹಿಂದಿನ ಪರೀಕ್ಷೆಗಳ ಆಧಾರದ ಮೇಲೆ ಗ್ರೇಡ್ ನೀಡಿ ತೇರ್ಗಡೆ ಮಾಡುವುದಾರೇ ಮಾಡಬಹುದು ಎಂದು ತಿಳಸಿದೆ. ಈ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡಿ ಎಂದು ಸಿಬಿಎಸ್ಇ ಆಡಳಿತ ಮಂಡಳಿಗೆ ಕೋರ್ಟ್ ಸೂಚಿಸಿದೆ.

ಪರಿಷ್ಕೃತ ವೇಳಾಪಟ್ಟಿಯ ಅನುಸಾರ ಜುಲೈ 1 ರಿಂದ ಜುಲೈ 15ನೇ ತಾರೀಖಿನವರೆಗೂ ಸಿಬಿಎಸ್ಇ 10ನೇ ಮತ್ತು 12ನೇ ತರಗತಿ ಪರೀಕ್ಷೆ ನಡೆಸಲು ತೀರ್ಮಾನಿಸಿ ವೇಳಾಪಟ್ಟಿ ನಿಗಧಿ ಮಾಡಲಾಗಿತ್ತು ಆದರೆ ಇದೀಗ ಕೋವಿಡ್ ವೈರಸ್ ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಆರಂಭದಲ್ಲಿ ಮಾರ್ಚ್ 19 ರಿಂದ ಮಾರ್ಚ್ 31 ರವರೆಗಿನ ಪರೀಕ್ಷೆ ದಿನಾಂಕ ನಿಗದಿಯಾಗಿತ್ತು. ಕೊರೋನಾದಿಂದ ಘೋಷಿಸಲಾದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅದು ಏಪ್ರಿಲ್‌ಗೆ ಮುಂದೂಡಿಕೆಯಾಗಿತ್ತು. ಅದಾದ ಬಳಿಕ ಜುಲೈ 1ರಿಂದ ನಡೆಸುವುದಾಗಿ ತಿಳಿಸಲಾಗಿತ್ತು. ಆದರೆ ಕೊರೋನಾ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗುತ್ತಿದೆ.

More News  

For Quick Alerts
ALLOW NOTIFICATIONS  
For Daily Alerts

English summary
CBSE Cancelled class 10 and class 12 exams due to covid 19 effect.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+