ಸಿಬಿಎಸ್ಇ 10ನೇ ತರಗತಿ ಡಿಜಿಟಲ್ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡುವುದು ಹೇಗೆ ಎಂದು ಇಲ್ಲಿ ತಿಳಿಯಿರಿ

ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯು (ಸಿಬಿಎಸ್‌ಇ) 1೦ನೇ ತರಗತಿ ಫಲಿತಾಂಶವನ್ನು ಇಂದು ಪ್ರಕಟ ಮಾಡಿದೆ. ಸಿಬಿಎಸ್ಇ ಡಿಜಿಟಲ್‌ ಮಾರ್ಕ್‌ಶೀಟ್‌ ಮತ್ತು ಸರ್ಟಿಫಿಕೇಟ್‌ ಡಿಜಿಲಾಕರ್‌ ಮೊಬೈಲ್‌ ಅಪ್ಲಿಕೇಶನ್‌ ಮತ್ತು ಡಿಜಿಲಾಕರ್‌ ಅಧಿಕೃತ ವೆಬ್‌ಸೈಟ್‌ ಎರಡರ ಮೂಲಕ ಲಭ್ಯವಾಗಲಿದ್ದು, ವಿದ್ಯಾರ್ಥಿಗಳು ಪಡೆದುಕೊಳ್ಳಬಹುದು.

ಸಿಬಿಎಸ್ಇ ಡಿಜಿಟಲ್ ಅಂಕಪಟ್ಟಿ ಡೌನ್‌ಲೋಡ್ ಮಾಡುವುದು ಹೇಗೆ ?

ಡಿಜಿಲಾಕರ್‌ನಲ್ಲಿ ಲಭ್ಯವಾಗುವ ಅಂಕಪಟ್ಟಿ ಮತ್ತು ಸರ್ಟಿಫಿಕೇಟ್‌ಗಳು ಮಾಹಿತಿ ತಂತ್ರಜ್ಞಾನ ಕಾಯ್ದೆ 2000'ದ ಪ್ರಕಾರ ಕಾನೂನಿನ ಪ್ರಕಾರ ಮಾನ್ಯವಾಗಿವೆ. ವಿದ್ಯಾರ್ಥಿಗಳು ತಮ್ಮ ಸ್ಮಾರ್ಟ್‌ಫೋನ್‌ ಅಥವಾ ಪೋಷಕರ ಸ್ಮಾರ್ಟ್‌ಫೋನ್‌ಗೆ ಡಿಜಿಲಾಕರ್‌ ಅಪ್ಲಿಕೇಶನ್‌ ಅನ್ನು ಲಿಂಕ್‌ https://digilocker.gov.in/installapp.php ಮೇಲೆ ಕ್ಲಿಕ್ ಮಾಡಿ ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್ ಮಾಡಿಕೊಳ್ಳಿ.

ಡಿಜಿಲಾಕರ್ ಎಂದರೇನು ? :

ಇಲೆಕ್ಟ್ರಾನಿಕ್ಸ್ ಅಂಡ್ ಇನ್ಫಾರ್ಮೇಶನ್‌ ಟೆಕ್ನಾಲಜಿ ಡಿಪಾರ್ಟ್‌ಮೆಂಟ್‌ ಅಭಿವೃದ್ಧಿಪಡಿಸಲಾದ ಡಿಜಿಲಾಕರ್‌ ಅಪ್ಲಿಕೇಶನ್‌ಗೆ, ಸಿಬಿಎಸ್‌ಇ'ಯು ಡಿಜಿಟಲ್ ಸಹಿ ಮಾಡಿದ ವಿದ್ಯಾರ್ಥಿಗಳ ಅಂಕಪಟ್ಟಿ ಮತ್ತು ಸರ್ಟಿಫಿಕೇಟ್‌ಗಳನ್ನು ಅಪ್‌ಲೋಡ್ ಮಾಡಲಾಗಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬಹುದು. ಅಂಕಪಟ್ಟಿಯನ್ನು ಡೌನ್‌ಲೋಡ್‌ ಮಾಡಿ ಪ್ರಿಂಟ್‌ ಅನ್ನು ತೆಗೆದುಕೊಂಡು ಎಲ್ಲಿ ಬೇಕಾದರೂ ಅಧಿಕೃತವಾಗಿ ಬಳಕೆ ಮಾಡಬಹುದು.

ಡಿಜಿಲಾಕರ್ ನಲ್ಲಿ ಲಾಗಿನ್ ಆಗುವುದು ಹೇಗೆ ?:

ವಿದ್ಯಾರ್ಥಿಗಳ ಡಿಜಿಲಾಕರ್‌ ಖಾತೆಯನ್ನು ಸಿಬಿಎಸ್‌ಇ'ಯೇ ಕ್ರಿಯೇಟ್‌ ಮಾಡಿದೆ. ವಿದ್ಯಾರ್ಥಿಗಳು ಸಿಬಿಎಸ್‌ಇಯೊಂದಿಗೆ ರಿಜಿಸ್ಟರ್‌ ಮಾಡಲಾದ ಮೊಬೈಲ್‌ ನಂಬರ್‌ಗೆ ಸ್ವೀಕರಿಸಿದ ಮೇಸೇಜ್‌ನಲ್ಲಿ ನೀಡಿದ ಅಧಿಕೃತ ಲಿಂಕ್‌ ಅನ್ನು ಕ್ಲಿಕ್ ಮಾಡಿ ಅಥವಾ https://digilocker.gov.in/installapp.php ಕ್ಲಿಕ್ ಮಾಡಿ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಳ್ಳಿ. - ನಂತರ ಸಿಬಿಎಸ್‌ಇ ಯೊಂದಿಗೆ ರಿಜಿಸ್ಟರ್‌ ಮಾಡಿದ ಮೊಬೈಲ್‌ ನಂಬರ್, ಓಟಿಪಿ ಮತ್ತು ವಿದ್ಯಾರ್ಥಿಯ ರಿಜಿಸ್ಟರ್‌ ನಂಬರ್‌ನ ಕೊನೆ 6 ಡಿಜಿಟ್‌ ನಂಬರ್‌ ಅನ್ನು ಪಾಸ್‌ವರ್ಡ್ ಆಗಿ ನೀಡುವ ಮೂಲಕ ಲಾಗಿನ್‌ ಆಗಿ, ಮಾರ್ಕ್ಸ್‌ ಶೀಟ್‌ ಪಡೆಯಬಹುದಾಗಿದೆ.

More News  

For Quick Alerts
ALLOW NOTIFICATIONS  
For Daily Alerts

English summary
CBSE class 10 results announced today. How to download digital marksheet read on.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+