CBSE Class 10 Term 1 Result : ಸಿಬಿಎಸ್ಇ 10ನೇ ತರಗತಿ ಟರ್ಮ್ 1ರ ಫಲಿತಾಂಶ ಔಟ್

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 10ನೇ ತರಗತಿಯ ಟರ್ಮ್ 1 ಪರೀಕ್ಷೆಯ ಫಲಿತಾಂಶವನ್ನು ಪ್ರಕಟ ಮಾಡಲಾಗಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಇದೀಗ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು.

ಸಿಬಿಎಸ್ಇ 10ನೇ ತರಗತಿ ಟರ್ಮ್ 1ರ ಫಲಿತಾಂಶ ಪ್ರಕಟ

ಸಿಬಿಎಸ್ಇ 10ನೇ ತರಗತಿ ಫಲಿತಾಂಶಗಳನ್ನು ಈ ಭಾರಿ ಅಧಿಕೃತ ವೆಬ್‌ಸೈಟ್ cbseresults.nic.in ನಲ್ಲಿ ಬಿಡುಗಡೆ ಮಾಡಲಾಗಿಲ್ಲ ಬದಲಾಗಿ 10 ನೇ ತರಗತಿಯ ಟರ್ಮ್ 1 ಫಲಿತಾಂಶವನ್ನು ಸ್ಕೋರ್‌ಕಾರ್ಡ್‌ನೊಂದಿಗೆ ಪ್ರತ್ಯೇಕ ಶಾಲೆಗೆ ಮೇಲ್ ಮಾಡಲಾಗಿದೆ. ಸದ್ಯಕ್ಕೆ ಸಿಬಿಎಸ್ಇ 12 ತರಗತಿ ಟರ್ಮ್ 1 ಫಲಿತಾಂಶದಲ್ಲಿ ಯಾವುದೇ ನವೀಕರಣವಿಲ್ಲ.

ಈ ಭಾರಿ ಮಂಡಳಿಯು 10 ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶಗಳನ್ನು ಇಮೇಲ್ ಮೂಲಕ ಶಾಲೆಗಳೊಂದಿಗೆ ಹಂಚಿಕೊಳ್ಳಲು ನಿರ್ಧರಿಸಿದೆ. ಫಲಿತಾಂಶಗಳನ್ನು ಡೌನ್‌ಲೋಡ್ ಮಾಡಿ ಮತ್ತು ಪ್ರಕ್ರಿಯೆಗೊಳಿಸಿದ ನಂತರ ಶಾಲೆಗಳು ತಮ್ಮ ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು ಕಂಪೈಲ್ ಮಾಡಲು ಮತ್ತು ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಅದಲ್ಲದೇ cbseresults.nic.in ನಲ್ಲಿ ಫಲಿತಾಂಶಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲು ಮಂಡಳಿಯು ನಿರೀಕ್ಷಿಸಿದೆ.

ಸಿಬಿಎಸ್ಇ 10ನೇ ತರಗತಿ ಫಲಿತಾಂಶಗಳನ್ನು ಶಾಲೆಗಳಿಗೆ ಮೇಲ್ ಮೂಲಕ ತಿಳಿಸಲಾಗಿದ್ದು, ವಿದ್ಯಾರ್ಥಿಗಳು ತಮ್ಮ ಶಾಲೆಗಳನ್ನು ಸಂಪರ್ಕಿಸುವ ಮೂಲಕ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು. ಶಾಲೆಗಳು ಅಂಕಗಳನ್ನು ಪ್ರಕ್ರಿಯೆಗೊಳಿಸಲು ಮತ್ತು ವಿದ್ಯಾರ್ಥಿಗಳಿಗೆ ಅವರ ಸ್ಕೋರ್ ಕಾರ್ಡ್ ಅನ್ನು ಹಂಚಲು ಕೆಲವು ಸಮಯದ ಅಗತ್ಯವಿದೆ ಎಂಬುದನ್ನು ವಿದ್ಯಾರ್ಥಿಗಳು ನೆನಪಿನಲ್ಲಿಟ್ಟುಕೊಳ್ಳಬೇಕು. ಹೀಗಾಗಿ ವಿದ್ಯಾರ್ಥಿಗಳು ತಾಳ್ಮೆಯಿಂದ ಇರುವಂತೆ ಸಿಬಿಎಸ್ಇ ಮನವಿ ಮಾಡಿದೆ.

ನವೆಂಬರ್-ಡಿಸೆಂಬರ್‌ನಲ್ಲಿ ನಡೆದ 10ನೇ ಮತ್ತು 12ನೇ ತರಗತಿ ಟರ್ಮ್ 1ರ ಪರೀಕ್ಷೆಗಳಿಗೆ 36 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಅದಲ್ಲದೆಯೇ ಸಿಬಿಎಸ್ಇ ಟರ್ಮ್ 2 ಪರೀಕ್ಷೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಸಿಬಿಎಸ್ಇ 10ನೇ ತರಗತಿ ಟರ್ಮ್‌ 2 ಬೋರ್ಡ್‌ ಪರೀಕ್ಷೆಯು ಏಪ್ರಿಲ್‌ 26 ರಿಂದ ಮೇ 24 ವರೆಗೆ ನಡೆಸಲಿದೆ. ಸಿಬಿಎಸ್ಇ 12ನೇ ತರಗತಿ ಟರ್ಮ್‌ 2 ಬೋರ್ಡ್‌ ಪರೀಕ್ಷೆಯು ಏಪ್ರಿಲ್‌ 26 ರಿಂದ ಜೂನ್‌ 15, 2022 ರವರೆಗೆ ನಡೆಯಲಿದೆ. ಬೋರ್ಡ್ ಪರೀಕ್ಷೆಗಳು ಅನುಮೋದಿತ ಪರೀಕ್ಷಾ ಕೇಂದ್ರಗಳಲ್ಲಿ ಆಫ್‌ಲೈನ್ ಸ್ವರೂಪದಲ್ಲಿ ನಡೆಯಲಿದೆ. ಪರೀಕ್ಷೆಗಳು ದೀರ್ಘ ಮತ್ತು ಕಿರು ರೂಪದ ಪ್ರಶ್ನೆಗಳೊಂದಿಗೆ ವಿವರಣಾತ್ಮಕ ಸ್ವರೂಪವನ್ನು ಅನುಸರಿಸಲಿದೆ. ಹೆಚ್ಚಿನ ಮಾಹಿತಿಗಾಗಿ ಆಗಾಗ್ಗೆ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡುತ್ತಿರತಕ್ಕದ್ದು.

More News  

For Quick Alerts
ALLOW NOTIFICATIONS  
For Daily Alerts

English summary
CBSE released class 10 term 1 results. Exam results shared with schools.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+